Advertisement
ಆಗಸ್ಟ್ 4 ರಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧದ ಕಾಮೆಂಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು ಎಂದು ಕೋಟ್ವಾಲಿ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ಸೇಠ್ ಹೇಳಿದ್ದಾರೆ.
Related Articles
Advertisement
ಅವಹೇಳನಕಾರಿ ಕಾಮೆಂಟ್ ನ ಸ್ಕ್ರೀನ್ ಶಾಟ್ ಪಡೆಯಲಾಗಿದೆ ಎಂದು ಅವರು ಹೇಳಿದರು.
ದೂರಿನ ಆಧಾರದ ಮೇಲೆ ಸಹಾಬುದ್ದೀನ್ ಅನ್ಸಾರಿ ಮತ್ತು ಮುಸ್ಲಿಂ ಅನ್ಸಾರಿ ವಿರುದ್ಧ ಐಪಿಸಿ, ಐಟಿ ಕಾಯ್ದೆ ಮತ್ತು ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ವಾಟ್ಸಾಪ್ ಗ್ರೂಪ್‌ನ ಹೆಸರು ‘ನಗರ ಪಾಲಿಕೆ ಪರಿಷತ್ ಭದೋಹಿ’, ಇದು ಭಡೋಹಿಯ ನಗರ ಪಾಲಿಕೆ ಪರಿಷತ್ತಿನ ಬಹುತೇಕ ಎಲ್ಲಾ ಕಾರ್ಪೊರೇಟರ್‌ಗಳು ಮತ್ತು ಸಾರ್ವಜನಿಕರನ್ನು ಹೊಂದಿದೆ. ಇದರ ಉದ್ದೇಶ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದಾಗಿದೆ ಎಂದಿದ್ದಾರೆ.
ಆದರೆ ಇದು ಕಾರ್ಪೊರೇಟರ್‌ಗಳ ಅಧಿಕೃತ ವಾಟ್ಸಾಪ್ ಗ್ರೂಪ್ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.