ಮಿಯಾಮಿ: ಕೆರೆಬಿಯನ್ ದ್ವೀಪಗಳಲ್ಲಿ ಭಾರೀ ಅನಾಹುತ ಸೃಷ್ಟಿಸಿದ್ದ ಇರ್ಮಾ ಚಂಡಮಾರುತ ಅಮೆರಿಕದ ಫ್ಲೋರಿಡಾಗೆ ಅಪ್ಪಳಿಸುವ ಮೂಲಕ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಇರ್ಮಾ ಚಂಡಮಾರುತಕ್ಕೆ 30ಕ್ಕೂ ಅಧಿಕ ಜನ ಬಲಿಯಾಗಿದ್ದು, 2.7 ಮಿಲಿಯನ್ ಮಂದಿ ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಏತನ್ಮಧ್ಯೆ ಇರ್ಮಾ ಚಂಡಮಾರುತದ ಹೊಡೆತಕ್ಕೆ ಫ್ಲೋರಿಡಾದ ಪ್ರಸಿದ್ಧ ಬಹಮಾಸ್ ಸಮುದ್ರದ ನೀರು ಸಂಪೂರ್ಣವಾಗಿ ಬತ್ತಿ ಹೋಗುವ ಮೂಲಕ, ಅಲ್ಲೀಗ ಬೀಚ್ ನಾಪತ್ತೆ ಆಗಿದೆ!
ಪ್ರಸಿದ್ಧ ಬಹಮಾಸ್ ಸಮುದ್ರ ತೀರದ ನೀರು ನಾಪತ್ತೆಯಾಗಿರುವ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿಡಿಯೋವನ್ನು ಅಪ್ ಲೋಡ್ ಮಾಡಿರುವ ಕ್ಯಾಡಿ ಅವರು, ನಾನೀಗಲು ಇದನ್ನು ನಂಬಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ಇದೊಂದು ಉದ್ದದ ದ್ವೀಪ ಪ್ರದೇಶ, ಆದರೆ ಈಗ ಬಹಮಾಸ್ ಸಮುದ್ರದ ನೀರೇ ನಾಪತ್ತೆಯಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಟ್ವೀಟಿಗರು, ಬಹಮಾಸ್ ನಲ್ಲಿರುವ ನಮ್ಮ ಕುಟುಂಬದ ಹೇಳಿಕೆ ಪ್ರಕಾರ, ಇರ್ಮಾ ಹೊಡೆತಕ್ಕೆ ಸಮುದ್ರದ ನೀರೇ ಮಂಗಮಾಯವಾಗಿದೆ. ಸಮುದ್ರದಲ್ಲಿ ಒಂದು ಹನಿ ಕೂಡಾ ನೀರಿಲ್ಲ. ಬೀಚ್ ಮತ್ತು ಸಮುದ್ರ ನಾಪತ್ತೆಯಾಗಿದೆ ಎಂದು ಬರೆದುಕೊಂಡಿದ್ದಾರೆ.
An ocean used to be here. #HurricaneIrma stole it away. https://t.co/p2kzbakCWq pic.twitter.com/7KqwL49D0t
Related Articles
— CNN (@CNN) September 10, 2017
p