Advertisement
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಸಹವರ್ತಿ ಬ್ಯಾಂಕುಗಳು. ರಾಷ್ಟ್ರೀಕೃತ ಬ್ಯಾಂಕುಗಳು, ಹಳೆ ಮತ್ತು ಹೊಸ ತಲೆಮಾರಿನ ಖಾಸಗಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಅಪೆಕ್ಸ್ ಬ್ಯಾಂಕುಗಳು, ಅರ್ಬನ್ ಬ್ಯಾಂಕುಗಳು, ಎಕ್ಸಿಮ… ಬ್ಯಾಂಕುಗಳು, ನಬಾರ್ಡ್ ಬ್ಯಾಂಕುಗಳು, ಐಡಿಬಿಐ ಬ್ಯಾಂಕು- ಹೀಗೆ ಬ್ಯಾಂಕುಗಳ ಈ ಉದ್ದದ ಪಟ್ಟಿಗೆ ಇನ್ನೊಂದು ಬ್ಯಾಂಕ್ ಸದ್ಯದಲ್ಲಿಯೇ ಸೇರುವ ಸಂಭವ ಇದೆ. ಅದರ ಹೆಸರು ಬ್ಯಾಡ್ ಬ್ಯಾಂಕ್ .
Related Articles
Advertisement
ಅಂತೆಯೇ ಈ ಸುಸ್ತಿ ಸಾಲವನ್ನು ಅಥವಾ ಕೆಟ್ಟ ಸಾಲವನ್ನು ಬ್ಯಾಲೆನ್ಸ್ ಶೀಟ್‌ನಿಂದ ಬೇರ್ಪಡಿಸುವ ಅನಿವಾರ್ಯತೆ ಬ್ಯಾಂಕುಗಳಿಗೆ ಬಂದಿದೆ. ಬ್ಯಾಂಕುಗಳಿಗೆ ಈ ಸುಸ್ತಿ ಸಾಲವನ್ನು ನಿರ್ವಹಿಸುವುದೇ ದೊಡ್ಡ ಸಮಸ್ಯೆಯಾಗಿ, ಹೊಸ ವ್ಯವಹಾರಕ್ಕೆ ಕೈ ಹಾಕುವುದು ಕಷ್ಟವಾಗಿದೆ. ರಘುರಾಮನ್ ರಾಜನ್ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ¨ªಾಗ, 2017 ಮಾರ್ಚ್ 31ರ ಒಳಗೆ ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್‌ಗಳನ್ನು ಸುಸ್ತಿ ಸಾಲದಿಂದ ಮುಕ್ತಿಗೊಳಿಸಬೇಕೆಂದು ಕಟ್ಟು ನಿಟ್ಟಾಗಿ ಆದೇಶಿಸಿದ್ದರು. ಬಹುಶ ಈ ಕಾರಣಗಳು ಬ್ಯಾಡ್ ಬ್ಯಾಂಕ್ ಅನ್ನು ಸ್ಥಾಪಿಸುವ ಹಿಂದಿನ ಪ್ರೇರಣೆ ಇರಬೇಕು.
ಹಾಗೆಯೇ ಸಾಲ ವಸೂಲಾತಿಗಾಗಿ ಸುಸ್ತಿ ಸಾಲವನ್ನು Asset Recovery Company ಗಳಿಗೆ ಮಾರಾಟ ಮಾಡಿದರೆ, ಡಿಸ್ಕೌಂಟ್‌ನಲ್ಲಿ ಸೇಲ… ಆಗಿ ಬ್ಯಾಂಕುಗಳಿಗೆ ನಷ್ಟ ಆಗುತ್ತದೆ. ಆಸ್ತಿಯನ್ನು ಮುಟ್ಟುಗೋಲು ಹಾಕಿ ಸೇಲ… ಮಾಡಿದರೂ ನಷ್ಟ ಆಗುತ್ತದೆ. ಸಾಲವನ್ನು ಈಕ್ವಿಟಿ ಮಾಡಿ ಮಾಲೀಕರಾದರೂ , ಬ್ಯುಸಿನೆಸ್ ಮಾಡಿದ ಅನುಭವ ಇಲ್ಲದಿರುವುದರಿಂದ ಇದು ಕಷ್ಟ ಸಾಧ್ಯ. ಸಾಲವನ್ನು ಪುನರ್ ವಿನ್ಯಾಸ ಮಾಡಿದರೆ, ಮರುಪಾವತಿ ಅವಧಿಯನ್ನು ಮುಂದೆ ಹಾಕಬೇಕಾಗುತ್ತದೆ. ಬಡ್ಡಿದರದಲ್ಲಿ ವಿನಾಯಿತಿ ಕೊಡಬೇಕಾಗುತ್ತದೆ. ಕೆಲವು ಮೊತ್ತವನ್ನು ಬಿಡಬೇಕಾಗುತ್ತದೆ.
ಬ್ಯಾಂಕುಗಳು ತಮ್ಮ ಸದೃಢ ಆಸ್ತಿಯನ್ನು ((good and healthy loans /assets ನ್ನು ಕೆಟ್ಟ ಅಸ್ತಿ (ಸಾಲ)ಯಿಂದ (bad and unhealthy loans)ಬೇರ್ಪಡಿಸಿ, ಪ್ರತ್ಯೇಕವಾಗಿ ಬ್ಯಾಡ್ ಬ್ಯಾಂಕ್ ಹೆಸರಿನಲ್ಲಿ ಇಡುವುದು. ಸದೃಢವಾದ ಸಾಲ, ಮೂಲ ಬ್ಯಾಂಕಿನಲ್ಲಿ ಉಳಿಯುತ್ತದೆ ಮತ್ತು ವಸೂಲಿ ಕಷ್ಟ ಸಾಧ್ಯವಾದ ಸಾಲಗಳು ಬ್ಯಾಡ್ ಬ್ಯಾಂಕ್‌ಗೆ ವರ್ಗಾಯಿಸಲ್ಪಡುತ್ತವೆ. ಬ್ಯಾಡ್‌ಬ್ಯಾಂಕ್ ಒಂದು ಕಾರ್ಪೋರೇಟ್ structure ಆಗಿದ್ದು, ಬ್ಯಾಂಕುಗಳ (loan pricing) ಆಸ್ತಿಗಳನ್ನು ತೆಗೆದುಕೊಳ್ಳುತ್ತವೆ. ಮಾರುಕಟ್ಟೆ ದರದಲ್ಲಿ ಬ್ಯಾಂಕುಗಳ ಸುಸ್ತಿ ಸಾಲವನ್ನು ಖರೀದಿಸಿ, ಅವುಗಳನ್ನು ವಸೂಲಿ ಮಾಡುತ್ತವೆ. ಬ್ಯಾಂಕುಗಳಲ್ಲಿ ಸುಸ್ತಿ ಸಾಲದ ಪ್ರಮಾಣ ಕಡಿಮೆಯಾದಷ್ಟು , ಅವುಗಳಿಗೆ ಹೆಚ್ಚಿನ ಕ್ಯಾಪಿಟಲ… ದೊರೆಯತ್ತದೆ. ಈ ಬ್ಯಾಂಕಿನ ಕಾರ್ಯ ಸುಸ್ತಿ ಸಾಲವನ್ನು ವಸೂಲು ಮಾಡುವುದು ಮಾತ್ರ.
ಈ ಬ್ಯಾಂಕಿನ ರೂಪು ರೇಷೆ, ವಿನ್ಯಾಸ, ಒಡೆತನ, ಸಾಲದ ದರ ಮತ್ತು ಬಂಡವಾಳ ಹೂಡಿಕೆ ಮತ್ತು ಮುಖ್ಯ ಕಾರ್ಯಾಲಯ ಪ್ರಾದೇಶಿಕ ಕಾರ್ಯಾಲಯ ಮತ್ತು ಶಾಖೆಗಳ ಬಗೆಗೆ ಇನ್ನೂ ಗಂಭೀರವಾದ ಚಿಂತನ- ಮಂಥನ ಅರಂಭವಾಗಬೇಕಾಗಿದೆ. ಒಂದೊಂದು ಬ್ಯಾಂಕಿಗೆ ಒಂದೊಂದು ಬ್ಯಾಡ್ ಬ್ಯಾಂಕ್ ಅಥವಾ ಕೆಲವು ಬ್ಯಾಂಕುಗಳಿಗೆ ಸೇರಿ ಒಂದು ಬ್ಯಾಂಕ್ ಆಗಬಹುದೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ವಲಯವಾರು ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಇದು ಖಾಸಗಿ ರಂಗದÇÉೋ ,ಸರ್ಕಾರಿ ರಂಗದÇÉೋ ಅಥವಾ ಜಂಟಿ ರಂಗದÇÉೋ ತಿಳಿಯದು. ಇದಕ್ಕೆ ಬಂಡವಾಳ ಹೂಡುವವರು ಯಾರು? ಸರ್ಕಾರ ಒತ್ತಡದಲ್ಲಿರುವ ಸಾಲದ ಶೇ.20ರಷ್ಟು ಬಂಡವಾಳ ಹೂಡಿದರೂ, ಈ ಮೊತ್ತ ಗಮನಾರ್ಹವಾಗಿ ಇರುತ್ತದೆ ಎಂದು ರಿಸರ್ಚ್ ಮತ್ತು ಅನಾಲಿಸಿಸ್ ಸಂಸ್ಥೆಗಳು ಅಭಿಪ್ರಾಯ ಪಟ್ಟಿವೆ. ಇದು ಕೇವಲ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೋ ಅಥವಾ ಖಾಸಗಿ ಬ್ಯಾಂಕುಗಳೂ ಇದರ ವ್ಯಾಪ್ತಿಯಲ್ಲಿ ಬರುತ್ತವೆಯೋ ತಿಳಿಯದು. ಈ ಬ್ಯಾಂಕಿನ ಪರಿಕಲ್ಪ$ನೆ ಕೆಲವರು ತಿಳಿದಂತೆ ತೀರಾ ಹೊಸದೇನೂ ಅಲ್ಲ. ಇಂಥ ಬ್ಯಾಂಕುಗಳು ಸ್ವೀಡನ್, ಫಿನ್ ಲ್ಯಾಂಡ್.ಇಂಡೋನೇಷಿಯಾ ಫ್ರಾನ್ಸ್ ಮತ್ತು ಬೆಲ್ಜಿಯಂಗಳಲ್ಲಿ ಕೂಡಾ ಇವೆಯಂತೆ.
ಅಮೇರಿಕಾದ ಮೆಲನ್ ಬ್ಯಾಂಕ್ 1988 ರಲ್ಲಿಯೇ ಇಂಥ ಬ್ಯಾಂಕ್ ಅನ್ನು ಸ್ಥಾಪಿಸಿತ್ತು. ಸಾಲ ನೀಡಿದ ಬ್ಯಾಂಕುಗಳೇ ಆ ಸಾಲವನ್ನು ವಸೂಲು ಮಾಡಬೇಕು ಮತ್ತು ಸುಸ್ತಿ ಸಾಲದ ಹಿಂದೆ ಸಾಕಷ್ಟು ಆಸ್ತಿ ಇದ್ದು ಅದನ್ನು ಬಳಸಿಕೊಳ್ಳಬೇಕು ಎಂದು ಪ್ರತಿಪಾದಿಸಿದ್ದರಂತೆ. ಸುಸ್ತಿ ಸಾಲದ ನಿರ್ವಹಣೆ ಬಗೆಗೆ ಅಪಾರ ಅನುಭವ ಹೊಂದಿರುವ ರಿಸರ್ವ್ ಬ್ಯಾಂಕ್ ಡೆಪ್ಯುಟಿ ಗವರ್ನರ್ ಆಚಾರ್ಯ ಇದರ ಪರವಾಗಿ ಇ¨ªಾರೆ. ಹಣಕಾಸು ಮಂತ್ರಿ ಅರುಣ್ ಜೈಟಿÉ ಸುಸ್ತಿ ಸಾಲಕ್ಕೆ ಇದು ಪರಿಹಾರವೆಂದು ಅಭಿಪ್ರಾಯಪಟ್ಟರೆ, ಕೋಟಕ್ ಬ್ಯಾಂಕ್‌ನ ಉದಯ ಕೋಟಕ್ ಇದನ್ನು ಒಳ್ಳೆ ಐಡಿಯಾ ಎಂದು ಬಣ್ಣಿಸಿ¨ªಾರೆ.
ಆದರೆ, ಬ್ಯಾಂಕ್‌ಕಾರ್ಮಿಕ ಸಂಘಗಳು ಇದನ್ನು ವಿರೋಧಿಸುತ್ತಿವೆ. ಇದು ಒಂದು ರೀತಿಯ sell out ಆಗಿದ್ದು, ಬ್ಯಾಂಕುಗಳು ನಷ್ಟ ಅನುಭವಿಸುತ್ತವೆ ಎಂದು ಹೇಳುತ್ತವೆ. ಸುಸ್ತಿ ಸಾಲದ ವಸೂಲಿಗೆ ಇನ್ನೂ ಕಠಿಣ ಕಾನೂನು ರೂಪಿಸಬೇಕು, ಸಾಲ ಮರುಪಾವತಿ ಮಾಡದಿರುವುದನ್ನು ಕ್ರಿಮಿನಲ… ಅಪರಾಧವೆಂದು ಪರಿಗಣಿಸಬೇಕು ಮತ್ತು ಸಾಲವಸೂಲಾತಿ ಪ್ರಕರಣಗಳು ಸಮಯ ಪರಿಮಿತಿಯೊಳಗೆ ನಿರ್ಣಯವಾಗುವಂತೆ ನೋಡಿಕೊಳ್ಳಬೇಕು. ಸಾಲ ವಸೂಲಿ ವಿಚಾರದಲ್ಲಿ ಒಳ್ಳೆಯ ವ್ಯವಸ್ಥೆಯಾಗದಿದ್ದರೆ, ಸುಸ್ತಿ ಸಾಲ ಈ ಪುಸ್ತಕದಿಂದ ಆ ಪುಸ್ತಕಕ್ಕೆ ಅಥವಾ ಈ ಕಟ್ಟಡದಿಂದ ಆ ಕಟ್ಟಡಕ್ಕೆ ತೆರಳಿ ಬ್ಯಾಡ್ ಆಗಿಯೇ ಉಳಿಯಬಹುದು.
– ರಮಾನಂದ ಶರ್ಮಾ