Advertisement

ಪ್ರೇಯಸಿಯೊಂದಿಗೆ ಅಪಾಯಕಾರಿ ವೀಲ್ಹಿಂಗ್‌ ಮಾಡಿದ್ದ ಯುವಕ ಅರೆಸ್ಟ್‌

09:05 AM Jun 12, 2019 | Vishnu Das |

ಬೆಂಗಳೂರು: ದೇವನಹಳ್ಳಿ ಮುಖ್ಯರಸ್ತೆಯಲ್ಲಿ ಯುವತಿಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಅಪಾಯಕಾರಿ ವೀಲ್ಹಿಂಗ್‌ ಮಾಡಿ ಸುದ್ದಿಯಾಗಿದ್ದ ಯುವಕನನ್ನು ಬಂಧಿಸುವಲ್ಲಿ ಹೆಬ್ಬಾಳ ಟ್ರಾಫಿಕ್‌ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ನೂರ್‌ ಅಹಮದ್‌ ಎನ್ನುವವನಾಗಿದ್ದು,ಬಿ.ಕಾಂ ಮುಗಿಸಿ ಉದ್ಯೋಗ ಹುಡುಕುತ್ತಿದ್ದಾನೆ.

ಜೂನ್‌ 4 ರಂದು ಪ್ರೇಯಸಿಯನ್ನು ನಂದಿಬೆಟ್ಟಕ್ಕೆ ಕರೆದೊಯ್ಯುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಅಪಾಯಕಾರಿ ಸ್ಟಂಟ್‌ಗಳನ್ನು ಪ್ರದರ್ಶಿಸಿದ್ದ. ದುಸ್ಸಾಹಸದ ವಿಡಿಯೋವನ್ನು ಯುವತಿಯೊಬ್ಬಳು ಚಿತ್ರೀಕರಿಸಿ ಹಲೋ ಆ್ಯಪ್‌ನಲ್ಲಿ ಪೋಸ್ಟ್‌ ಮಾಡಿದ್ದಳು. ಆ ವಿಡಿಯೋ ವೈರಲ್‌ ಆಗಿ ಮಾಧ್ಯಮಗಳಲ್ಲೂ ಸುದ್ದಿಯಾಗಿತ್ತು.

ಸ್ವಯಂ ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ನೂರ್‌ ಅಹಮದ್‌ನನ್ನು ಬಂಧಿಸಿದ್ದಾರೆ.

ಸ್ನೇಹಿತನ ಸ್ಕೂಟಿಯಲ್ಲಿ ಜಾಲಿ ರೈಡ್‌ !
ನೂರ್‌ ಅಹಮದ್‌ ಸಾಹಸಕ್ಕೆ ಬಳಿಸಿಕೊಂಡ ಸ್ಕೂಟಿ ಸ್ನೇಹಿತ ಇಮ್ರಾನ್‌ ನದ್ದಾಗಿತ್ತು. ಸ್ಕೂಟಿ ನಂಬರ್‌ ಜಾಡು ಹಿಡಿದು ಪೊಲೀಸರು ತನಿಖೆ ಮಾಡಿದ್ದಾರೆ. ತನಿಖೆ ವೇಳೆ ಇಮ್ರಾನ್‌ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ನೂರ್‌ ಅಹ್ಮದ್‌ನನ್ನು ವಶಕ್ಕೆ ಪಡೆದು ಸ್ಕೂಟಿಯನ್ನು ಜಪ್ತಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next