Advertisement
ಅವರು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸ್ ಆಯೋಜಿಸಿದ್ದ ವಿಜ್ಞಾನ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಹಾಗೂ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಜ್ಞಾನ ಕಲಿಕಾ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
15 ವರ್ಷಗಳಿಂದ ಸಂಸ್ಥೆಯಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ಪ್ರೇರಣೆ ಪಡೆದು ಗ್ರಾಮೀಣ ವಿದ್ಯಾರ್ಥಿಗಳೂ ವಿಜ್ಞಾನಿಗಳಾಗಿ ರೂಪುಗೊಳ್ಳುವುದು ಸಾಧ್ಯ ಎಂದರು.
ಸಂಸ್ಥೆಯ ನಿರ್ದೇಶಕ ಕೆ. ಸತ್ಯಮೂರ್ತಿ ಅವರು ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ಸಿ.ವಿ. ರಾಮನ್ ಅವರ ಸಂಶೋಧನೆಗಳ ಬಗ್ಗೆ ಮಾಹಿತಿ ನೀಡಿದರು. ಬಹುಮಾನ ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳು ರಚಿಸಿದ ವಿಜ್ಞಾನ ಮಾದರಿಗಳ ಬಗ್ಗೆ ತಿಳಿಸಿದರು.
Related Articles
ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ತರಬೇತಿಗೆ ಆಗಮಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳು ರಚಿಸಿದ ಸುಮಾರು 50 ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನ ಆರಂಭವಾಗಿದ್ದು, ಫೆ. 28ರಂದು ಜಿಲ್ಲೆಯ ವಿವಿಧೆಡೆಗಳ ವಿದ್ಯಾರ್ಥಿಗಳು ರಚಿಸಿದ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಲಿದೆ. ಸಿ.ವಿ. ರಾಮನ್ ಅವರ ಭಾವಚಿತ್ರವಿರುವ ಫಲಕವನ್ನು ಅನಾವರಣಗೊಳಿಸಿ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಇಸಿಜಿ ಮಾನಿಟರ್, ಈಸ್ಟ್ ಪಂಪ್, ವೈನ್ ಪ್ರೊಡಕ್ಷನ್, ಸೂಕ್ಷ್ಮಾಣು ಜೀವಿಗಳು, ಅವುಗಳಿಂದ ಉಂಟಾಗುವ ಕಾಯಿಲೆ, ಕಿಣ್ವಗಳು, ಪ್ಲಾಸ್ಮಾ, ಆಮ್ಲಜನಕ ಉತ್ಪಾದನೆ, ಸೈಕ್ಲೋಸಿಸ್, ಹೂ-ಎಲೆಗಳ ವರ್ಣ ದರ್ಶನ, ಮಿದುಳು, ಹೈಡ್ರಾಲಿಕ್ಸ್, ಜೆನೆಟಿಕ್ಸ್, ಭೌತ ಮತ್ತು ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಮಾದರಿಗಳು ಪ್ರದರ್ಶನದಲ್ಲಿದ್ದವು.
Advertisement
ತರಬೇತಿ ಕಾರ್ಯಾಗಾರವಿಜ್ಞಾನ ದಿನದ ಅಂಗವಾಗಿ ಸಂಸ್ಥೆಯಲ್ಲಿ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 5 ದಿನಗಳ ವಿಜ್ಞಾನ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ಅವರಿಗೆ ವಿಜ್ಞಾನದ ಕೌತುಕ, ಲ್ಯಾಬೋರೇಟರಿ ಸಂಶೋಧನೆ, ಜೆನೆಟಿಕ್ಸ್ ಇತ್ಯಾದಿಗಳ ಮಾಹಿತಿ, ಪ್ರಾತ್ಯಕ್ಷಿಕೆ ನೀಡಲಾಯಿತು. ಪತ್ರಕರ್ತ ಶೇಚಾದ್ರಿ ಚಾರಿ, ಉಪನ್ಯಾಸಕರಾದ ಡಾ| ಟಿ.ಜಿ. ವಾಸುದೇವನ್, ಪ್ರೊ| ಭರತ್‌ಪ್ರಸಾದ್, ಪಿಆರ್‌ಒ ಬಾಬಣ್ಣ ಮೊದಲಾದವರಿದ್ದರು. ಆನೆಯ ಟೂತ್‌ಪೇಟ್ಸ್!
ತರಬೇತಿ ವೇಳೆ ವಿಜ್ಞಾನದ ಹೊಸ ಪ್ರಪಂಚವೇ ಕಣ್ಣಿಗೆ ಕಟ್ಟಿದಂತಾಗಿದೆ. ರಕ್ತ ವರ್ಗೀಕರಣ, ಜೀವಕೋಶಗಳಿಂದ ಡಿಎನ್‌ಎ ಪ್ರತ್ಯೇಕಿಸುವಿಕೆ, ಆನೆಯ ಟೂತ್‌ಪೇಸ್ಟ್ ಇತ್ಯಾದಿಗಳನ್ನು ತಿಳಿದುಕೊಳ್ಳುವುದು ಸಾಧ್ಯವಾಗಿದೆ. ವಿಜ್ಞಾನ ವಿಷಯದಲ್ಲಿ ಮುಂದುವರಿಯುವ ಪ್ರೇರಣೆ ದೊರೆತಿದೆ.
-ಸಮೀಕ್ಷಾ, ಎಸ್‌ಎಲ್‌ಎನ್‌ಪಿ ವಿದ್ಯಾಲಯ, ಪಾಣೆ ಮಂಗಳೂರು ಚೀನ ಮಾದರಿಯ ಅಂತಸ್ತು ಕೃಷಿ
ನೀರಿನ ಮಿತವ್ಯಯದೊಂದಿಗೆ ವಿಶಿಷ್ಟ ಕ್ರಮದಲ್ಲಿ ಮಾಡಲಾಗುವ ಚೀನ ಮಾದರಿಯ ಅಂತಸ್ತು ಕೃಷಿಯ ಮಾದರಿ ಆಕರ್ಷಣೀಯವಾಗಿತ್ತು. ಬಾಟಲ್‌ಗಳನ್ನು ಉಪಯೋಗಿಸಿ ಅಂತಸ್ತು ಕೃಷಿಯನ್ನು ಬಿಂಬಿಸಲಾಗಿದ್ದು, ಮೇಲೆ ಹಾಕಿದ ನೀರನ್ನು ಗಿಡಗಳು ಬೇಕಾದಷ್ಟು ಬಳಸಿ ಕೆಳ ಅಂತಸ್ತಿನ ಗಿಡಗಳಿಗೆ ಬಿಟ್ಟುಕೊಡುವ ತಣ್ತೀವನ್ನು ಬಿತ್ತರಿಸಲಾಗಿತ್ತು.