ಸಾಗರ: ಪ್ರವಾಸಿಗರ ಕಾರಣದಿಂದ ಸದಾ ಕಸದಿಂದ ಅಂದ ಕಳೆದುಕೊಳ್ಳುವ ತನ್ನ ಗ್ರಾಮದ ಸಮಸ್ಯೆ ಬಗೆಹರಿಸಲು ಪ್ರತಿ ಭಾನುವಾರ ವಾಟ್ಸ್ ಆ್ಯಪ್ ತಂಡವೊಂದು ಕಸ ವಿಲೇವಾರಿ ನಡೆಸಲು ಮುಂದಾಗಿರುವ ಚಟುವಟಿಕೆ ತಾಲೂಕಿನ ತಾಳಗುಪ್ಪದಲ್ಲಿ ಕಂಡುಬಂದಿದೆ.
ಪ್ರತೀ ಭಾನುವಾರ ಬೆಳಗ್ಗೆ ಎಂಟೂವರೆಯಿಂದ ಹತ್ತೂವರೆವರೆಗೆ ಆಸಕ್ತರು ಪಟ್ಟಣದ ಹೆಚ್ಚು ಕಸವಿದ್ದ ಜಾಗದಲ್ಲಿ ಸೇರುವುದು. ಎರಡು ತಾಸು ಅವ ಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟುಚೊಕ್ಕ ಮಾಡುವುದು. ನಂತರ ಇಷ್ಟು ಕೆಲಸ ಮಾಡಿದ್ದೇವೆ. ಮುಂದಿನ ಜವಾಬ್ದಾರಿ ನಿಮ್ಮದು ಎಂದು ಗ್ರಾಪಂ ಅ ಧಿಕಾರಿಗಳಿಗೆ ಕರೆ ಮಾಡಿ ತಿಳಿಸಿ ಹೊರಡುವುದು. ಮುಂದಿನ ವಾರ ಹೊಸ ಜಾಗ ಎಂದುತೀರ್ಮಾನಿಸಲಾಗಿದೆ ಎಂದು ನಮ್ಮೂರು ತಾಳಗುಪ್ಪ ಎಂಬ ವಾಟ್ಸ್ ಆ್ಯಪ್ ಗ್ರೂಪ್ ಮಾಡಿರುವ ಪ್ರಸನ್ನ ಗೂರ್ಲುಕೆರೆ ತಿಳಿಸುತ್ತಾರೆ.
ಇದನ್ನೂ ಓದಿ:ಅಗೆದಿರುವ ರಸ್ತೆದುರಸ್ತಿಗೊಳಿಸಿ: ಶಾಸಕ ತಿಪ್ಪಾರೆಡ್ಡಿ
ಕಳೆದ ಭಾನುವಾರ ಪ್ರಾಯೋಗಿಕವಾಗಿ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚೊಕ್ಕಟ ಮಾಡುವ ಕೆಲಸಕ್ಕೆ ಲಕ್ಷ್ಮೀನಾರಾಯಣ, ಮಾಜಿ ಸದಸ್ಯೆ ವಿನೋದಾ ಚಿಂತಾಮಣಿ, ಪಶು ವೈದ್ಯರಾಘವೇಂದ್ರ, ರೈತಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮೊದಲಾದವರು ಸ್ವಯಂಪ್ರೇರಿತರಾಗಿ ಬಂದಿದ್ದು ಉತ್ತಮಚಾಲನೆ ದೊರೆತಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪಕ್ಕದ ಗ್ರಾಮವಾಗಿ, ಜಗತøಸಿದ್ಧ ಜೋಗಕ್ಕ ತೆರಳುವ ಪ್ರವಾಸಿಗರಿಂದ ಸದಾ ಸ್ವತ್ಛತೆಗೆ ಒತ್ತಡ ಅನುಭವಿಸುವ ತಾಳಗುಪ್ಪಕ್ಕೆ ಈ ಚಟುವಟಿಕೆಗೆ ಹೆಚ್ಚಿನ ಜನಬೆಂಬಲ ಸಿಕ್ಕಿದರೆ ಕೆಲ ಮಟ್ಟಿಗೆ ಪರಿಸ್ಥಿತಿ ಸುಧಾರಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.