Advertisement

ಹೃದಯ ಕಾಯಿಲೆಗೆ ವಾಟ್ಸ್‌ಆ್ಯಪ್‌ ಸಲಹೆಗೆ ಉತ್ತಮ ಪ್ರತಿಕ್ರಿಯೆ

10:58 AM Jul 23, 2019 | Team Udayavani |

ಹೊನ್ನಾವರ: ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥರಾದ ಡಾ| ಪದ್ಮನಾಭ ಕಾಮತ್‌ರ ನೂತನ ಯೋಜನೆ ‘ಹೃದಯ ಸಮಸ್ಯೆಗೆ ವಾಟ್ಸ್‌ಆ್ಯಪ್‌ ಸಲಹೆ’ ಕುರಿತು ‘ಉದಯವಾಣಿ’ಯಲ್ಲಿ ಪ್ರಕಟವಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ 24 ತಾಸಲ್ಲಿ 82 ಸಾವಿರಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದು, ಆರುನೂರಕ್ಕೂ ಹೆಚ್ಚು ಜನರು ಶೇರ್‌ ಮಾಡಿದ್ದಾರೆ. ವೈದ್ಯರೂ ಸೇರಿದಂತೆ 60 ಜನ ಸ್ಪಂದಿಸಿದ್ದಾರೆ.

Advertisement

ಅಲ್ಲದೇ, ಅಗತ್ಯವುಳ್ಳ 20 ಜನರಿಗೆ ಡಾ| ಕಾಮತ್‌ ಚಿಕಿತ್ಸೆಯ ಮಾಹಿತಿ ರವಾನಿಸಿದ್ದಾರೆ. ಹಾವೇರಿ, ಚಿತ್ರದುರ್ಗ – 2, ಕಡೂರು, ತೀರ್ಥಹಳ್ಳಿ, ದೇವನಹಳ್ಳಿ, ಮೈಸೂರು, ಸುಳ್ಯ, ಪುತ್ತೂರು, ಯಾದಗಿರಿ ತಲಾ 1, ಬೆಂಗಳೂರು 3 ಹಾಗೂ ಅತಿ ಹೆಚ್ಚು ಎಂಟು ಮಂದಿ ಉತ್ತರಕನ್ನಡದಿಂದ ಅದರಲ್ಲೂ ಕುಮಟಾದಿಂದ ನಾಲ್ವರಿಗೆ ಸಮೀಪದ ಹೃದಯ ತಜ್ಞರಲ್ಲಿ ಚಿಕಿತ್ಸೆ ಪಡೆಯಲು ಸಲಹೆ ನೀಡಲಾಗಿದೆ. ಹೃದಯ ಸಮಸ್ಯೆ ಕುರಿತು ಗೊಂದಲದಲ್ಲಿದ್ದವರಿಗೆ ಸರಿಯಾಗಿ ಮಾರ್ಗದರ್ಶನ ನೀಡಲಾಗಿದೆ.

ಇದು ಹೃದಯ ಕಾಯಿಲೆಯ ಗಂಭೀರತೆ ಮತ್ತು ಸೂಕ್ತ ಚಿಕಿತ್ಸೆ ಅಲಭ್ಯತೆಯನ್ನು ತೋರಿಸುತ್ತಿದೆ. 9743287599 ನಂಬರಿಗೆ ವಾಟ್ಸ್‌ಆ್ಯಪ್‌ ಸಂದೇಶ ಕಳಿಸುವವರು ಇಸಿಜಿ ಜೊತೆ ಸ್ಥಳೀಯ ವೈದ್ಯರ ವರದಿ ಇದ್ದರೆ ಅದನ್ನು ಲಗತ್ತಿಸಿ ಹೆಸರು, ವಯಸ್ಸು ಹಾಗೂ ಊರು ತಿಳಿಸಬೇಕು. ಯಾವುದೇ ಕಾರಣಕ್ಕೂ ಅನಗತ್ಯ ಸಂದೇಶ ಕಳುಹಿಸಬಾರದು ಎಂದು ಡಾ| ಕಾಮತ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next