Advertisement

ಲೇಸನೇ ಬಯಸಿದಾಗ ಬದುಕು ಸಾರ್ಥಕ

10:47 AM Jan 16, 2022 | Team Udayavani |

ಕಲಬುರಗಿ: ಮನುಷ್ಯನಾಗಿ ಹುಟ್ಟಿದ ಮೇಲೆ ಭೂಮಿ ಮೇಲಿರುವ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತಾ ಬದುಕಿದಾಗ ನಮ್ಮ ಜೀವನ ಸಾರ್ಥಕ ಎನಿಸಿಕೊಳ್ಳುತ್ತದೆ ಎಂದು ನಿವೃತ್ತ ಶಿಕ್ಷಕ, ಸಾಹಿತ್ಯ ಪ್ರೇಮಿ ಶರಣಪ್ಪ ದೇಸಾಯಿ ಹಿರೇಜೇವರ್ಗಿ ಹೇಳಿದರು.

Advertisement

ನಗರದ ಬಿದ್ದಾಪುರ ಕಾಲೋನಿಯಲ್ಲಿ ಕ್ರಿಯಾಶೀಲ ಗೆಳೆಯರ ಬಳಗದ ವತಿಯಿಂದ ನಡೆದ “ಸಾಧಕನ ಜೀವನಾನುಭವ’ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು, ಕೇವಲ ಮಾತಿನಲ್ಲಿ ಸಮಾಜ ಸೇವೆಯಾಗಬಾರದು. ನಿಸ್ವಾರ್ಥದಿಂದ, ಅರ್ಪಣಾ ಮನೋಭಾವದಿಂದ ಸೇವೆ ಮಾಡಬೇಕು ಎಂದು ಹೇಳಿದರು.

ವಿಶ್ವಕರ್ಮ ಜಗದ್ಗುರು ಮೂರು ಝಾವಧೀಶ್ವರ ಮಠದ ಪೂಜ್ಯ ಪ್ರಣವ ನಿರಂಜನ ಮಹಾ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಶಿವರಾಜ ಅಂಡಗಿ, ಡಾ| ಶರಣರಾಜ ಛಪ್ಪರಬಂದಿ, ಪ್ರೊ| ಯಶವಂತರಾಯ ಅಷ್ಟಗಿ, ಶಕುಂತಲಾ ಪಾಟೀಲ ಜಾವಳಿ, ಪ್ರಮುಖರಾದ ಕಲ್ಯಾಣರಾವ್‌ ಭರ್ದಿ, ಶ್ರೀಕಾಂತ ಪಾಟೀಲ ತಿಳಗೂಳ, ಬಿ.ಎಂ.ಪಾಟೀಲ ಕಲ್ಲೂರ, ಜಗದೀಶ ಮರಪಳ್ಳಿ, ಪ್ರಭುಲಿಂಗ ಮೂಲಗೆ, ರಾಜೇಂದ್ರ ತೆಗನೂರ, ಶಿವಾನಂದ ಮಠಪತಿ, ಸಂತೋಷ ಕುಡಳ್ಳಿ, ಮಂಜುನಾಥ ಕಂಬಾಳಿಮಠ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next