Advertisement
ನೆಮ್ಮದಿಯ ಜೀವನದ ಮಧ್ಯೆ ಒಂದಷ್ಟು ಮನಸ್ತಾಪಗಳು ನುಸುಳಿ ಬಿಡುತ್ತದೆ. ತುಂಬಾ ಆತ್ಮೀಯರು, ಒಲವುಳ್ಳವರು, ಸ್ನೇಹಿತರು, ಚಿರಪರಿಚಿತರು, ಸಹಪಾಠಿಗಳು-ಸಹೋದ್ಯೋಗಿಗಳು, ಕುಟುಂಬ ವಲಯದಲ್ಲಿ ಹೀಗೆ ಪಟ್ಟಿ ಮುಂದುವರಿಯುತ್ತದೆ. ನಾವು ಅಪೇಕ್ಷೆ ಪಡದ ಸಂಗತಿಗಳು ಸಂಭವಿಸಿ ನಮಗೆ ಕಿರಿಕಿರಿಯಾದಾಗ ಸಹಜವಾಗಿ ಮನಸ್ತಾಪದ ಬಾಗಿಲನ್ನು ಅದು ಬಡಿಯುತ್ತದೆ. ಇಂತಹ ಸಣ್ಣಪುಟ್ಟ ವಿಭಿನ್ನ ನಿಲುವು ಒಂದು ಸುಂದರವಾದ ಸ್ನೇಹವನ್ನು, ಸೊಗಸಾದ ಸಂಬಂಧವನ್ನು ಹಾಳುಗೆಡವುತ್ತದೆ.
ಜೀವನದಲ್ಲಿ ಹಿತ ಮತ್ತು ಅಹಿತವಾದ ಅನುಭವಗಳು ಸರ್ವೇ ಸಾಮಾನ್ಯವಾದವುಗಳು. ಅವುಗಳನ್ನು ನಾವು ಯಾವ ರೀತಿ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಮ್ಮ ನಾಳೆಗಳು ಚಿತ್ರಿತವಾಗುತ್ತದೆ. ಮನಸ್ತಾ±ಗಳು ಎದುರಲ್ಲಿ ಬಂದಾಗ ಅವುಗಳನ್ನು ತುಂಬಾ ಗಂಭೀರವಾಗಿ ಮನಸ್ಸಿಗೆ ತೆಗೆದುಕೊಳ್ಳಬಾರದು. ಅವುಗಳನ್ನು ಮನದ ಮೂಲೆಯಲ್ಲಿ ನೆಟ್ಟು ಅದಕ್ಕೆ ನೀರೆಯುವುದರಲ್ಲಿ ಅರ್ಥವಿಲ್ಲ. ಬದ ಲಾಗಿ ಎಲ್ಲವನ್ನೂ ಶಾಂತವಾಗಿ ಸ್ವೀಕರಿಸಲು ಆರಂಭಿಸಿ. ಅವುಗಳಿಂದ ನೀವು ಕಳೆದುಕೊಳ್ಳುವುದು ಏನೂ ಇಲ್ಲ. ಶೂನ್ಯ. ಹೇಗೆ ಮಾತನಾಡಲಿ?
ನೀವು ಒಬ್ಬರ ಜತೆ ಮಾತು ಬಿಟ್ಟು ಹಲವು ದಿನಗಳು ಕಳೆದವು ಎಂದಿಟ್ಟುಕೊಳ್ಳಿ. ಯಾವುದೋ ಒಂದು ಹಳೆಯ ಘಟನೆಗಳಿಂದ ಇಬ್ಬರೂ ಮಾತು ಮುರಿದಿರಬಹುದು. ಬಳಿಕ ಇಬ್ಬರಿಗೂ ಪಶ್ಚಾತ್ತಾಪ ಅಥವಾ ಮಾತನಾಡುವ ಆಸೆ ಚಿಗುರಿರಬಹುದು. ಆದರೆ ಅಹಂ ಅದಕ್ಕೆ ಹಸಿರು ನಿಶಾನೆ ನೀಡದೇ ಇರುವ ಕಾರಣ ಇಬ್ಬರೂ ಮಾತ ನಾಡಲೇ ಇಲ್ಲ. ಈ ಮನಸ್ಥಿತಿಯನ್ನು ಬದಲಿಸ ಬೇಕಾಗಿದೆ. ನಿಮ್ಮ ಜತೆ ಕೋಪಿಸಿಕೊಂಡವರು ಮತ್ತೆ ಮಾತನಾಡಿಸಲು ಬಂದಾಗ “ಅವರದೇ ತಪ್ಪು ಅದಕ್ಕಾಗಿ ಬಂದಿದ್ದಾರೆ’ ಎಂದು ಭಾವಿಸಿಕೊಳ್ಳಬಾರದು. ಬಹಳಷ್ಟು ಸಂದರ್ಭ ಅದೆಷ್ಟೋ ಸಂಬಂಧಗಳು ಇಂತಹ ಧೋರಣೆ ಮತ್ತು ಯೋಚನೆಯಿಂದ ಹಾಳಾಗುತ್ತವೆ. ಇಂತಹ ಮಾತುಗಳು ಕೇಳಿ ಬರಬಾರದು. ಆಗಿದ್ದು ನಡೆದು ಹೋಯ್ತು, ಇನ್ನಾದರೂ ಚೆನ್ನಾಗಿರುವ ಎಂಬ ಮಾತು ನಿಮ್ಮ ಸಂಬಂಧವನ್ನು ಅಂತ್ಯದಿಂದ ಅನಂತದವರೆಗೆ ಕೊಂಡೊಯ್ಯುತ್ತದೆ. ಯಾಕೆಂದರೆ ನಾವು ಇದ್ದಷ್ಟು ಸಮಯ ಬದುಕನ್ನು ಆನಂದಿಸಬೇಕಾಗಿದೆ. ಈ ಆನಂದಕ್ಕೆ ತೊಡಕಾಗಿರುವ ಕೆಲವು ವಿಘ್ನಗಳನ್ನು ಬಗೆ ಹರಿಸಿಕೊಂಡರೆ ಬದುಕು ನಿಜಾರ್ಥದಲ್ಲಿಯೂ ಬಂಗಾರವಾಗುತ್ತದೆ.
Related Articles
Advertisement