ಕಕ್ಕೇರಾ: ಬಾಕಿ ಉಳಿದ ಒಂದು ಕಿ.ಮೀ ರಸ್ತೆಗೆ ಡಾಂಬರೀಕರಣ ಹಾಕುವಲ್ಲಿ ಲೋಕೊಪಯೋಗಿ ಇಲಾಖೆ ಹಿಂದೇಟು ಹಾಕಿದ್ದರಿಂದ ಹಾಳಾದ ರಸ್ತೆಯಲ್ಲಿ ನಿತ್ಯ ವಾಹನಗಳು ಸಂಚರಿಸುವುದು ಕಷ್ಟವಾಗಿದ್ದು, ಅಲ್ಲದೇ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ, ಬೈಕ್ ಸವಾರರಿಗೆ ಸಂಕಟವಾಗಿದೆ.
Advertisement
ಕಕ್ಕೇರಾ ಪಟ್ಟಣದಿಂದ ಬಲಶೆಟ್ಟಿಹಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ ಇದು. 9 ಕಿ.ಮೀ ರಸ್ತೆಯಲ್ಲಿ 8 ಕಿ.ಮೀ ರಸ್ತೆಗೆ ಡಾಂಬರೀಕರಣ ಹಾಕಿ ದುರಸ್ತಿಗೊಳಿಸಲಾಗಿದ್ದು, ಚಿಂಚೋಡಿರ ದೊಡ್ಡಿಯಿಂದ ಒಂದು ಕಿ.ಮೀ ರಸ್ತೆ ರಿಪೇರಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದು, ರಸ್ತೆಗೆ ಅಲ್ಲಲ್ಲಿ ಜಲ್ಲಿಕಲ್ಲು ಎದ್ದು ರಸ್ತೆ ತೀರಾ ಹದಗೆಟ್ಟಿದ್ದು, ಪ್ರಯಾಣಿಕರು ಸಂಚಾರಕ್ಕೆ ನರಕಯಾತನೆ ಅನುಭವಿಸುವಂತಾಗಿದೆ.
Related Articles
ನಿರ್ವಹಣೆ ವೆಚ್ಚದಲ್ಲಿ ಡಾಂಬರೀಕರಣ ಹಾಕಿ ದುರಸ್ತಿ ಗೊಳಿಸಬಹುದಾಗಿತ್ತು. ಇದಕ್ಕೂ ನಿಷ್ಕಾಳಜಿ ತೋರಲಾಗಿದೆ.
Advertisement
ಹಾಗಾದರೆ ರಸ್ತೆಗೆ ಸಂಬಂಧಿಸಿದ ನಿರ್ವಹಣ ವೆಚ್ಚ ಏನು ಮಾಡಲಾಗಿದೆ ಎಂದು ಜನರ ಪ್ರಶ್ನೆಯಾಗಿದೆ. ನಿರ್ವಹಣೆ ಅನುದಾನದಲ್ಲಿ ಗುಂಡಿ ಬಿದ್ದ ರಸ್ತೆಗೆ ತಾತ್ಕಾಲಿಕವಾಗಿ ಡಾಂಬರೀಕರಣ ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿತ್ತು. ಇದ್ಯಾವುದು ಗಮನಹರಿಸಿಲ್ಲ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅಪೂರ್ಣಗೊಂಡ 1 ಕಿ.ಮೀ ರಸ್ತೆಗೆ ತಾತ್ಕಾಲಿಕವಾಗಿ ರಿಪೇರಿ ಮಾಡಲಿ ಎಂದು ಪ್ರಯಾಣಿಕರ ಒತ್ತಾಯವಾಗಿದೆ.
ಸದ್ಯ ಕ್ರಿಯಾಯೋಜನೆಯಡಿ ಬಾಕಿ ಉಳಿದ ನೂರು ಮೀಟರ್ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕಾಗಿ ಅಂದಾಜು ವರದಿ ತಯಾರಿಸಲಾಗಿದ್ದು, ಅನುಮೊದನೆಯೊಂದಿಗೆ ಡಾಂಬರೀಕರಣ ರಸ್ತೆ ನಿರ್ಮಿಸಲಾಗುವುದು.
ಸುಭಾಶ್ಚಂದ್ರ. ಎಇಇ
ರಸ್ತೆ ಹದಗೆಟ್ಟಿದರಿಂದ ಸಂಚಾರಕ್ಕೆ ತೊಂದರೆ ಅನುಭವಿಸಬೇಕಾಗಿದೆ. ರಾತ್ರಿ ವೇಳೆ ಅಪಾಯವೇ ಜಾಸ್ತಿ. ಹೀಗಾಗಿ ಶೀಘ್ರ ರಸ್ತೆ ಅಭಿವೃದ್ಧಿಪಡಿಸಬೇಕು.
ಹನುಮಂತ, ವಾಹನ ಸವಾರ