Advertisement

ನವೆಂಬರ್‌ನಲ್ಲಿ 17.5 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

08:59 PM Jan 02, 2022 | Team Udayavani |

ನವದೆಹಲಿ: ವಾಟ್ಸ್‌ಆ್ಯಪ್‌ ಸಂಸ್ಥೆಯು ನವೆಂಬರ್‌ ತಿಂಗಳಲ್ಲಿ 17.59 ಲಕ್ಷ ಭಾರತೀಯರ ವಾಟ್ಸ್‌ಆ್ಯಪ್‌ ಖಾತೆಗಳನ್ನು ನಿಷೇಧಿಸಿದೆ.

Advertisement

ಒಂದೇ ತಿಂಗಳಲ್ಲಿ 602 ದೂರುಗಳನ್ನು ವಾಟ್ಸ್‌ಆ್ಯಪ್‌ ಸಂಸ್ಥೆಯ ದೂರು ಪ್ರಕ್ರಿಯೆ ಸಮಿತಿಗೆ ಸಲ್ಲಿಸಲಾಗಿದ್ದು, ಅದರಲ್ಲಿ 36ರ ವಿರುದ್ಧ ಕ್ರಮ ತೆಗೆದುಕೊಂಡಿರುವುದಾಗಿ ಸಂಸ್ಥೆಯು ಮಾಸಿಕ ವರದಿಯಲ್ಲಿ ತಿಳಿಸಿದೆ.

ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಅನ್ವಯ ವಾಟ್ಸ್‌ಆ್ಯಪ್‌ ಸಂಸ್ಥೆ ಕಳೆದ ಆರು ತಿಂಗಳುಗಳಿಂದ ಮಾಸಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತಿದೆ.

ಇದನ್ನೂ ಓದಿ:ಚೆನ್ನೈ ಮಳೆಯಲ್ಲಿ ಹೀರೋ ಆದ ಬ್ಯಾಂಕ್‌ ಮ್ಯಾನೇಜರ್‌ !

40 ಕೋಟಿಗೂ ಅಧಿಕ ಬಳಕೆದಾರರಿರುವ ಸಂಸ್ಥೆಯು ಅಕ್ಟೋಬರ್‌ನಲ್ಲಿ 20 ಲಕ್ಷ ಭಾರತೀಯ ವಾಟ್ಸ್‌ಆ್ಯಪ್‌ ಖಾತೆಗಳನ್ನು ನಿಷೇಧಿಸಿತ್ತು.

Advertisement

ಹಾಗೆಯೇ ಆ ತಿಂಗಳಲ್ಲಿ 500ಕ್ಕೂ ಅಧಿಕ ದೂರುಗಳನ್ನು ಸ್ವೀಕರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next