Advertisement

ಬೆಂಗಳೂರಿನಲ್ಲಿ ಕೊಹ್ಲಿ ಪಡೆ ಅಭ್ಯಾಸ ಆರಂಭ

03:45 AM Mar 02, 2017 | |

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ ಹೀನಾಯ ಸೋಲುಂಡಿರುವ ಭಾರತ ಇದೀಗ ಉದ್ಯಾನನಗರಿ ಬೆಂಗಳೂರಿನಲ್ಲಿ ಮಾ.4ರಿಂದ ಆರಂಭವಾಗಲಿರುವ 2ನೇ ಟೆಸ್ಟ್‌ ಪಂದ್ಯದತ್ತ ಚಿತ್ತ ಹರಿಸಿದೆ. ಮಂಗಳವಾರ ಬೆಂಗಳೂರಿಗೆ ಆಗಮಿಸಿರುವ ಭಾರತ ತಂಡದ ಸದಸ್ಯರು ಬುಧವಾರ ಬೆಳಗ್ಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು. 

Advertisement

ತಂಡದ ಕೆಲ ಆಟಗಾರರು ನೆಟ್‌ನಲ್ಲಿ ಭಾಗವಹಿಸಿದ್ದರು. ಕಠಿಣ ಪರಿಶ್ರಮ ವಹಿಸಿ ಅಭ್ಯಾಸ ನಡೆಸಿದರು. ಕೊಹ್ಲಿ  ಪಡೆಗೆ ಬೆಂಗಳೂರು ಟೆಸ್ಟ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದೆ. ಮೊದಲ  ಟೆಸ್ಟ್‌ನಲ್ಲಿ ಸೋತಿರುವುದರಿಂದ ಭಾರತ 4 ಪಂದ್ಯಗಳ ಸರಣಿಯಲ್ಲಿ 1-0 ಹಿನ್ನಡೆಯಲ್ಲಿದೆ. ಬೆಂಗಳೂರು ಪಂದ್ಯದಲ್ಲಿ ಗೆಲ್ಲಲೇಬೇಕು ಎನ್ನುವ ಒತ್ತಡದಲ್ಲಿದೆ ಭಾರತ ತಂಡ ಇರುವುದರಿಂದ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next