Advertisement

ವಾಟ್ಸಾಪ್‌ ಕತೆ: ಬಾಡಿಗೆದಾರ!

09:08 PM Jul 27, 2019 | mahesh |

ನಮ್ಮ ಮನೆಯಿಂದ ಒಂದೈವತ್ತು ಅಡಿ ದೂರದಲ್ಲಿರುವ ಮಠದ್‌ ಮನೆಯ ಮನೆಯೆರಡು ಖಾಲಿಯಾಗಿ ಒಂದೆರಡು ತಿಂಗಳುಗಳೇ ಗತಿಸಿದ್ದರೂ ಯಾವ ಬಾಡಿಗೆದಾರರೂ ಬಂದಿರಲಿಲ್ಲ. ಆ ಹಿಂದೆ ಇದ್ದವರಿಗೂ ನಮಗೂ ಅವರು ಬೀದಿಗೆ ಎಸೆಯುತ್ತಿದ್ದ ಕಸದಿಂದಾಗಿ ಮನಸ್ತಾಪವಾಗಿತ್ತು. ಪುನಃ ಅಂತಹ ಗಿರಾಕಿಗಳು ಬಂದರೇನು ಮಾಡುವುದು ಅಂತ ಯೋಚನೆಯಾಗಿತ್ತು.

Advertisement

ಆದರೆ, ಆನಂತರ ಕಪ್ಪನೆಯ ಗಟ್ಟಿಮುಟ್ಟಾದ ಕುಳ್ಳ ವ್ಯಕ್ತಿ ಬೆಳ್ಳನೆಯ ಇಜ್ಜೋಡು ಹೆಂಡತಿಯೊಂದಿಗೆ ಬಂದಿಳಿದ. ಅವರ ಓಡಾಟ ಮಾತುಕತೆ ಸುಶಿಕ್ಷಿತ ಜನರಂತೆ ಇದ್ದುದಲ್ಲದೇ, ಕಸವನ್ನು ಕಸದ ಗಾಡಿಗೆ ಹಾಕುವಷ್ಟು ಸ್ವಚ್ಛ ಭಾರತ ಯೋಜನೆಗೆ ಪುಷ್ಟೀಕರಿಸುವಂತಿದ್ದವು. ಆ ಮಟ್ಟಿಗೆ ಸಂತಸವಾಗದಿರಲಿಲ್ಲ.

ಇಡೀ ಕಾಲೊನಿಗೆ, ನಾನೊಬ್ಬನೇ ಪದ್ಮಾವತಪ್ಪ ಆಗಿದ್ದೆ, ಅರುಣೋದಯಕ್ಕೆ ಮುಂಚಿತವಾಗಿ ವಾಕಿಂಗ್‌ ಹೋಗುತ್ತಿದ್ದವನೆಂಬ ಜಂಭ ಬೇರೆ. ಆದರೆ, ಈ ಕರಿಯಪ್ಪ, ನನ್ನನ್ನು ನೋಡಿಯೋ ಏನೋ ಮಡದಿಯೊಂದಿಗೆ ವಾಕ್‌ ಮಾಡಲು ಶುರು ಮಾಡಿದ್ದ! ಆದರೆ, ನನ್ನ ದಾರಿ ಮತ್ತು ಅವರವು ಬೇರೆ ಬೇರೆಯಾಗಿದ್ದರಿಂದ, ಯಾವುದೇ ಮೇಲಾಟಕ್ಕೆ ಆಸ್ಪದವಿರಲಿಲ್ಲ.

ಆದರೆ, ನಾನು ಹಿಂತಿರುಗುವಾಗ, ಸರ್ಕಾರಿ ಕಚೆೇರಿಯ ಮುಂದಿದ್ದ ಗಂಟೆಹೂಗಳನ್ನು ಕಿತ್ತುಕೊಂಡು ಬರುತ್ತಿದ್ದುದನ್ನು ಗಮನಿಸಿದ ಆತ ಲೆಕ್ಕ ಹಾಕಿಕೊಂಡವನಂತೆ, ನನಗಿಂತಲೂ ಬೇಗನೆ ಎದ್ದವನು ಮಡದಿಯ ಗೋಜಿಗೆ ಹೋಗದೇ, ಒಬ್ಬನೇ ನನಗಿಂತ ಬೇಗನೆ ಹೋಗಿ, ಆ ಹೂವುಗಳನ್ನು ಕಿತ್ತು ತರಹತ್ತಿದ್ದ. ಎಲಾ ಇವನ! ನನ್ನ ಗಳಿಕೆಗೆ ಕನ್ನಹಾಕಹತ್ತಿದನಲ್ಲ ! ಎಂದುಕೊಂಡು ಅವನಿಗಿಂತ ಬೇಗ ಹೋಗಹತ್ತಿದೆ. ಅದನ್ನರಿತ ಅವನು, ಅದು ಯಾವಾಗ ಮಲಗುವನೋ ಅದು ಯಾವಾಗ ಹೋಗುವನೋ ಎಂಬಂತೆ ಅಷ್ಟೊತ್ತಿಗೇ ಹೋಗಿ ಹೂವನ್ನೆಲ್ಲ ಕಿತ್ತುಕೊಂಡು ಬರಹತ್ತಿದ. ನನ್ನ ಪಾಲನ್ನು ಅವನೇ ಉಣ್ಣಹತ್ತಿದ್ದಾನೆ. ಅವನೊಂದಿಗೆ ಜಗಳ ಮಾಡಲೇ- ಎನ್ನಿಸಿತ್ತು.

ಯಾಕೆ ಜಗಳ ಮಾಡಬೇಕು; ಅವನು ಹೂವುಗಳನ್ನು ಅರ್ಪಿಸುವ ದೇವರು ಮತ್ತು ನಾನು ಹೂವುಗಳನ್ನು ಅರ್ಪಿಸುವ ದೇವರು ಒಂದೇ ಆಗಿರುವಾಗ !

Advertisement

ಶರಣ ಗೌಡ ಎರಡೆತ್ತಿನ

Advertisement

Udayavani is now on Telegram. Click here to join our channel and stay updated with the latest news.

Next