Advertisement

ನಾನೇ ಮಠ ಮಾಡಿರುವಾಗ, ನಾನೇಕೆ ಹಿಂದೂ ಧರ್ಮ ವಿರೋಧಿಸಲಿ?

06:05 AM Feb 10, 2018 | |

ದಾವಣಗೆರೆ: ನಾನು ಸಹ ಹಿಂದೂ. ನಾನೇ ಮಠ (ಕನಕ ಗುರುಪೀಠ) ಮಾಡಿರುವಾಗ ನಾನೇಕೆ ಹಿಂದೂ ಧರ್ಮ ವಿರೋಧಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಾಕಾರರಿಗೆ ಟಾಂಗ್‌ ನೀಡಿದ್ದಾರೆ.

Advertisement

ಶುಕ್ರವಾರ, ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ರಜತ ಮಹೋತ್ಸವ, ಐಎಎಸ್‌ ಮತ್ತು ಕೆಎಎಸ್‌ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಭದ್ರ ಹಿತಾಸಕ್ತಿಗಳು ಸಿದ್ದರಾಮಯ್ಯ ಹಿಂದೂ ಧರ್ಮ, ಹಿಂದೂಗಳ ವಿರೋಧಿ ಎಂಬ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿದ್ದಾರೆ. ಯಾರು ಸ್ವಾರ್ಥಕ್ಕಾಗಿ ಧರ್ಮದ ದುರ್ಬಳಕೆ ಮಾಡುತ್ತಾರೋ ಅದು ದೊಡ್ಡ ಅಪರಾಧ ಎಂದರು.

ಮಠ-ದೇವಸ್ಥಾನಗಳನ್ನು ನಿಯಂತ್ರಿಸಲು ನಾನೇಕೆ ಮುಂದಾಗಲಿ ಎಂದು ಪ್ರಶ್ನಿಸಿದ ಅವರು, ನಾನು ಹಿಂದೂ ಧರ್ಮ, ಹಿಂದುಗಳು, ಮಠ, ದೇವಸ್ಥಾನಗಳ ವಿರೋಧಿ ಎಂಬುದಾಗಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡೊಳ್ಳಿನಂತಾಗಿದ್ದೇನೆ: ಮೊದಲು ಸಿದ್ದರಾಮಯ್ಯ ಅಹಿಂದ ಎಂಬ ಅಪಪ್ರಚಾರ ಮಾಡಿದರು. ಆ ನಂತರ ಸಿದ್ದರಾಮಯ್ಯ ಅಹಿಂದ ವರ್ಗಕ್ಕೆ ಏನೂ ಮಾಡಿಲ್ಲ ಎಂಬುದಾಗಿ ಟೀಕಿಸಿದರು. ನಾನೊಂದು ರೀತಿ ಡೊಳ್ಳಿನಂತಾಗಿದ್ದೇನೆ.  ಎರಡೂ ಕಡೆ ಬಡಿಸಿಕೊಳ್ಳಬೇಕಾಗಿದೆ. ನಾನು ಹೆಂಗೆ ಸಿಕ್ಕಿ ಹಾಕಿಕೊಂಡಿದ್ದೇನೆ ಎಂಬುದನ್ನು ಜನರೇ ನೋಡಬೇಕು. ರಾಜ್ಯದ ಜನರ ಆಶೀರ್ವಾದ ಇರುವ ತನಕ ಈ ಸಿದ್ದರಾಮಯ್ಯ ಅಪಪ್ರಚಾರಕ್ಕೆ ಹೆದರೊಲ್ಲ ಎಂದು  ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next