Advertisement

ಅಜಂಖಾನ್‌ರನ್ನು ಖೀಲ್ಜಿಗೆ ಹೋಲಿಸಿದ ಜಯಪ್ರದಾ

06:20 AM Mar 11, 2018 | Team Udayavani |

ಹೊಸದಿಲ್ಲಿ: ಸಮಾಜವಾದಿ ಪಕ್ಷ(ಎಸ್ಪಿ)ದ ಹಿರಿಯ ನಾಯಕ ಅಜಂಖಾನ್‌ ಅವರನ್ನು ನಟಿ ಜಯಪ್ರದಾ ಪದ್ಮಾವತ್‌ನ ಅಲ್ಲಾವುದ್ದೀನ್‌ ಖೀಲ್ಜಿಗೆ ಹೋಲಿಸಿದ್ದಾರೆ. ಒಂದು ಕಾಲದಲ್ಲಿ ಸಮಾಜವಾದಿ ಪಕ್ಷದ ಸ್ಟಾರ್‌ ಅಭ್ಯರ್ಥಿಯಾಗಿದ್ದ ನಟಿ ಜಯಪ್ರದಾ, ಪದ್ಮಾವತ್‌ನ ಖೀಲ್ಜಿ ಪಾತ್ರ ನೋಡಿದಾಗ ಅಜಂಖಾನ್‌ ಅವರೇ ನೆನಪಾದ್ರು. ಏಕೆಂದರೆ 2009ರಲ್ಲಿ ರಾಂಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ಅಜಂ ಖಾನ್‌ ನನಗೆ ಸಾಕಷ್ಟು ಕಿರುಕುಳ ನೀಡಿದ್ರು ಎಂದು ಹೇಳಿದ್ದಾರೆ. ರಾಂಪುರದಿಂದ ಸ್ಪರ್ಧಿಸಿದ್ದಾಗ ಖಾನ್‌ ಬೆಂಬಲಿಗರು ನಟಿಯ ವಿರುದ್ಧ ಅಶ್ಲೀಲ ವಿಡಿಯೋ, ಫೋಟೋಗಳಿರುವ ಸಿಡಿಗಳನ್ನು ವಿತರಿಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next