Advertisement

Video: SBI ಬ್ಯಾಂಕಿಗೆ ದಿಢೀರ್ ಭೇಟಿ ನೀಡಿದ ಗೂಳಿ… ಕಂಗಾಲಾದ ಗ್ರಾಹಕರು

01:19 PM Jan 11, 2024 | Team Udayavani |

ಉತ್ತರ ಪ್ರದೇಶದ ಉನ್ನಾವೊದ ಶಹಗಂಜ್ ಪ್ರದೇಶದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಗೂಳಿಯೊಂದು ಎಂಟ್ರಿ ಕೊಟ್ಟಿದೆ, ಈ ವೇಳೆ ಬ್ಯಾಂಕಿನೊಳಗೆ ಇದ್ದ ಗ್ರಾಹಕರು ಹಾಗೂ ಸಿಬ್ಬಂದಿಗಳು ಒಮ್ಮೆ ಗಲಿಬಿಲಿಯಾಗಿದ್ದಾರೆ.

Advertisement

ಬ್ಯಾಂಕಿನೊಳಗೆ ಪ್ರವೇಶಿಸಿದ ಗೂಳಿ ಯಾರಿಗೂ ತೊಂದರೆ ಕೊಡದೆ ತನ್ನ ಪಾಡಿಗೆ ನಿಂತು ಬಿಟ್ಟಿದೆ ಇದನ್ನು ಕಂಡ ಕೆಲ ಗ್ರಾಹಕರು ಬೇಗ ಬೇಗನೆ ಕೆಲಸ ಮುಗಿಸಿ ಬ್ಯಾಂಕ್ ನಿಂದ ಹೊರ ಹೋಗಿದ್ದಾರೆ ಇನ್ನೂ ಕೆಲವರು ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ ಬದುಕಿದೆಯಾ ಬಡ ಜೀವ ಎನ್ನುತ್ತಾ ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ.

ಇದರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸುಮಾರು ಮೂವತ್ತು ಸೆಕುಂಡುಗಳ ವಿಡಿಯೋದಲ್ಲಿ ಗೂಳಿ ಸುಮ್ಮನೆ ನಿಂತಿದ್ದು ಅದನ್ನು ಕಂಡ ಕೆಲ ಗ್ರಾಹಕರು ಆಶ್ಚರ್ಯದಿಂದ ನೋಡಿದರೆ ಇನ್ನು ಕೆಲವರು ಭಯಗೊಂಡು ಹೊರ ಓಡಿದ್ದಾರೆ. ಬಳಿಕ ಬಂದ ಭದ್ರತಾ ಸಿಬಂದಿ ಗೂಳಿಯನ್ನು ಬ್ಯಾಂಕ್ ನಿಂದ ಹೊರ ಓಡಿಸಿದ್ದಾರೆ.

ಮಾಹಿತಿ ಪ್ರಕಾರ ಬ್ಯಾಂಕ್ ನ ಹೊರಭಾಗದಲ್ಲಿ ಎರಡು ಗೂಳಿಗಳು ಕಾದಾಡಿಕೊಂಡಿವೆ ಈ ವೇಳೆ ಒಂದು ಗೂಳಿ ಸೀದಾ ಬ್ಯಾಂಕ್ ಒಳಗೆ ಪ್ರವೇಶಿದೆ ಎಂದು ಹೇಳಲಾಗಿದೆ ಗೂಳಿ ಬ್ಯಾಂಕ್ ಪ್ರವೇಶಿಸುವ ವೇಳೆ ಭದ್ರತಾ ಸಿಬಂದಿ ಪ್ರವೇಶ ದ್ವಾರದಲ್ಲಿ ಇರಲಿಲ್ಲ ಹಾಗಾಗಿ ಗೂಳಿ ಆರಾಮವಾಗಿ ಬ್ಯಾಂಕ್ ಪ್ರವೇಶಿಸಿದೆ ಎನ್ನಲಾಗಿದೆ. ಘಟನೆಯಿಂದ ಯಾರಿಗೂ ತೊಂದರೆ ಆಗಲಿಲ್ಲ. ಬ್ಯಾಂಕಿನಲ್ಲೂ ಕಡಿಮೆ ಗ್ರಾಹಕರು ಇದ್ದ ಪರಿಣಾಮ ಹೆಚ್ಚಿನ ತೊಂದರೆ ಆಗಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next