Advertisement

ವಾಟ್ಸ್ಆ್ಯಪ್‌ ನಲ್ಲಿ ಬರಲಿದೆ ಬೂಮರಾಂಗ್

06:27 PM Aug 13, 2019 | Sriram |

ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಫೇಮಸ್ ಆಗಿರುವ ಬೂಮರಾಂಗ್ ವೀಡಿಯೋಗಳು ಇನ್ನು ಹೆಸರಾಂತ ಸಾಮಾಜಿಕ ಜಾಲತಾಣ ವಾಟ್ಸ್ಆ್ಯಪ್‌ ನಲ್ಲಿ ಕಾಣಿಸಿಕೊಳ್ಳಲಿದೆ.

Advertisement

ಈ ಬೂಮರಾಂಗ್ ಆಯ್ಕೆಯನ್ನು ಈಗ ವಾಟ್ಸ್ಆ್ಯಪ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ತಿಂಗಳುಗಳಲ್ಲಿ ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಕಾಣಿಸಿಕೊಳ್ಳಲಿದೆ. ಈಗಾಗಲೇ ಇದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲಾಗಿದ್ದು, ಈ ನೂತನ ಪೀಚರ್ ಅನ್ನು ಅಭಿವೃದ್ಧಿ ಪಡಿಸುವ ಕಾರ್ಯ ನಡೆಯುತ್ತಿದೆ ಎಂದು WABetaInfo ಸಂಸ್ಥೆ ಹೇಳಿದೆ.

ವಾಟ್ಸ್ಆ್ಯಪ್‌ ನಲ್ಲಿ ನಾವು ವಿಡಿಯೋ ಚಿತ್ರೀಕರಿಸುವ ಮೆನುವಿನಲ್ಲಿ ಈ ಹೊಸ ಫೀಚರ್ ಇರಲಿದೆ. ನಾವು ಚಿತ್ರೀಕರಿಸುವ ವೀಡಿಯೋ 7 ಸೆಕೆಂಡ್‌ಗಳಿಗಿಂತ ಕಡಿಮೆ ಇರಬೇಕಾಗಿದೆ. ಬಳಿಕ ನಾವು ಅದನ್ನು GIF ಮಾದರಿಗೂ ಬದಲಾಯಿಸಬಹುದಾಗಿದೆ. ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ಇರುವಂತೆ ನಾವು ಚಿತ್ರೀಕರಿಸಿದ ಬೂಮರ್ಗ್ ಅನ್ನು ನಮ್ಮ ಸ್ನೇಹಿತರಿಗೆ ಕಳುಹಿಸಬಹುದಾಗಿದ್ದು, ಜತೆಗೆ ಸ್ಟೇಟಸ್ ಹಾಕಬಹುದಾಗಿದೆ.
ಈ ನೂತನ ಫೀಚರ್ ಜತೆಗೆ ನಮಗೆ ಬರುವ ಮೆಸೇಜ್‌ಗಳು ಪಾರ್ವಡೆಡ್ ಆಗಿದ್ದರೆ ಅದು ಎಷ್ಟು ಬಾರಿ ಪಾರ್ವಡ್ ಆಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಬಂದಿರುವ ಮೆಸೇಜ್ ಮೇಲೆ “ಡಬಲ್ ಟ್ಯಾಪ್’ ಮಾಡಿದರೆ ಪಾರ್ವಡ್ ಮಾಡಲಾದ ಸಂಖ್ಯೆ ಕಾಣಲಿದೆ. ಈ ಎರಡು ನೂತನ ಪೀಚರ್‌ ಗಳು ಯಾವಾಗ ಬಿಡುಗಡೆಯಾಗಲಿದೆ ಎಂಬುದರ ಕುರಿತು ನಿಖರ ಮಾಹಿತಿಗಳು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next