Advertisement

ಬೆರಳ ತುದಿಯಲ್ಲಿ ಆಹಾರ ಸಿಗುವ ಸ್ಥಳದ ಮಾಹಿತಿ ಲಭ್ಯ

12:04 PM Apr 22, 2020 | mahesh |

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಆಹಾರಕ್ಕಾಗಿ ಹುಡುಕುತ್ತಿದ್ದೀರಾ? ವಾರ್ಡ್‌ಗಳಲ್ಲಿ ಸ್ವಯಂ ಸೇವಕರು, ಜನಪ್ರತಿನಿಧಿಗಳು ಎಲ್ಲಿ ಆಹಾರ ವಿತರಿಸುತ್ತಾರೆ ಎಂಬುದು ಗೊತ್ತಿಲ್ಲವೇ? ಎಷ್ಟು ಗಂಟೆವರೆಗೆ ವಿತರಣೆ ಕಾರ್ಯ ನಡೆಯಲಿದೆ? ಇದೀಗ ಈ ಎಲ್ಲ ಮಾಹಿತಿ ನಿಮ್ಮ ಬೆರಳ ತುದಿಯಲ್ಲಿದೆ!

Advertisement

– ಮೊಬೈಲ್‌ನಲ್ಲಿ ಇಂಟರ್‌ ನೆಟ್‌ ಇದ್ದರೆ ಸಾಕು ಈ ಎಲ್ಲಾ ಮಾಹಿತಿ ತಿಳಿಯಬಹುದಾಗಿದೆ. ಗೂಗಲ್‌ ಕ್ರೋಮೋ ಕ್ಲಿಕ್‌ ಮಾಡಿದ ನಂತರ ಮಾಹಿತಿಗಾಗಿ ಟೈಪ್‌ ಮಾಡುವ ಸ್ಥಳದ
ಕೆಳಗೆ “ಕೋವಿಡ್‌ 19: ಆಹಾರ ಮತ್ತು ರಾತ್ರಿ ಆಶ್ರಯ ಕೇಂದ್ರ ಲಭ್ಯವಿದೆ’ ಎಂದು ಉಲ್ಲೇಖೀಸಲಾಗಿದ್ದು, ಇದನ್ನು ಕ್ಲಿಕ್‌ ಮಾಡಿದರೆ ಸಾಕು. 2 ಕಿ.ಮೀ ಹತ್ತಿರದಲ್ಲಿ ಆಹಾರ ದೊರೆಯುವ ಸ್ಥಳ, ಸಮಯ ತಿಳಿಯಬಹುದು.

ಲಾಕ್‌ ಡೌನ್‌ನಿಂದ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು ಒಂದೊತ್ತಿನ ಊಟಕ್ಕಾಗಿ ಪರದಾಟ ನಡೆಸುತ್ತಿದ್ದಾರೆ. ಇವರಿಗಾಗಿ ಸ್ವಯಂ ಸೇವಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ರಾಜಕೀಯ ಪಕ್ಷಗಳು ಊಟದ ವ್ಯವಸ್ಥೆ ಕಲ್ಪಿಸುತ್ತಿವೆ. ಆದರೆ, ಇದು ಪರಿಣಾಮಕಾರಿಯಾಗಿಲ್ಲ. ಏಕೆಂದರೆ, ಯಾವ ಸಮಯದಲ್ಲಿ, ಯಾವ ಸ್ಥಳದಲ್ಲಿ ಊಟ
ವಿತರಿಸುತ್ತಾರೆ ಎಂಬುದೇ ಸಮಸ್ಯೆಯಾಗಿದೆ. ಆಹಾರ ನೀಡುವ ಸ್ಥಳಕ್ಕೆ ಹೋದರೂ, ಊಟ ನೀಡುವ ಸಮಯ ಬದಲಾಗಿರುತ್ತದೆ. ಇದರಿಂದಾಗಿ ಕಾರ್ಮಿಕರು ಊಟವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಸ್ಯೆ ಬಾರದಂತೆ ಗೂಗಲ್‌ ನಲ್ಲಿ ಎಲ್ಲ ಮಾಹಿತಿ ಲಭ್ಯವಾಗುವಂತೆ ಅವಕಾಶ ಮಾಡಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next