Advertisement
ಶಾಸ್ತ್ರಿ ಜಲಾಶಯಕ್ಕೆ ಮಹಾಪೂರ ಬಂದು ತಿಂಗಳುಗಟ್ಟಲೇ ಲಕ್ಷಾಂತರ ಕ್ಯೂಸೆಕ್ ನೀರು ಜಲಾಶಯದಿಂದ ಹೊರಬಿಡಲಾಗಿತ್ತು. ಇದೀಗ ಕೃಷ್ಣೆ ಒಡಲು ತುಂಬಿದೆ. ಸರ್ಕಾರ ಕೃಷ್ಣೆಗೆ ಸರ್ಕಾರದಿಂದ ಬಾಗಿನ ಅರ್ಪಿಸಲು ಮೀನಮೇಷ ಎಣಿಸುವುದು ಪ್ರತಿ ಬಾರಿಯೂ ನಡೆಯುತ್ತದೆ. ಆದರೆ ದಕ್ಷಿಣದಲ್ಲಿ ಹರಿದಿರುವ ಕಾವೇರಿ ನದಿ ತುಂಬುವ ವೇಳೆಯಲ್ಲಿ ಜಲಾಶಯಕ್ಕೆ ಹಿಂದಿನ ಎಲ್ಲ ಸರ್ಕಾರಗಳು ಬಾಗಿನ ಅರ್ಪಿಸುತ್ತಲೇ ಬಂದಿವೆ. ಕೃಷ್ಣೆ ತುಂಬಿದ್ದರೂ ಬಾಗಿನ ಅರ್ಪಿಸಲು ಇಲ್ಲಸಲ್ಲದ ನೆಪಗಳು ಬರುತ್ತವೆ. ಇದರಿಂದ ಕೃಷ್ಣೆಯ ಒಡಲ ಮಕ್ಕಳು ಸರ್ಕಾರಗಳು ಕಾವೇರಿಗೆ ಕೊಡುವ ಮಹತ್ವ ಕೃಷ್ಣೆಗೇಕಿಲ್ಲ? ಎಂದು ಪ್ರಶ್ನಿಸುತ್ತಿದ್ದಾರೆ.
ನೆರವೇರಿಸಿದ್ದರು. ನಂತರ ಕಟ್ಟಡದ ಕಾಮಗಾರಿ ಹಾಗೂ ಭೂಸ್ವಾ ಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಯೋಜನೆಗಳು ಆಮೆಗತಿಯಲ್ಲಿ ಸಾಗಿದ್ದರ ಪರಿಣಾಮ ಜಲಾಶಯ ಕಟ್ಟಡ ನಿರ್ಮಾಣ ಕಾಮಗಾರಿಗಳು 2000ನೇ ಸಾಲಿನಲ್ಲಿ ಪೂರ್ಣಗೊಂಡಿದ್ದರೂ 2002ರಿಂದ ನೀರು ಸಂಗ್ರಹಿಸಲು ಆರಂಭಿಸಲಾಯಿತು. 2006ರಲ್ಲಿ ಆ.21ರಂದು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್ .ಡಿ. ಕುಮಾರಸ್ವಾಮಿಯವರು ರಾಷ್ಟ್ರಪತಿಯಾಗಿದ್ದ ಡಾ| ಎ.ಪಿ.ಜೆ. ಅಬ್ದುಲ ಕಲಾಂ ಅವರಿಂದ ಜಲಾಶಯ ಲೋಕಾರ್ಪಣೆಗೊಳಿಸಿದ್ದರು.
Related Articles
2008ರಿಂದ 2010ರವರೆಗೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ, 2011ರಲ್ಲಿ ಮುಖ್ಯಮಂತ್ರಿ ಸದಾನಂದಗೌಡ, 2012ರಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, 2013 ಹಾಗೂ 2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಗಿನ ಅರ್ಪಿಸಿದ್ದರು.
Advertisement
ಆದರೆ 2015ರಲ್ಲಿ ಜಲಾಶಯ ತುಂಬದಿರುವುದರಿಂದ ಬಾಗಿನ ಅರ್ಪಣೆಯಾಗಲಿಲ್ಲ, 2016ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರ ಮಗ ರಾಕೇಶ ಅಕಾಲಿಕ ನಿಧನದಿಂದ ಬಾಗಿನ ಅರ್ಪಣೆಗೆ ಆಗಮಿಸಲಿಲ್ಲ. 2017ರಲ್ಲಿ ಸಿದ್ದರಾಮಯ್ಯನವರು ಕೃಷ್ಣೆಗೆ ಬಾಗಿನ ಅರ್ಪಿಸಿದ್ದರು.
ಮಳೆ ನೆಪ ಹೇಳಿ ರದ್ದು: 2018ರಲ್ಲಿ ಬಾಗಿನ ಅರ್ಪಣೆಗೆ ದಿನಾಂಕ ನಿಗದಿಯಾಗಿದ್ದರೂ ಹುಬ್ಬಳ್ಳಿಯಲ್ಲಿ ಮಳೆಯಾಗಿದ್ದರಿಂದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಹಾಗೂ ನೀರಾವರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ ಬಾಗಿನ ಅರ್ಪಿಸಲು ಆಗಮಿಸುತ್ತಾರೆ ಎಂದು ವಿಜೃಂಭಣೆ ಸ್ವಾಗತಕ್ಕಾಗಿ ಇಡೀ ಪ್ರದೇಶವನ್ನು ಅಲಂಕರಿಸಲಾಗಿತ್ತು. ಸಮಾರಂಭಕ್ಕೆ ಬರದೇ ಮಳೆ ನೆಪ ಹೇಳಿ ರದ್ದುಗೊಳಿಸಿದ್ದರಿಂದ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧಿಧೀಶರು ಹಾಗೂ ರೈತರು ಮುಖ್ಯಮಂತ್ರಿಗಳ ನಡೆ ತೀವ್ರವಾಗಿ ಖಂಡಿಸಿದ್ದರು.
2019ರ ಅ.5ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತುಂಬಿದ ಕೃಷ್ಣೆಯ ಜಲನಿಧಿಗೆ ಬಾಗಿನ ಅರ್ಪಿಸಿದ್ದರು. 2020 ಅ.22ರಂದು ತುಂಬಿದ ಕೃಷ್ಣೆಗೆ ನಿಗದಿಯಾಗಿದ್ದ ಬಾಗಿನ ಅರ್ಪಣೆ ಹವಾಮಾನ ವೈಪರೀತ್ಯದಿಂದ ನೆರೆ ಹಾವಳಿಗೆ ತುತ್ತಾಗಿದ್ದ ಪ್ರದೇಶ ವೀಕ್ಷಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆಲಮಟ್ಟಿಗೆ ಆಗಮಿಸಿ ಬಾಗಿನ ಅರ್ಪಿಸಲಿದ್ದಾರೆ ಎಂದು ಜಿಲ್ಲೆಯ ಶಾಸಕರುಗಳು, ರೈತರು, ಮಠಾಧೀಶರು, ಅಭಿಮಾನಿಗಳು ಆಗಮಿಸಿದ್ದರು. ಆದರೆ ಸಂಜೆ 6 ಗಂಟೆ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕಾರ್ಯಕ್ರಮ ರದ್ದು ಎಂದು ಘೋಷಣೆ ಮಾಡಿದ್ದರು. ಇದರಿಂದ ಕೃಷ್ಣೆಯ ಒಡಲ ಮಕ್ಕಳಿಗೆ ನಿರಾಶೆಯಾಗುವಂತಾಗಿತ್ತು.
ರಾಜ್ಯದಲ್ಲಿ ಉದ್ದವಾಗಿ ಹರಿದು 6.59 ಲಕ್ಷ ಎಕರೆ ಜಮೀನಿಗೆ ಹಾಗೂ 12 ಜಿಲ್ಲೆಗಳಿಗೆ ಕುಡಿವ ನೀರು ಪೂರೈಕೆ, ಜಲವಿದ್ಯುತ್ ಘಟಕಗಳಿಗೆ, ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರ ಹಾಗೂ ವಿವಿಧ ಕಾರ್ಖಾನೆಗಳಿಗೆ ಸೇರಿದಂತೆ ರಾಜ್ಯದ ಬಹುಭಾಗ ನೀರಿನ ದಾಹ ನೀಗಿಸುವ ಕೃಷ್ಣೆಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಲಮಟ್ಟಿಗೆ ಬಾಗಿನ ಅರ್ಪಿಸುವರೋ? ಎಂಬುದನ್ನು ಕಾದು ನೋಡಬೇಕು.
ಜಲಾಶಯ ಭರ್ತಿಯಾಗುತ್ತಿದ್ದು, ಭರ್ತಿಯಾದ ನಂತರ ಮುಖ್ಯಮಂತ್ರಿಗಳು ದಿನ ನಿಗದಿ ಮಾಡಲಿದ್ದಾರೆ.ಎಚ್. ಸುರೇಶ, ಮುಖ್ಯ ಅಭಿಯಂತರ,
ಕೆಬಿಜೆಎನ್ನೆಲ್ ಆಲಮಟ್ಟಿ ವಲಯ ಜಲಾಶಯದಿಂದ ನೀರು ಹೊರಬಿಡದಿದ್ದರೆ ಜಲಾಶಯ ಭರ್ತಿಯಾಗುತ್ತದೆ. ಶೀಘ್ರ ಮುಖ್ಯಮಂತ್ರಿಗಳು ಕೃಷ್ಣೆಗೆ ಬಾಗಿನ ಅರ್ಪಿಸಬೇಕು.
ಅರವಿಂದ ಕುಲಕರ್ಣಿ, ಜಿಲ್ಲಾ ಪ್ರಧಾನ
ಕಾರ್ಯದರ್ಶಿ, ಅಖಂಡ ಕರ್ನಾಟಕ ರೈತ ಸಂಘ *ಶಂಕರ ಜಲ್ಲಿ