Advertisement

ವಾಟ್ಸ್‌ಆ್ಯಪ್‌ ಗ್ರೂಪ್‌ ಅಡ್ಮಿನ್‌ಗೆ ಸಂದೇಶ ಅಳಿಸುವ ಅಧಿಕಾರ; ಏನಿದು ಹೊಸ ವ್ಯವಸ್ಥೆ

11:33 AM Jan 28, 2022 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ವಾಟ್ಸ್‌ಆ್ಯಪ್‌ ಗ್ರೂಪ್‌ನ ಸದಸ್ಯರು ಆಶಯಗಳಿಗೆ ವಿರುದ್ಧವಾಗಿ ಪೋಸ್ಟ್‌ ಅಥವಾ ಮಾಹಿತಿ ಹಾಕಿದರೆ, ಸಂದೇಶ ಹಾಕಿದ ವ್ಯಕ್ತಿಯ ಅನುಮತಿಗೆ ಕಾಯದೆ ಅದನ್ನು ಡಿಲೀಟ್‌ ಮಾಡುವ ಅವಕಾಶ ಗ್ರೂಪ್‌ನ ಅಡ್ಮಿನ್‌ಗೆ ಲಭ್ಯವಾಗಲಿದೆ.

Advertisement

ಫೇಸ್‌ಬುಕ್‌ ಮಾಲಕ ತ್ವದ ವಾಟ್ಸ್‌ಆ್ಯಪ್‌ನಲ್ಲಿ ಪ್ರಸಕ್ತ ವರ್ಷ ಹಲವು ಹೊಸ ವ್ಯವಸ್ಥೆ ಗಳನ್ನು ಜಾರಿಗೆ ತರಲು ಯೋಜನೆ ಹಾಕಿಕೊಂಡಿದೆ. ಸದ್ಯ ಇರುವ ಅವಕಾಶದ ಪ್ರಕಾರ, ಸಂದೇಶ ಹಾಕಿದಾತನಿಗೇ ಅದನ್ನು ಡಿಲೀಟ್‌ ಮಾಡಲು ಸೂಚಿಸಲಾಗುತ್ತದೆ. ಮುಂದೆ “ಡಿಲೀಟ್‌ ಫಾರ್‌ ಎವೆರಿ ವನ್‌’ ಎಂಬ ಹೊಸ ಹೆಸರಿನ ಈ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದಾಗಿ ಗ್ರೂಪಿನಲ್ಲಿ ಆವಶ್ಯಕತೆ ಇರದ ಸಂದೇಶ ಬಂದರೆ ಅದನ್ನು ತತ್‌ಕ್ಷಣ ಯಾರಿಗೂ ಹೋಗದಂತೆ ಡಿಲೀಟ್‌ ಮಾಡಬಹುದು. ಹಾಗೆ ಡಿಲೀಟ್‌ ಆಗುವ ಮೆಸೇಜ್‌ನ್ನು “ಡಿಲೀಟೆಡ್‌ ಬೈ ಅಡ್ಮಿನ್‌’ ಎಂದು ತೋರಿಸಲಾಗುವುದು. ಒಂದಕ್ಕಿಂತ ಹೆಚ್ಚು ಅಡ್ಮಿನ್‌ಗಳಿದ್ದರೆ ಯಾವ ಅಡ್ಮಿನ್‌ ಡಿಲೀಟ್‌ ಮಾಡಿದ್ದಾರೆ ಎನ್ನುವುದನ್ನೂ ತೋರಿಸಲಾಗುವುದು.

ಇದರ ಜತೆಯಲ್ಲಿ ಇನ್ನು ಕೆಲವು ದಿನಗಳಲ್ಲಿ “ಡಿಲೀಟ್‌ ಫಾರ್‌ ಎವರಿವನ್‌’ ಆಯ್ಕೆಯ ಸಮಯಾವಕಾಶವನ್ನೂ 7 ದಿನ, 8 ನಿಮಿಷಕ್ಕೆ ಏರಿಸಲಾಗುವುದು ಡಬ್ಲ್ಯುಎ ಬೇಟಾ ಇನ್ಫೋ (WaBefainfo) ಟ್ವೀಟ್‌ ಮಾಡಿದೆ.

ಇದರ ಜತೆಗೆ ಫೋಟೋ/ವೀಡಿಯೋ ಸೇರಿ ಹಲವು ಮೀಡಿಯಾ ಫೈಲ್‌ ಕಳುಹಿಸಲು ಅನುಕೂಲವಾಗುವಂತೆಯೂ ವಾಟ್ಸ್‌ಆ್ಯಪ್‌ನಲ್ಲಿ ಮರು ವಿನ್ಯಾಸ ಗೊಳಿಸಲಾಗಿದೆ. ಹೊಸ ವಿನ್ಯಾಸದಲ್ಲಿ ಗ್ಯಾಲರಿ ಮತ್ತು ರೀಸೆಂಟ್ಸ್‌ ಎಂಬ ಎರಡು ಹೊಸ ಆಯ್ಕೆಗಳು ಇರಲಿದೆ. ಯಾವುದರಿಂದ ಯಾರಿಗೆ ಹೊಸ ಫೈಲ್‌ಗ‌ಳನ್ನು ಕಳುಹಿಸಬೇಕು ಎಂಬ ಬಗ್ಗೆಯೂ ಅದು ಆಯ್ಕೆಗಳನ್ನು ಹೊಂದಲಿದೆ ಎಂದು ಸೂಚಿಸಲಿದೆ.

ಏನು ಪ್ರಯೋಜನ?
“ಡಿಲೀಟ್‌ ಫಾರ್‌ ಎವೆರಿವನ್‌’ ಎಂಬ ವ್ಯವಸ್ಥೆ ಯಿಂದ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಬರುವ ಸುಳ್ಳು ಸುದ್ದಿಗಳಿಂದ ಉಂಟಾಗುವ ಅಹಿತಕರ ಘಟನೆ ಗಳಿಗೆ ಬ್ರೇಕ್‌ ಹಾಕಿದಂತೆ ಆಗಲಿದೆ. ಮಹಾರಾಷ್ಟ್ರದ ಪಾಲ್ಘಾರ್‌ನಲ್ಲಿ ಸಂತರನ್ನು ಕಳ್ಳರು ಎಂದು ವಾಟ್ಸ್‌ಆ್ಯಪ್‌ನಲ್ಲಿ ಬಂದ ಸುಳ್ಳು ಸಂದೇಶವನ್ನು ಸರಿ ಎಂದು ಭಾವಿಸಿ ಗುಂಪು ಥಳಿಸಿ ಹತ್ಯೆ ಮಾಡಿತ್ತು. ಹೊಸ ವ್ಯವಸ್ಥೆಯಿಂದಾಗಿ ಇಂಥ ಅಹಿತಕರ ಘಟನೆಗಳನ್ನು ತಡೆಯಲೂ ಭಾರೀ ಪ್ರಮಾಣದಲ್ಲಿ ನೆರವಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next