ಹುಣಸೂರು: ಹುಣಸೂರು ನಗರ ಠಾಣಾವ್ಯಾಪ್ತಿಯ 12 ಗಂಭೀರ ಪ್ರಕರಣ ಎದುರಿಸುತ್ತಿರುವ ರೌಡಿಶೀಟರ್ ವಾಸಿಂ ಅಲಿಯಾಸ್ ವೀಲ್ ವಾಸಿಂಗೆ ಒಂದು ವರ್ಷ ಕಾಲ ಗಡಿಪಾರು ಮಾಡಿ ಸಲಹಾಮಂಡಳಿ ಆದೇಶಿಸಿದೆ.
ನಗರದ ಮುಸ್ಲಿಂ ಬ್ಲಾಕ್ ನಿವಾಸಿ ಅಕ್ರಂ ಶರೀಪ್‌ರ ಪತ್ರ ರೌಡಿಶೀಟರ್ ವಾಸಿಂ ಆಲಿಯಾಸ್ ವೀಲ್ ವಾಸಿಮ್ ವಿರುದ್ಧ ನಗರ ಠಾಣೆಯಲ್ಲಿ 12 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈತ ಅಕ್ರಮ ಕೂಟದಲ್ಲಿ ಸೇರಿ ದೊಂಬಿ, ಮಹಿಳೆಯರ ಮೇಲೆ ದೌರ್ಜನ್ಯ, ಪೊಲೀಸರ ಮೇಲೆ ಹಲ್ಲೆ, ಕೊಲೆ ಯತ್ನ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡುವುದು ಇತರೆ ಗಂಭೀರ ಆರೋಪಗಳ ಅಪರಾಧಗಳನ್ನು ಮಾಡುತ್ತಿದ್ದರಿಂದ ಹಲವಾರು ಅಪರಾಧ ಕುಕೃತ್ಯಗಳಲ್ಲಿ ಭಾಗಿಯಾಗಿರುವುದರಿಂದ ಬಂಧನದಲ್ಲಿ ಇಡಲು ಸಾಕಷ್ಟು ಕಾರಣಗಳು ಇರುವುದರಿಂದ ಗೂಂಡಾ ಕಾಯಿದೆ ಅಡಿಯಲ್ಲಿ ಮುಂದಿನ ಒಂದು ವರ್ಷದವರೆಗೆ ಬಂಧನದಲ್ಲಿ ಇಡಲು ಹೈಕೋರ್ಟ್ ಸಲಹಾ ಮಂಡಳಿಯ ಸೂಚಿಸಿದ್ದು, ವಾಸಿಂ ಮುಂದಿನ ವರ್ಷ ಕಾಲ ಹಿಂಡಗಾಲ ಕಾರಾಗೃಹದಲ್ಲೇ ಕಳೆಯಬೇಕಿದೆ.
ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೀಮಾ ಲಾಟ್ಕರ್‌ರವರು ಸಲಹಾ ಸಮಿತಿಯ ಮುಂದೆ ಹಾಜರಾಗಿ, ವಾಸಿಂ ಬಂಧನದ ಸಾಕಷ್ಟು ಕಾರಣಗಳನ್ನು ದಾಖಲೆಗಳ ಸಮೇತ ಮಂಡಿಸಿದ್ದರು. ಪ್ರಸ್ತಾವನೆಯನ್ನು ತಯಾರು ಮಾಡಲು ಶ್ರಮಿಸಿದ ಪೇದೆ ಎಸ್.ಎ.ಮನೋಹರರವರ ಕಾರ್ಯವನ್ನು ಮೇಲಾಧಿಕಾರಿಗಳು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಭೇಟೆಗೆಂದು ತೆರೆಳಿದ್ದ ವ್ಯಕ್ತಿಯನ್ನು ಗುಂಡಿಟ್ಟು ಕೊಂದ ಶ್ವಾನ ! ನಡೆದಿದ್ದರೂ ಏನು?