Advertisement
ಭಾರತದಲ್ಲಿ ತನ್ನ ಬಳಕೆದಾರರಿಗೆ ಹಣಕಾಸು ಸೇವೆಗಳಿಗೆ ವ್ಯಾಪಕ ಅವಕಾಶವನ್ನು ಒದಗಿಸಲು ಈ ವರ್ಷದ ಅಂತ್ಯದ ವೇಳೆಗೆ ಸ್ಯಾಚೆಟ್-ಗಾತ್ರದ ಆರೋಗ್ಯ ವಿಮೆಯನ್ನು ತನ್ನ ಪ್ಲಾಟ್‌ಫಾರ್ಮ್ ಮೂಲಕ ಖರೀದಿಸಲು ಅನುಕೂಲವಾಗಲಿದೆ ಎಂದು ವಾಟ್ಸ್‌ಆ್ಯಪ್ ಬುಧವಾರ ಹೇಳಿದೆ.
Related Articles
Advertisement
ಈ ಯೋಜನೆಯ ಪ್ರಾರಂಭದ ಮೊದಲ ಹಂತದಲ್ಲಿ, ಕಂಪೆನಿಯು ಆರೋಗ್ಯ ವಿಮೆಗಾಗಿ ಎಸ್‌ಬಿಐ ಜನರಲ್ ಜತೆ ಪಾಲುದಾರಿಕೆ ಹೊಂದಿದೆ. ಅಲ್ಲದೆ ಪಿಂಚಣಿ ಪ್ರಾರಂಭಿಸಲು ಎಚ್‌ಡಿಎಫ್‌ಸಿ ಪಿಂಚಣಿ ಯೋಜನೆ (ಎನ್‌ಪಿಎಸ್) ಉತ್ಪನ್ನವನ್ನು ಪ್ರಾರಂಭಿಸಲು ಸಿದ್ಧವಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಬ್ಯಾಂಕಿಂಗ್ ಪಾಲುದಾರರ ಬೆಂಬಲದೊಂದಿಗೆ ” ಯುಪಿಐ ಮೂಲಕ ಪಾವತಿ ಫೀಚರ್ ವೈಶಿಷ್ಟ್ಯವು ಈಗ ದೇಶಾದ್ಯಂತದ ಬಳಕೆದಾರರಿಗೆ (ಪ್ರಸ್ತುತ 20 ಮಿಲಿಯನ್ ಬಳಕೆದಾರರಿಗೆ) ಲಭ್ಯವಿದೆ.
ಭಾರತದಲ್ಲಿ 400 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದ್ದು, ಅತೀ ದೊಡ್ಡ ಮಾರುಕಟ್ಟೆಯಾಗಿದೆ. ಈ ವರ್ಷದ ಅಂತ್ಯದ ವೇಳೆಗೆ, ಜನರು ಕೈಗೆಟುಕುವ ಸ್ಯಾಚೆಟ್ ಗಾತ್ರವನ್ನು ಖರೀದಿಸಲು ಸಾಧ್ಯವಾಗಲಿದೆ. ಎಸ್‌ಬಿಐ ಜನರಲ್‌ನಿಂದ ಕೈಗೆಟುಕುವ ಆರೋಗ್ಯ ವಿಮಾ ರಕ್ಷಣೆಯನ್ನು ವಾಟ್ಸ್‌ಆ್ಯಪ್ ಮೂಲಕ ಖರೀದಿಸಬಹುದಾಗಿದೆ.
ಭಾರತವನ್ನು ತನ್ನ ಅತೀದೊಡ್ಡ ಮಾರುಕಟ್ಟೆಯೆಂದು ಪರಿಗಣಿಸುವ ವಾಟ್ಸ್‌ಆ್ಯಪ್ ದೇಶದ ಪೇಟಿಎಂ, ಗೂಗಲ್ ಪೇ, ವಾಲ್ಮಾರ್ಟ್ ಒಡೆತನದ ಫೋನ್ ಪೇ ಮತ್ತು ಅಮೆಜಾನ್ ಪೇ ನಂತಹ ಪಾವತಿ ಅಗ್ರಿಗೇಟರ್‌ಗಳ ಜತೆ ಸ್ಪರ್ಧಿಸಲಿದೆ. ಇದಕ್ಕೆ ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರಿರುವ ಕಾರಣ ಬಹಳ ಬೇಗನೇ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಲಿದೆ.