Advertisement

ನಿಯಮ ಮೀರಿ ಪತ್ನಿಯೊಂದಿಗಿದ್ದ ಭಾರತದ ಕ್ರಿಕೆಟಿಗ ಯಾರು?

01:16 PM Jul 22, 2019 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರರೊಬ್ಬರು ವಿಶ್ವಕಪ್‌ ವೇಳೆ ನಿಯಮ ಉಲ್ಲಂಘಿಸಿರುವ ಗಂಭೀರ ಆರೋಪಕ್ಕೆ ಸಿಲುಕಿದ್ದಾರೆ.

Advertisement

ವಿಶ್ವಕಪ್‌ ಆರಂಭಕ್ಕೂ ಮೊದಲೇ ಕ್ರಿಕೆಟಿಗರ ಪತ್ನಿಯರಿಗೆ ತಂಡದೊಂದಿಗೆ ಇರಲು 15 ದಿನ ಮಾತ್ರ ಕಾಲಾವಕಾಶ ನೀಡಲಾಗಿತ್ತು. ಈ ನಿಯಮ ಪಾಲಿಸುವಂತೆ ಬಿಸಿಸಿಐ ಕಟ್ಟುನಿಟ್ಟಾಗಿ ಆದೇಶಿಸಿತ್ತು. ಆದರೆ ತಂಡದಲ್ಲಿದ್ದ ಹಿರಿಯ ಆಟಗಾರರೊಬ್ಬರು ಎಲ್ಲ ನಿಯಮ ಗಾಳಿಗೆ ತೂರಿ ವಿಶ್ವಕಪ್‌ ವೇಳೆ ಬರೋಬ್ಬರಿ 7 ವಾರವೂ ಪತ್ನಿಯೊಂದಿಗೆ ಇದ್ದರು. ಈ ವೇಳೆ ಬಿಸಿಸಿಐ, ತಂಡದ ನಾಯಕ ಅಥವಾ ಕೋಚ್‌ ಜತೆಗೂ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ.

ದೂರು ನೀಡಲು ನಿರ್ಧಾರ
ಈ ಕುರಿತಂತೆ ಬಿಸಿಸಿಐ ಆಡಳಿತಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಲಾಗಿದೆ. ಆದರೆ ಆ ಹಿರಿಯ ಆಟಗಾರ ಯಾರು ಎನ್ನುವುದರ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ಶಿಸ್ತು ಉಲ್ಲಂಘಿಸಿದ ಆಟಗಾರನಿಗೆ ಬಿಸಿಸಿಐನಿಂದ ಕಠಿನ ಶಿಕ್ಷೆ ಎದುರಾಗುವ ಸಾಧ್ಯತೆ ಇದೆ.

ತಂಡದ ಆಡಳಿತ ವ್ಯವಸ್ಥಾಪಕರಾದ ಸುನೀಲ್‌ ಸುಬ್ರಹ್ಮಣ್ಯ ಅವರು ಇದಕ್ಕೆಲ್ಲ ಏಕೆ ಅವಕಾಶ ಮಾಡಿಕೊಟ್ಟರು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.

ವಿಶ್ವಕಪ್‌ ಆರಂಭಕ್ಕೂ ಮೊದಲು ತಂಡದ ನಾಯಕ ವಿರಾಟ್‌ ಕೊಹ್ಲಿ ಆಟಗಾರರ ಪತ್ನಿ ಅಥವಾ ಗೆಳತಿಯ ರಿಗೆ ಪೂರ್ಣ ವಿಶ್ವಕಪ್ ಕೂಟ ಮುಗಿಯುವ ತನಕ ಆಟಗಾರರೊಂದಿಗೆ ಇರಲು ಅವಕಾಶ ಮಾಡಿಕೊಡಬೇಕು ಎಂದು ಬಿಸಿಸಿಐಗೆ ಮನವಿ ಮಾಡಿದ್ದರು. ಇದನ್ನು ಬಿಸಿಸಿಐ ತಿರಸ್ಕರಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next