ಬೆಂಗಳೂರು: ಕೋಟ್ಯಂತರ ಜನ ಪ್ರತಿನಿತ್ಯ ವಾಟ್ಸಪ್ ನಲ್ಲಿ ಸಂದೇಶಗಳನ್ನು, ಫೋಟೋ – ವಿಡಿಯೋಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಇದೇ ವಾಟ್ಸಾಪ್ ನಲ್ಲಿ ಹಣ ವರ್ಗಾವಣೆಯ ವ್ಯವಸ್ಥೆ ಇದ್ದರೆ ಹೇಗಿರುತ್ತೆ ಅಲ್ವಾ…!
ಡಿಜಿಟಲ್ ಭಾರತದ ಕ್ರಾಂತಿಯ ನಂತರ ದಿನಗಟ್ಟಲೆ ತಗೆದುಕೊಳ್ಳುತ್ತಿದ್ದ ಹಣ ವರ್ಗಾವಣೆ ಈಗ ಆನ್ ಲೈನ್ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಮಾಡಬಹುದಾಗಿದೆ.
ಇದೀಗ ವಾಟ್ಸಪ್ ಕೂಡ ಹಣ ವರ್ಗಾವಣೆಯ ಸೇವೆಯನ್ನು ನೀಡಲು ಮುಂದಾಗಿದ್ದು – UPI ನ ಮೂಲಕ ಕೆಲವೇ ಕ್ಷಣಗಳಲ್ಲಿ ನಿಮ್ಮ ಗೆಳೆಯರಿಗೆ ಹಣವನ್ನು ಕಳುಹಿಸಬಹುದು – ಪಡೆಯಬಹುದು.
ಭಾರತದಲ್ಲಿ ಸದ್ಯ ಈ ಸೇವೆ ಪರಿಕ್ಷಾರ್ಥ ಹಂತದಲ್ಲಿದ್ದು ಇನ್ನೇನು ಕೆಲವೇ ದಿನಗಳ್ಳಲಿ ಪ್ರತಿಯೊಬ್ಬರಿಗೂ ದೊರೆಯಲಿದೆ.
ವಾಟ್ಸಾಪ್ ಮೂಲಕ ಹಣ ವರ್ಗಾವಣೆಯ ವಿಧಾನ :
● ಮೊದಲಿಗೆ ಮೇಲಿನ ಬಲ ಮೂಲೆಯಲ್ಲಿರುವ ಮೂರು ಚುಕ್ಕಿಗಳ ಮೇಲೆ ಆಯ್ಕೆ ಮಾಡಿಕೊಂಡರೆ – Settings ( ಸಂಯೋಜನೆಗಳು ) ಆಯ್ಕೆ ಮಾಡಿಕೊಂಡು.
● ಮುಂದೆ ನೀವು Payments ( ಪಾವತಿ ) ಎಂಬ ಆಯ್ಕೆಯನ್ನು ಆಯ್ದುಕೊಂಡು ನಂತರ ನಿಮ್ಮ ಖಾತೆಯುಳ್ಳ ಬ್ಯಾಂಕ್ ಅನ್ನು ಆಯ್ಕೆಮಾಡಿಕೊಳ್ಳಬೇಕು.
(* ನಿಮ್ಮ ಫೋನ್ ನಂ. ಬ್ಯಾಂಕಿನೊಂದಿಗೆ ಕಡ್ಡಾಯವಾಗಿ ಲಿಂಕ್ ಆಗಿರಬೇಕು )
● ನಂತರ ನಿಮ್ಮ ಬ್ಯಾಂಕ್ ಖಾತೆ ನಿಮಗೆ ಕಾಣಸಿಗಲಿದ್ದು ಅದನ್ನು ಆಯ್ಕೆಮಾಡಿಕೊಳ್ಳಬೇಕು .
● ನಂತರ ನಿಮಗೆ ಬೇಕಾದ ವ್ಯಕ್ತಿಗೆ ಹಣ ವರ್ಗಾವಣೆ ಮಾಡಬಹುದು,ಮೊದಲ ವರ್ಗಾವಣೆಯ ವೇಳೆ ಹೊಸದಾಗಿ ಆರು ಅಂಕೆಗಳ ಒಂದು UPI ಪಿನ್ ನಂ`ಅನ್ನು ನಮೂದಿಸಬೇಕು – ಇದನ್ನು ಎಲ್ಲ ವರ್ಗಾವಣೆಗಳಿಗೂ ಬಳಸಬಹುದು.
● ನಿಮ್ಮಲ್ಲಿ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಇದ್ದರೆ ಅದನ್ನು ಸೇರಿಸಿಕೊಳ್ಳಬಹುದು – ಬೇಡವಾದಲ್ಲಿ ತೆಗೆದುಹಾಕಬಹುದು. ಹೀಗೆ ನೀವು ವಾಟ್ಸಾಪ್ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು. ಸದ್ಯ ಈ ಸೇವೆ ಪರಿಕ್ಷಾರ್ಥ ಹಂತದಲ್ಲಿದ್ದು ಇನ್ನೇನು ಕೆಲವೇ ದಿನಗಳ್ಳಲಿ ಪ್ರತಿಯೊಬ್ಬರ ಫೋನ್ನಲ್ಲೂ ದೊರೆಯಲಿದೆ.
*ಸೂರಜ್ ಅಣ್ವೇಕರ್, ಬೆಂಗಳೂರು