Advertisement

ವಾಟ್ಸ್‌ಆ್ಯಪ್‌ಗೆ 5 ಹೊಸ ಫೀಚರ್‌; ಕೆಲವು ಈಗಾಗಲೇ ಬೀಟಾ ವರ್ಷನ್‌ನಲ್ಲಿ ಲಭ್ಯ

10:00 PM Oct 16, 2021 | Team Udayavani |

ವಾಟ್ಸ್‌ಆ್ಯಪ್‌ ಸಂಸ್ಥೆ ಸದ್ಯದಲ್ಲೇ ತನ್ನ ಗ್ರಾಹಕರಿಗೆ ಐದು ಹೊಸ ಫೀಚರ್‌ಗಳನ್ನು ನೀಡಲಿದೆ. ಮೊದಲನೆಯದಾಗಿ ಗ್ಲೋಬಲ್‌ ವಾಯ್ಸ ಮೆಸೇಜ್‌ ಪ್ಲೇಯರ್‌ ಮೇಲೆ ಕೆಲಸ ಮಾಡಲಾಗುತ್ತಿದ್ದು, ಚಾಟ್‌ ಮುಚ್ಚಿದರೂ ವಾಯ್ಸ ಮೆಸೇಜ್‌ ಪ್ಲೇ ಆಗುವಂತೆ ಮಾಡಲಾಗುವುದು.

Advertisement

ಚಾಟ್‌ ಬಬಲ್‌ ಅನ್ನೂ ಅಪ್‌ಡೇಟ್‌ ಮಾಡಲಾಗುವುದು. ಲಾಸ್ಟ್‌ ಸೀನ್‌ಗೂ “ಮೈ ಕಾಂಟ್ಯಾಕ್ಸ್‌ ಎಕ್ಸೆಪ್ಟ್’ ಆಯ್ಕೆ ನೀಡಲಾಗುವುದು.

ಮೆಸೇಜ್‌ಗಳಿಗೆ ಇಮೋಜಿಗಳ ಮೂಲಕ ಪ್ರತಿಕ್ರಿಯಿಸಲು ಅವಕಾಶ ಮಾಡಿಕೊಡಲಾಗುವುದು. ಹಾಗೆಯೇ ಬ್ಯಾಕ್‌ಅಪ್‌ ಅನ್ನು ನಿರ್ದಿಷ್ಟ ಕಂಟೆಂಟ್‌ಗೆ ಸೀಮಿತ ಮಾಡುವುದಕ್ಕೂ ಅವಕಾಶ ಸಿಗಲಿದೆ ಎನ್ನಲಾಗಿದೆ.

ಈ ಫೀಚರ್‌ಗಳಲ್ಲಿ ಕೆಲವು ಈಗಾಗಲೇ ಬೀಟಾ ವರ್ಷನ್‌ನಲ್ಲಿ ಲಭ್ಯವಿದ್ದು, ಇನ್ನು ಕೆಲ ದಿನಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next