Advertisement

ಉಡಿ ತುಂಬ್ಸೋದು ಚುನಾವಣೆ ಗಿಮಿಕ್‌

07:46 PM Mar 06, 2018 | |

ಬಳ್ಳಾರಿ: ನಗರ ಶಾಸಕ ಅನಿಲ್‌ ಲಾಡ್‌ ಶಾಸಕರಾಗಿ ಆಯ್ಕೆಯಾದ ಮೇಲೆ ಜನರಿಗೆ ಏನೂ ಮಾಡ್ಲಿಲ್ಲ. ಈಗ ಮಹಿಳೆಯರಿಗೆ ಉಡಿ
ತುಂಬ್ಸೋದು, ಬಾಡೂಟ ಹಾಕ್ಸೋದು ಮುಂತಾದ ಕಾರ್ಯಕ್ರಮ ಹಮ್ಮಿಕೊಂಡು ಚುನಾವಣೆ ಗಿಮಿಕ್‌ ನಡೆಸುತ್ತಿದಾರೆ ಎಂದು
ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ವಾಗ್ಧಾಳಿ ನಡೆಸಿದರು.

Advertisement

ನಗರದ 11ನೇ ವಾರ್ಡ್‌ನಲ್ಲಿ ಸೋಮವಾರ ಬಿಜೆಪಿ ನಗರ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಮನೆ ಮನೆಗೆ ಬಿಜೆಪಿ ಕಾರ್ಯಕ್ರಮದಲ್ಲಿ ತೊಡಗಿದ್ದಾಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ನಗರ ಶಾಸಕ ಅನಿಲ್‌ ಲಾಡ್‌ ಭಾನುವಾರ ರಾತ್ರಿ ನಗರದ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೇವಲ ಚುನಾವಣೆ ಗಿಮಿಕ್‌ ಆಗಿದೆ. ಉಡಿ ತುಂಬೋ ನೆಪದಲ್ಲಿ ಊಟ ಮಾಡಿಸಿದ್ದು ಕೂಡ ಅದನ್ನೇ ಸೂಚಿಸುತ್ತದೆ. ಐದು ವರ್ಷ ಏನೂ ಮಾಡದೇ ಇರೋರು ಈಗ ಏಕಾಏಕಿ ಹೀಗೆ ಮಾಡ್ತಾರೆ ಅಂದ್ರೆ ಅದು ಚುನಾವಣೆ ಗಿಮಿಕ್‌ ಬಿಟ್ರೆ ಬೇರೇನೂ ಇಲ್ಲ. ಜನ್ರು ಬಿಜೆಪಿಗೆ ಬೆಂಬಲ ಕೊಡ್ತಾ ಇದಾರೆ. ಬಿಜೆಪಿ ಈ ಬಾರಿ ಗೆದ್ದೇ ಗೆಲ್ಲುತ್ತೆ ಎಂದರು.

ಬಿಜೆಪಿ ಪರಿವರ್ತನಾ ಯಾತ್ರೆ ಮುಗಿದ ಬಳಿಕ ಜನ್ರು ನಮ್ಮನ್ನು ತಮ್ಮ ಮನೆಗೆ ಆಹ್ವಾನಿಸುತ್ತಿದ್ದಾರೆ. ತಮ್ಮ ಪ್ರದೇಶಗಳಲ್ಲಿರುವ ಸಮಸ್ಯೆಗಳನ್ನು ನನ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. 20-25 ದಿನಕ್ಕೊಮ್ಮೆ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ. ಕರೆಂಟು ಇಲ್ಲ. ಬೀದಿ ದೀಪಗಳಿಲ್ಲ. ರಸ್ತೆಗಳು ಹಾಳಾಗಿವೆ. ಇಲ್ಲಿ ಅನೇಕರಿಗೆ ಇಂದಿಗೂ ಮನೆಗಳೇ ಇಲ್ಲ. ಬಾಡಿಗೆ ಮನೆಯಲ್ಲಿ ಜನ್ರು ವಾಸಿಸುತ್ತಿದ್ದಾರೆ. ಕಳೆದ ಬಾರಿ ನಮ್ಮ ಸರ್ಕಾರ ಇದ್ದಾಗ 300 ಎಕರೆ ಪ್ರದೇಶ ಖರೀದಿಸಿ ಮನೆ ಕಟ್ಟಿಸಿಕೊಡಲು ನಿರ್ಧರಿಸಿದ್ದೆವು. ಜನರಿಂದ ಈಗ ದುಡ್ಡು
ಕಟ್ಟಿಸಿಕೊಂಡಿರುವ ಶಾಸಕ ಅನಿಲ್‌ ಲಾಡ್‌, ಮುಖ್ಯಮಂತ್ರಿ ಸಿದ್ಧರಾಮಯ್ಯ ಬಡವರಿಗೆ ಇಂದಿಗೂ ಮನೆ ಕಟ್ಟಿಸಿಕೊಡಲಾಗಲಿಲ್ಲ
ಎಂದು ಆರೋಪಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಎಸ್‌ವೈ ಅವರ ಕಾಲು ಮುಗಿದಾದ್ರೂ ಜನರಿಗೆ ಮನೆ ಕಟ್ಟಿಸಿ ಅವರಿಗೆ ಉಚಿತವಾಗಿ ಕೀಲಿ ಕೈ ಕೊಡುತ್ತೇವೆ. ಬಿಜೆಪಿ ಸರ್ಕಾರದಲ್ಲಿ ರೂಪುಗೊಂಡಿದ್ದ ಯೋಜನೆಗಳು ಮತ್ತು ಅನುದಾನ ಬಳಕೆ ಮಾಡಿಕೊಂಡು ಅನುಷ್ಠಾನಗೊಳಿಸಲು ಕಾಂಗ್ರೆಸ್‌ನವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಜನ್ರು ಬೇಸತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಶ್ರೀನಿವಾಸ್‌ ಮೋತ್ಕರ್‌, ಎಸ್‌.ಮಲ್ಲನಗೌಡ,
ಮಾಜಿ ಸದಸ್ಯ ಸಿದ್ಧನಗೌಡ, ಬಿಜೆಪಿ ಮುಖಂಡರಾದ ವೀರಶೇಖರರೆಡ್ಡಿ, ಕೃಷ್ಣಾ ರೆಡ್ಡಿ, ಪ್ರಸಾದ್‌ ರೆಡ್ಡಿ ಕೊಳಗಲ್‌, ವಸಂತ್‌ ಬೆಲ್ಲಂ, ಪದ್ಮಾವತಿ ರೆಡ್ಡಿ, ಸುಮಾ ರೆಡ್ಡಿ, ಶೈಲಜಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next