Advertisement

ವಾಟ್ಸ್‌ಆ್ಯಪ್‌ ಬ್ಯಾಕ್‌ಅಪ್‌ ನಿಗೂಢ: ಹೇಗೆ, ಏಕೆ?

10:40 PM Sep 14, 2021 | Team Udayavani |

ತನ್ನ ಬಳಕೆದಾರರ ಖಾಸಗಿತನ ರಕ್ಷಿಸುವ ಮತ್ತು ಅವರ ಸಂದೇಶಗಳು ಹೊರಗಿನವರಿಗೆ ಲಭ್ಯವಾಗದಂತೆ ನೋಡಿ ಕೊಳ್ಳುವ ನಿಟ್ಟಿನಲ್ಲಿ ವಾಟ್ಸ್‌ ಆ್ಯಪ್‌ ಸಂಸ್ಥೆಯು ಚಾಟ್‌ಗಳ ಬ್ಯಾಕ್‌ಅಪ್‌ಗ್ಳನ್ನೂ ಎನ್‌ಕ್ರಿಪ್ಟ್(ಗೂಢಲಿಪಿ) ಮಾಡಲು ಮುಂದಾಗಿದೆ. ಆ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

Advertisement

ಬಳಕೆದಾರರು ಏನು ಮಾಡಬೇಕು? :

ಪ್ರಸಕ್ತ ವರ್ಷಾಂತ್ಯದಲ್ಲಿ  ಈ ಸೇವೆ ಲಭ್ಯವಾಗಲಿದೆ. ಬಳಕೆದಾರನೇ ತನ್ನ ಬ್ಯಾಕ್‌ ಅಪ್‌ಗೆ ಎನ್‌ಕ್ರಿಪ್ಶನ್‌ (ಗೂಢಲಿಪೀಕರಣ) ಆಯ್ಕೆಯನ್ನು ಆಯ್ದುಕೊಳ್ಳಬಹುದು. ಇದನ್ನು ಆಯ್ಕೆ ಮಾಡಿಕೊಂಡೊ ಡನೆ 64 ಡಿಜಿಟ್‌ಗಳ ಪಾಸ್‌ವರ್ಡ್‌ ಬರುತ್ತದೆ.  ಕ್ಲೌಡ್‌ ಸೇವೆಗಳಿಗೆ ಅಪ್‌ಲೋಡ್‌ ಆಗುವ ಮುನ್ನವೇ ಬ್ಯಾಕ್‌ಅಪ್‌ನ ಎನ್‌ಕ್ರಿಪ್ಶನ್‌ ಪೂರ್ಣಗೊಂಡಿರುತ್ತದೆ. 64 ಡಿಜಿಟ್‌ಗಳ ಪಾಸ್‌ವರ್ಡ್‌ ನಮೂದಿಸಿದರೆ ಮಾತ್ರವೇ  ಎನ್‌ಕ್ರಿಪ್ಟ್ ಆದ ಫೈಲ್‌ ಸಿಗುತ್ತದೆ.

ಏಕೆ ಕ್ರಮ?:

ಮೊಬೈಲ್‌ ಕಳ್ಳತನವಾದರೆ, ಕಳೆದುಹೋದರೆ ಅಥವಾ ಮೊಬೈಲ್‌ ಬದಲಾಯಿಸುವಾಗ ಅದರಲ್ಲಿದ್ದ ಎಲ್ಲ ಸಂದೇಶ, ವೀಡಿಯೋ, ಫೋಟೋ ಹಾಗೂ ಇತರೆ ದಾಖಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಬ್ಯಾಕ್‌ಅಪ್‌ ಫೀಚರ್‌ ಅನ್ನು ವಾಟ್ಸ್‌ ಆ್ಯಪ್‌ ನೀಡುತ್ತದೆ. ಅದರ ಮೂಲಕ ಇವೆಲ್ಲವುಗಳನ್ನೂ ಹೊಸ ಮೊಬೈಲ್‌ಗೆ ವರ್ಗಾಯಿಸಲಾಗುತ್ತದೆ. ವಾಟ್ಸ್‌ ಆ್ಯಪ್‌ನ ಚಾಟ್‌ ಸಂದೇಶಗಳು ಹಾಗೂ ಮಲ್ಟಿಮೀಡಿಯಾ ಸಂದೇಶಗಳಿಗೆ “ಎಂಡ್‌-ಟು-ಎಂಡ್‌’ ಎನ್‌ಕ್ರಿಪ್ಷನ್‌ ಇರುತ್ತದಾದರೂ ಈ ದತ್ತಾಂಶಗಳನ್ನು ಸಂಗ್ರಹಿಸಿಡಲು ಸಂಸ್ಥೆಯು ಗೂಗಲ್‌ ಡ್ರೈವ್‌ ಅಥವಾ ಐಕೌÉಡ್‌ ಮೇಲೆ ಅವಲಂಬಿಸಿದೆ. ಹೀಗಾಗಿ ಈ ಸಂದೇಶಗಳು ಖಾಸಗಿಯಾಗಿ ಉಳಿಯುವುದಿಲ್ಲ. ಹಲವೆಡೆ ಕಾನೂನು ಜಾರಿ ಸಂಸ್ಥೆಗಳು ಈ ಕೌÉಡ್‌ ಸೇವೆಗಳಲ್ಲಿನ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ಪಡೆದ ಉದಾಹರಣೆಗಳಿವೆ. ಇದನ್ನು ತಪ್ಪಿಸಿ, ಬಳಕೆದಾರರ ಖಾಸಗಿತನ ಕಾಪಾಡುವ ನಿಟ್ಟಿನಲ್ಲಿ ಈ ಹೆಜ್ಜೆ ಇಡಲಾಗಿದೆ.

Advertisement

ಬ್ಯಾಂಕ್‌ ಲಾಕರ್‌ ಮಾದರಿ: ಈ ವ್ಯವಸ್ಥೆಯನ್ನು ವಾಟ್ಸ್‌ಆ್ಯಪ್‌ ಬ್ಯಾಂಕ್‌ನ ಸೇಫ್ ಡೆಪಾಸಿಟ್‌ ವಾಲ್ಟ್ಗೆ ಹೋಲಿಸಿದೆ. ಬ್ಯಾಂಕ್‌ನಲ್ಲಿ ಹೇಗೆ ಗ್ರಾಹಕನಿಗೆ ನೀಡುವ ವಾಲ್ಟ್ ಕೀ ಸಹಾಯವಿಲ್ಲದೇ ಬ್ಯಾಂಕ್‌ನ ಸಿಬಂದಿಗೂ ಅದನ್ನು ಓಪನ್‌ ಮಾಡಲು ಸಾಧ್ಯವಿಲ್ಲವೋ ಅದೇ ರೀತಿ ವಾಟ್ಸ್‌ಆ್ಯಪ್‌ ಗ್ರಾಹಕನ ದತ್ತಾಂಶಗಳನ್ನೂ ಕಾಪಿಡಲು ಬ್ಯಾಕಪ್‌ ಕೀ ವಾಲ್ಟ್ ಅನ್ನು ಸ್ಥಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next