Advertisement

ದೇಶ ಪ್ರೇಮ ಬಡಿದೆಬ್ಬಿಸುವ ದೇಶ ಕರೆದಾಗ…

06:07 PM Nov 21, 2019 | mahesh |

ದೇಶ ಕರೆದಾಗ ಎಂಬ ನಾಟಕದ ಮೂಲಕ ಜನಸಾಮಾನ್ಯರಲ್ಲಿಯೂ ದೇಶಪ್ರೇಮವನ್ನು ಹೊಂದಿರಬೇಕೆಂಬ ಜಾಗೃತಿಯನ್ನುಂಟುಮಾಡುತ್ತದೆ, ಅರಿವು ಮೂಡಿಸುತ್ತದೆ. ಜನರ ಮನ ಪರಿವರ್ತನೆಯ ಮೂಲಕ ದೇಶದಲ್ಲಿ ಬದಲಾವಣೆ ಕಾಣಲು ಮುಂದಾದ ಅಣ್ಣಾ ಹಜಾರೆ, ಭಾರತಕ್ಕಾಗಿ ಕಾರ್ಯ ನಿರ್ವಹಿಸುವ ಲೆಫ್ಟಿನೆಂಟ್‌ ಅಬೂಬಕ್ಕರ್‌ ಇತ್ಯಾದಿ ಪಾತ್ರಗಳು ನಾಟಕವನ್ನು ತದೇಕಚಿತ್ತದಿಂದ ವೀಕ್ಷಿಸುವುದಕ್ಕೆ ಪ್ರೇರೇಪಿಸುತ್ತದೆ.

Advertisement

ಯುದ್ಧದಲ್ಲಿ ಸೆಣಸಾಡಿ ಸೋತು ಕಂಗಾಲಾಗಿದ್ದರೂ, ಆತಂಕವಾದವೆಂಬ ಅಸ್ತ್ರವನ್ನು ಬಳಸಿ ಮೂವತ್ತು ವರ್ಷಗಳಿಂದ ಭಾರತದ ರಕ್ತ ಹರಿಸುತ್ತ ಬಂದ ಕಾಶ್ಮೀರದ ಹಗಲು ಕನಸು ಕಾಣುತ್ತಾ, ಸೋತರೂ ಗೆದ್ದಂತೆ ಬೀಗುವ ಪಾಕಿಸ್ಥಾನದ ಆತಂಕವಾದ ವಿರುದ್ಧ ನಿರ್ಣಾಯಕ ಸಮರ ಸಾರಲು ರಾಜಕೀಯ ಇಚ್ಛಾಶಕ್ತಿಯ ಕೊರತೆ. ರಕ್ಷಣಾ ನೀತಿ ಹಾಗೂ ವಿದೇಶ ನೀತಿಗಳಿಂದ ದಿಟ್ಟವಾಗಿ ಎದುರಿಸುವ ಗೋಜಿಗೆ ಹೋಗದಿರುವ ಸರಕಾರದ ಪಾತ್ರವನ್ನು ಸುಂದರವಾಗಿ ಚಿತ್ರಿಸಲಾಗಿದೆ.

ಪಾಕಿಸ್ಥಾನದ ಸೇನೆಗೆ ನೇರ ದಾಳಿ ಮಾಡುವ ಶಕ್ತಿಯಿಲ್ಲ. ಅದಕ್ಕೆ ಆತಂಕವಾದಿಗಳನ್ನು ಬಳಸಿಕೊಳ್ಳುತ್ತದೆ. ಭಾರತದ ಸೇನೆ ಸರಕಾರದ ಆದೇಶ ಬರುವವರೆಗೆ ಕಾದು ಕುಳಿತರೂ ಎಲ್ಲಕ್ಕೂ ವ್ಯವಸ್ಥಿತವಾಗಿ ಉತ್ತರ ನೀಡುವ ಕಾರ್ಯವನ್ನು ಮಾಡುತ್ತದೆ. ಸೆ„ನ್ಯಕ್ಕೆ ಸಮರ್ಥ ಉತ್ತರ ಕೊಡುವ ವ್ಯವಸ್ಥೆ ಜಾರಿಗೆ ತಂದಲ್ಲಿ ದೇಶ ಸುರಕ್ಷತೆಯಿಂದ ಇರುತ್ತದೆ ಎಂಬುದನ್ನು ತೋರಿಸಲಾಗಿದೆ.

ಭವಿಷ್ಯದ ಸುಂದರ ಕನಸು ಹೊತ್ತ ಹೈದರ್‌ ಓದಿ ಉತ್ತಮ ಭವಿಷ್ಯ ರೂಪಿಸಬೇಕೆಂದಿದ್ದರೂ, ತಾಯಿ ರುಕ್ಸಾನಳ ವಿರೋಧದ ನಡುವೆಯೂ ಪುತ್ರನನ್ನು ಆತನ ತಂದೆ ಮಾರಾಟಮಾಡುತ್ತಾನೆ. ಬಾಲಕನ ಓದುವ ಕನಸನ್ನು ಭಗ್ನಗೊಳಿಸಿ, ಕೈಯಲ್ಲಿ ಬಂದೂಕು ಹಿಡಿಸಿ ಜಿಹಾದ್‌ಗಾಗಿ ಹಿಂದುಸ್ಥಾನವನ್ನು ಕಬರಿಸ್ಥಾನ ಮಾಡುವ ನಿಟ್ಟಿನಲ್ಲಿ ಪ್ರಬಲ ಪ್ರಯತ್ನ ನಡೆಯುತ್ತದೆ. ದೇಶ ಪ್ರೇಮವನ್ನು ಹೊಂದಿರುವ ಸೆ„ನ್ಯ ಜಾತಿ ಧರ್ಮವನ್ನು ಬದಿಗೊತ್ತಿ ಶತ್ರುಗಳ ಜತೆಗೆ ಹೋರಾಡಿ ಜಯಿಸುತ್ತದೆ.

ಪಾಕಿಸ್ಥಾನದಲ್ಲಿ ಒಂದೇ ಸಮುದಾಯವಿದ್ದರೂ ಅವರಿಗೆ ಆಗುತ್ತಿರುವ ತೊಂದರೆಯನ್ನು ತೋರಿಸಲಾಗುತ್ತದೆ. ಡ್ರಗ್ಸ್‌ ಮಾಫಿಯಾ, ಕೋಟಾ ನೋಟು ಜಾಲ ಹೀಗೆ ವಿವಿಧ ರೀತಿಯ ವಿದ್ರೋಹಿಗಳ ಚಟುವಟಿಕೆ, ರಾಜಕೀಯ ವ್ಯಕ್ತಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ದೇಶವನ್ನು ಮುಳುಗಿಸುವ ಸನ್ನಿವೇಶದಲ್ಲಿ ಅಣ್ಣಾ ಹಜಾರೆಯಂತ ಮಹಾನ್‌ ವ್ಯಕ್ತಿ ಸಮಾಜದಲ್ಲಿ ಪರಿವರ್ತನೆಯನ್ನು ಮಾಡಿ ಎಲ್ಲರಿಗೂ ಉತ್ತಮ ಭವಿಷ್ಯ ಸಿಗುವಂತೆ ಮಾಡುವ ರೀತಿಯಲ್ಲಿ ಕಥೆ ಸಾಗುವುದು ವಿಶೇಷವಾಗಿ ಆಕರ್ಷಿಸುತ್ತದೆ.

Advertisement

ಕತೆ- ಸಾರಥ್ಯ
ಓಂಕಾರ್‌ ಶೆಟ್ಟಿ ಮುಂಬಯಿ ಅವರ ಕಥೆ, ಸಾಹಿತ್ಯ, ಸಂಭಾಷಣೆ, ನಿರ್ದೇಶನ ಈ ನಾಟಕಕ್ಕಿದೆ. ಅನಿತಾ ಓಂಕಾರ್‌ ಶೆಟ್ಟಿ ಅವರು ನಾಟಕದ ನಿರ್ಮಾಪಕರಾಗಿದ್ದಾರೆ. ಎ. ಕೆ. ವಿಜಯ್‌ ಕೋಕಿಲಾ ಅವರ ಸಂಗೀತವಿದ್ದು, ಅಜಿತ್‌ನಾಥ್‌ ಶೆಟ್ಟಿ ಮುಳಿಹಿತ್ಲು ತಂಡದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.ಬಿ. ರಮೇಶ್‌ ಕಲ್ಲಡ್ಕ, ಯಾದವ ಮಣ್ಣಗುಡ್ಡೆ, ಅರುಣ್‌ ಮಂಗಳಾದೇವಿ, ಸುಮನ, ಕಿಶೋರ್‌ ಕುಂಪಲ, ವಿನೋದ್‌ ರಾಜ್‌ ಕೋಕಿಲಾ, ನಿತೇಶ್‌, ಸಚಿನ್‌, ಸಂಧ್ಯಾ, ನಿಖೀಲ್‌ ಯು. ಶೆಟ್ಟಿ ಪ್ರಮುಖ ತಾರಾಂಗಣದಲ್ಲಿ ಕಾಣುತ್ತಾರೆ. ತಸ್ಮಯ್‌ ಶೆಟ್ಟಿ, ನರೇಂದ್ರ ಸರಿವಲ್ಲ, ಸಂಪತ್‌ ಭಂಡಾರಿ, ಶರತ್‌ ಸಹ ಕಲಾವಿದರಾಗಿದ್ದಾರೆ. ಗೋಪಿನಾಥ್‌ ಭಟ್‌, ವಿಜಯ ಕುಮಾರ್‌ ಕೊಡಿಯಾಲ್‌ಬೈಲ್‌, ಲಕ್ಷ್ಮಣ್‌ ಕುಮಾರ್‌ ಮಲ್ಲೂರು, ಸರೋಜಿನಿ ಶೆಟ್ಟಿ, ಚೇತನ್‌ ರೈ ಮಾಣಿ, ಚಂದ್ರಹಾಸ್‌ ಉಳ್ಳಾಲ್‌, ನರಸಿಂಹ ಮೂರ್ತಿ, ದಿನೇಶ್‌ ಅತ್ತಾವರ, ಗುರುರಾಜ್‌ ಎಂ. ಬಿ., ಮನೋಜ್‌ ಅತ್ತಾವರ ಕಂಠದಾನ ಮಾಡಿದ್ದಾರೆ. ಸಾಯಿರಾಮ್‌ ಮ್ಯೂಸಿಕ್‌ ವರ್ಕ್‌ ಸ್ಟೇಷನ್‌ನಲ್ಲಿ ಧ್ವನಿ ಮುದ್ರಣ ಮಾಡಲಾಗಿದೆ.

ಬೆಳಕು ಕತ್ತಲೆಯಾಟ
ಕಪ್ಪುಪರದೆಯ ಮುಂದೆ ಬೆಳಕಿನ ವಿನ್ಯಾಸದಲ್ಲಿ ಪಾತ್ರಗಳ ಅಭಿನಯ ನೈಜತೆಯನ್ನು ಸೃಷ್ಟಿಸುತ್ತದೆ. ಸುಮಾರು ಒಂದೂಕಾಲು ತಾಸು ಕಾಲ ಇರುವ ನಾಟಕ ದೇಶಾಭಿಮಾನವನ್ನು ಹುಟ್ಟಿಸುತ್ತದೆ. ಪ್ರಣಯ ಹಾಗೂ ಹಾಸ್ಯದ ಜತೆಗೆ ಗಂಭೀರ ಸನ್ನಿವೇಶದ ಹೂರಣವಿದೆ. ನಾಟಕದ ಅಷ್ಟೂ ಸನ್ನಿವೇಶಗಳು ಬೆಳಕು ಕತ್ತಲೆಯಾಟದಲ್ಲಿ ಸಾಗುತ್ತವೆ.

ಓಂಕಾರ್‌ ಶೆಟ್ಟಿ ತುಳುವಿನಲ್ಲಿ ಈತೊಂಜಿ ಪ್ರೀತಿನ್‌ ಆಲ್ಬಮ್‌ ಹಾಡು, ಹಿಂದಿಯಲ್ಲಿ ಸೋನಿ ಬಾರ್‌ ರಹೀ ಹೆ ಎಂಬ ಹಾಸ್ಯ ಸಿನೆಮಾವನ್ನು ಈಗಾಗಲೇ ರಚಿಸಿದ್ದಾರೆ. ಇದೀಗ ಕೃಷ್ಣನ ಗೊಬ್ಬು ಎಂಬ ತುಳು ನಾಟಕ ಪ್ರದರ್ಶನದ ಆರಂಭಕ್ಕೆ ಸಜ್ಜಾಗಿದ್ದಾರೆ.

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next