Advertisement

ಹೆಣ್ಣನ್ನು ಹೆಣ್ಣೇ ರಕ್ಷಿಸದಿದ್ದರೆ ಹೇಗೆ? ಸುಪ್ರೀಂ ಕೋರ್ಟ್‌

09:12 AM Jan 12, 2022 | Team Udayavani |

ನವದೆಹಲಿ: “ಒಬ್ಬ ಹೆಣ್ಣನ್ನು ಇನ್ನೊಬ್ಬ ಹೆಣ್ಣೇ ರಕ್ಷಿಸದೇ ಹೋದರೆ ಹೇಗೆ? ಹೀಗೆ ಮಾಡಿದರೆ ಮಹಿಳೆಯರೇ ದುರ್ಬಲರಾಗುತ್ತಾ ಹೋಗುತ್ತಾರೆ’ ಹೀಗೆಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯ ಪಟ್ಟಿದೆ.

Advertisement

ಅತ್ತೆಯಿಂದ ವರದಕ್ಷಿಣೆ ಕಿರುಕುಳ ತಡೆಯಲಾರದೆ ಸೊಸೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದ ಆರೋಪಿಯಾಗಿರುವ 64 ವರ್ಷದ ಮಹಿಳೆಯ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಾಲಯ ಈ ಮಾತನ್ನಾಡಿದೆ.

“ಮಹಿಳೆ ತನ್ನ ಸೊಸೆಯ ಮೇಲೇ ಕ್ರೂರತ್ವ ತೋರಿಸುವುದು ತುಂಬ ಗಂಭೀರ ಅಪರಾಧ’ ಎಂದು ನ್ಯಾಯಾಲಯ ಹೇಳಿದೆ. ಆರೋಪಿ ಅತ್ತೆಗೆ 3 ತಿಂಗಳ ಜೈಲುವಾಸವನ್ನು ಶಿಕ್ಷೆಯಾಗಿ ವಿಧಿಸುವ ಸಾಧ್ಯತೆಯಿದೆ.

ಇದನ್ನೂ ಓದಿ:ಗೂಗಲ್‌ ಸಂಸ್ಥೆಯ ಜಿ-ಮೇಲ್‌ ಆ್ಯಪ್‌ ಸಾವಿರ ಕೋಟಿ ಡೌನ್‌ಲೋಡ್‌!

 

Advertisement
Advertisement

Udayavani is now on Telegram. Click here to join our channel and stay updated with the latest news.

Next