ದುಬೈ: ನೀವು ಉದ್ಯೋಗದ ನಿಮಿತ್ತ ಅಥವ ಪ್ರವಾಸದ ನಿಮಿತ್ತ ದುಬೈಗೆ ತೆರಳಿದ ಸಂದರ್ಭ ಪಾಸ್ ಪೋರ್ಟ್ ಕಾಣೆಯಾಗಿದ್ದರೆ ಅಥವ ಕಳವಾಗಿದ್ದರೆ ಇನ್ನು ನೀವು ಚಿಂತಿಸುವ ಅಗತ್ಯವಿಲ್ಲ. ಇದಕ್ಕಾಗಿ ದುಬೈ ಹೊಸ ಯೋಜನೆಯೊಂದನ್ನು ಪರಿಚಯಿಸಿದ್ದು, ನೀವು ತುಂಬಾ ಅಲೆದಾಡುವ ಅನಿವಾರ್ಯತೆ ಇಲ್ಲ. ಈ ನೂತನ ಯೋಜನೆಯನ್ವಯ ನಿಮ್ಮ ಕಳೆದು ಹೋದ ಪಾಸ್ಪೋರ್ಟ್ ಅನ್ನು ಮರಳಿ ಪಡೆಯಲು ಹೆಚ್ಚೆಂದರೆ 4-5ದಿನಗಳು ವ್ಯಯಿಸಬೇಕಾಗುತ್ತದೆ. ಈ ಹಿಂದೆ 8 ನಿಯಮಗಳನ್ನು ಪಾಲಿಸಬೇಕಾಗಿತ್ತು. ಆದರೆ ಈಗ ಕ್ರಮದಲ್ಲಿ ಸ್ವಲ್ಪ ಬದಲಾವಣೆ ತರಲಾಗಿದ್ದು, ಸುಲಭಗೊಳಿಸಲಾಗಿದೆ.
ಏನಿದು ಹೊಸ ಕ್ರಮ
– ದುಬೈ ಪೊಲೀಸ್ ವೆಬ್ ಸೈಟ್ಗೆ ಭೇಟಿ ಕೊಡಿ.
– ನಿಮ್ಮ ಕಳೆದು ಹೋದ ಪಾಸ್ಪೋರ್ಟ್ ಕುರಿತ ಮಾಹಿತಿ ನೀಡಿ, ಹೊಸ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸಿ.
– ನಿಮ್ಮ ರಾಷ್ಟ್ರದ ರಾಯಭಾರಿ ಕಚೇರಿಗೆ ಹೊಸ ಪಾಸ್ಪೋರ್ಟ್ಗಾಗಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.
– ದುಬೈನ GDRFA ಗೆ ಭೇಟಿ ನೀಡಿ ನೀವು ಇರುವ ಸ್ಥಳ ಮತ್ತು ಅದರ ದೃಢೀಕರಣವನ್ನು ಲಗತ್ತಿಸಿ.
ಈ ಹಿಂದೆ ಯಾರಾದರೂ ತಮ್ಮ ಫಾಸ್ಪೋರ್ಟ್ ಅನ್ನು ಕಳೆದುಕೊಂಡಿದ್ದರೆ ಹಲವು ನಿಯಾಮಗಳನ್ನು ಪಾಲಿಸಿ ಬಳಿಕ ಪಡೆದುಕೊಳ್ಳಬೇಕಿತ್ತು. ಇದು ಹಲವು ದಿನಗಳನ್ನು ತೆಗೆದುಕೊಳ್ಳುತ್ತಿದ್ದವು. ಈಗ ಅವೆಲ್ಲವೂ ಸುಲಭಗೊಂಡಿವೆ. ದುಬೈ ಪೊಲೀಸ್ ಅವರಿಂದ ಅರ್ಜಿಯೊಂದನ್ನು ಪಡೆದುಕೊಂಡು, ಜಿಡಿಆರ್ಎಫ್ಎ, ದುಬೈ ಕೋರ್ಟ್, ದುಬೈ ಪಬ್ಲಿಕ್ ಪ್ರಾಸಿಕ್ಯೂಶನ್ ಅವರಿಂದ ದೃಢೀಕೃತ ಸಹಿ ಪಡೆದು ಅದನ್ನು ದುಬೈ ಪೊಲೀಸರಿಗೆ ನೀಡಬೇಕಾಗಿತ್ತು. ಬಳಿಕ ಆಯಾ ರಾಷ್ಟ್ರಗಳ ರಾಯಭಾರಿ ಕಚೇರಿಗೆ ತೆರಳಿ ಹೊಸ ಪಾಸ್ಪೋರ್ಟ್ ನೀಡಲು ಅರ್ಜಿಯನ್ನು ಸಲ್ಲಿಸಬೇಕಿತ್ತು. ಬಳಿಕ GDRFA ಬಳಿ ನೀಡಬೇಕಾಗಿತ್ತು. ಇಲ್ಲಿ ನಿಮ್ಮ ಹೊಸ ಅರ್ಜಿಯ ಪ್ರಕ್ರಿಯೆ ಮುಗಿಯಿತು ಎಂದರ್ಥ. ಹಲವು ದಿನಗಳ ತರುವಾಯ ನಿಮ್ಮ ಕೈಗೆ ಹೊಸ ಪಾಸ್ಪೋರ್ಟ್ ಲಭಿಸುತ್ತಿತ್ತು.
ಈ ಹೊಸ ಕಾನೂನಿನಲ್ಲಿ ಪೊಲೀಸ್ ಮತ್ತು ರಾಯಭಾರಿ ಕಚೇರಿಯನ್ನು ಸಂದರ್ಶಿಸಿ ಬಳಿಕ GDRFA ಬಳಿ ಮನವಿ ಮಾಡಬೇಕು. ಈ ಎಲ್ಲಾ ಕೆಲಸಗಳು ಬೆರಳೆಣಿಕೆ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.