Advertisement

ಹಬ್ಬದ ವಾಹನ…

10:48 AM Mar 17, 2018 | |

ಯುಗಾದಿಗೆ ಹೊಸ ವಾಹನ ಖರೀದಿಸುವ ಉತ್ಸಾಹದಲ್ಲಿರುತ್ತೇವೆ. ಯಾವ ಬೈಕ್‌-ಕಾರು ಉತ್ತಮ? ಯಾವುದು ಅತ್ಯುತ್ತಮ? ಯಾಕೆ, ಏನು? ಎನ್ನುವುದಕ್ಕೆ ಇಲ್ಲೊಂದಿಷ್ಟು ಮಾಹಿತಿ ಇದೆ. 

Advertisement

ಭಾರತದ ಕಾರು ಮಾರುಕಟ್ಟೆಯ ದಿಗ್ಗಜ ಮಾರುತಿ ಸುಜುಕಿ 2018ರಲ್ಲಿ ತನ್ನ ಮಿನಿ ಬಜೆಟ್‌ನ ಕಾರುಗಳಾದ ಆಲ್ಟೋ 800, ಕೆ10, ಸ್ವಿಫ್ಟ್, ನ್ಯೂ ವ್ಯಾಗನ್‌ಆರ್‌, ಇಗ್ನಿàಸ್‌, ಬಲೆನೋ, ಸೆಲೆರಿಯೋ, ಸಿಯಾಜ್‌ಗಳಂಥ ಕಾರುಗಳ ಬೆಲೆಯನ್ನು ಮೂರರಿಂದ ಏಳೆಂಟು ಲಕ್ಷ ರೂ. ಇರುವಂತೆಯೇ ನೋಡಿಕೊಂಡು ಹೊಸ ವೇರಿಯಂಟ್‌ಗಳನ್ನು ಪರಿಚಯಿಸಿದೆ. ಆದರೆ ಟೊಯೋಟಾ ಕಂಪನಿ ಎಟಿಯೋಸ್‌, ಎಟಿಯೋಸ್‌ ಕ್ರಾಸ್‌, ಲಿವಾದಂತಹ ಮಿನಿ ಕಾರುಗಳನ್ನು ಪರಿಚಯಿಸಿದ್ದರೆ, ಟಾಟಾ ಕಂಪನಿ ಇಂಡಿಕಾ, ಜೆಸ್ಟ್‌, ಟಿಯಾಗೋ, ಟಿಗಾರ್‌ನಂತಹ ಕಾರುಗಳ ಜತೆಗೆ ಹೆಚ್ಚುಕಡಿಮೆ ಅದೇ ಬೆಲೆಯಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ನೆಕ್ಸಾನ್‌ ಪರಿಚಯಿಸಿದೆ. ನೆಕ್ಸಾನ್‌ ಒಂದೊಳ್ಳೆ ಆಯ್ಕೆಯೂ ಹೌದು.

ಅಂತೆಯೇ ಮಾರುತಿಗೆ ಪ್ರಬಲ ಸ್ಪರ್ಧೆ ನೀಡುತ್ತಿರುವ ಹ್ಯುಂಡೈ ತನ್ನ ಜನಪ್ರಿಯ ಕಾರುಗಳಾದ ಐ10, ಐ20, ಇಯಾನ್‌, ಎಕ್ಸೆಂಟ್‌, ವೆರ್ನ ಕಾರುಗಳ ಹೊಸ ವೇರಿಯಂಟ್‌ ಪರಿಚಯಿಸಿದೆ. ಎಲೈಟ್‌ ಐ20 ವೇರಿಯಂಟ್‌ ಕೂಡ ಮಾರುಕಟ್ಟೆಯಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ಕಾರು. ಇದು ಒಳ್ಳೆಯ ಆಯ್ಕೆಯೂ ಆಗಿದೆ. ಫೋರ್ಡ್‌ ಕೂಡ ತನ್ನ ಈವರೆಗಿನ ಜನಪ್ರಿಯ ಕಾರುಗಳಾದ ಈಕೋ ನ್ಪೋರ್ಟ್ಸ್, ಫಿಗೋ, ಏಸ್ಪೈರ್‌ ಕಾರುಗಳ ಹೊಸ ವೇರಿಯಂಟ್‌ಗಳನ್ನು ಪರಿಚಯಿಸುತ್ತಿದೆ. ರೆನೋ ಕಂಪನಿ ಕ್ಷಿಡ್‌, ಡಸ್ಟರ್‌ ಕಾರುಗಳ ಬ್ರ್ಯಾಂಡ್‌ನ‌ಲ್ಲೇ ಹೊಸ ವೇರಿಯಂಟ್‌ ಪರಿಚಯಿಸಿದೆ. ಹಾಗೇ ಹೋಂಡಾ, ಮಹೀಂದ್ರಾ ಕಂಪನಿಗಳೂ ತನ್ನ ಜನಪ್ರಿಯ ಮಾಡೆಲ್‌ಗ‌ಳ ಹೊಸ ವೇರಿಯಂಟ್‌ಗಳನ್ನು ಪರಿಚಯಿಸುತ್ತಿದೆ. ಮಹೀಂದ್ರಾ ಇಕೆಯುವಿ ಹೆಸರಿನ ಮಿನಿ ಎಸ್‌ಯುವಿ ಮೇಲಿನ ನಿರೀಕ್ಷೆ ಹೆಚ್ಚಿದೆ. ಉಳಿದಂತೆ ಟಾಟಾ ಅವರ ಎಚ್‌5ಎಕ್ಸ್‌, ವೋಲ್ಸ್‌ವ್ಯಾಗನ್‌ ಅವರ ವೆಂಟೋ ಫೇಸ್‌ಲಿಫ್ಟ್, ಹ್ಯುಂಡೈ ಅವರ ಇಯಾನ್‌ ಫೇಸ್‌ಲಿಫ್ಟ್ ಮೇಲೂ ನಿರೀಕ್ಷೆ ಹೆಚ್ಚಿದೆ.

ಸ್ಕೂಟರ್‌, ಬೈಕ್‌ಗಳು
ಈಗ ಪ್ರೀಮಿಯಂ ಸ್ಕೂಟರ್‌ಗಳು ಹಾಗೂ ನ್ಪೋರ್ಟ್ಸ್ ಮಾದರಿಯ ಕ್ರೂಸರ್‌ ಬೈಕ್‌ಗಳಿಗೆ ವಿಶೇಷ ಬೇಡಿಕೆ. ಇದನ್ನರಿತ ಬಹುತೇಕ ಎಲ್ಲಾ ದ್ವಿಚಕ್ರ ವಾಹನ ಕಂಪನಿಗಳು ಹೊಸ ಹೊಸ ಮಾಡೆಲ್‌ಗ‌ಳನ್ನು ಪರಿಚಯಿಸುತ್ತಿವೆ. ಮಧ್ಯಮ ವರ್ಗದವರು ಕೊಂಡುಕೊಳ್ಳಬಹುದಾದ ಒಂದಿಷ್ಟು ಸ್ಕೂಟರ್‌, ಬೈಕ್‌ಗಳು ಹೀಗಿವೆ.

 ಟಿವಿಎಸ್‌: ಡ್ಯಾಜ್‌ (ಸ್ಕೂಟರ್‌), ಜೂಪಿಟರ್‌ 125(ಸ್ಕೂಟರ್‌), ಗ್ರೆಫೈಟ್‌(ಸ್ಕೂಟರ್‌), ಎನ್‌ಟಾರ್ಕ್‌ 125(ಸ್ಕೂಟರ್‌), 
ಹೀರೋ: ಎಕ್ಸ್‌ಟ್ರೀಮ್‌ 200ಆರ್‌ (ಬೈಕ್‌), ಎಕ್ಸ್‌ಪೌÉಸ್‌, ಡೇರ್‌(ಸ್ಕೂಟರ್‌), ಗ್ಲ್ಯಾಮರ್‌ 125(ಬೈಕ್‌), ಎಚೀವರ್‌(ಬೈಕ್‌), 
 ಹೋಂಡಾ: ಸಿಬಿಆರ್‌ 250ಆರ್‌(ಬೈಕ್‌), ಪಿಸಿಎಕ್ಸ್‌ 150 (ಸ್ಕೂಟರ್‌), ಸಿಲಿಕ್‌(ಸ್ಕೂಟರ್‌), ಎಕ್ಟೀವಾ 4ಜಿ(ಸ್ಕೂಟರ್‌)
ಯುಎಂ ಮೋಟಾರ್: ರೆನಗೇಡ್‌ ಡ್ನೂಟಿ ಎಸ್‌ (ಬೈಕ್‌)
  ಬಜಾಜ್‌: ಚೇತಕ್‌ (ಸ್ಕೂಟರ್‌), ಅವೆಂಜರ್‌ ಸ್ಟ್ರೀಟ್‌ 180, ಡಿಸ್ಕವರ್‌110 (ಬೈಕ್‌), ಪಲ್ಸರ್‌ ಎನ್‌ಎಸ್‌160(ಬೈಕ್‌), ವಿ12(ಬೈಕ್‌) ಅದೆರ್‌(ಎಲೆಕ್ಟ್ರಿಕ್‌): ಎಸ್‌340(ಸ್ಕೂಟರ್‌)
ಸುಜುಕಿ: ಸ್ವಿಷ್‌ 125(ಸ್ಕೂಟರ್‌),ಹಯತೆ ಇಪಿ(ಬೈಕ್‌)

Advertisement
Advertisement

Udayavani is now on Telegram. Click here to join our channel and stay updated with the latest news.

Next