Advertisement

ಭದ್ರತೆಗೆ ಮತ್ತೊಂದು ಫೀಚರ್ ನೀಡುತ್ತಿದೆ ವಾಟ್ಸ್ಯಾಪ್

10:59 AM Jan 29, 2021 | Team Udayavani |

ನವ ದೆಹಲಿ: ವಾಟ್ಸ್ಯಾಪ್ ನ ಪ್ರೈವೆಸಿ ಮತ್ತು ಸೆಕ್ಯುರಿಟಿ ಬಗ್ಗೆ ಇತ್ತೀಚೆಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಯಾಗಿತ್ತು. ಈಗ ವಾಟ್ಸ್ಯಾಪ್ ವೆಬ್ ಮತ್ತು ಡೆಸ್ಕ್‌ಟಾಪ್ ಅಪ್ಲಿಕೇಶನ್‌ ಗೆ ಲಿಂಕ್ ಮಾಡುವ ಮತ್ತು ಲಾಗಿನ್ ಆಗಲು ವಾಟ್ಸ್ಯಾಪ್ ಮತ್ತೊಂದು ಭದ್ರತಾ ಲೇಯರ್ ನ್ನು ಸೇರಿಸುತ್ತಿದೆ.

Advertisement

ಬಳಕೆದಾರರು ತಮ್ಮ ವಾಟ್ಸ್ಯಾಪ್ ಖಾತೆಗಳನ್ನು ತಮ್ಮ ಕಂಪ್ಯೂಟರ್‌ಗೆ ಲಿಂಕ್ ಮಾಡುವ ಮೊದಲು, ಫಿಂಗರ್‌ ಪ್ರಿಂಟ್ ಅಥವಾ ಫೇಸ್ ಐಡಿ ಬಳಸಿ  ದೃಢೀಕರಿಸಲು ಕೇಳಲಾಗುತ್ತದೆ.

ಸುರಕ್ಷತೆಯ ಈ ಹೆಚ್ಚುವರಿ ಸೌಲಭ್ಯವು ನಿಮ್ಮ ಉಪಸ್ಥಿತಿಯಿಲ್ಲದೆ ಇತರರು ನಿಮ್ಮ ವಾಟ್ಸ್ಯಾಪ್ ಖಾತೆಯನ್ನು ಕಂಪ್ಯೂಟರ್‌ಗೆ ಲಿಂಕ್ ಮಾಡುವುದನ್ನು ತಡೆಯುವ ಗುರಿಯನ್ನು ಹೊಂದಿದೆ ಎಂದು ಹೇಳುತ್ತಿದೆ ವಾಟ್ಸ್ಯಾಪ್.

ಮುಖ ಮತ್ತು ಫಿಂಗರ್‌ ಪ್ರಿಂಟ್ ದೃಢಿಕರಣವು  ಬಳಕೆದಾರರ ಮೊಬೈಲ್ ಫೋನ್‌ ನಲ್ಲಿ ಗೌಪ್ಯತೆಯನ್ನು ಕಾಪಾಡುತ್ತದೆ. ಮತ್ತು ಹ್ಯಾಂಡ್‌ ಸೆಟ್‌ ನ ಆಪರೇಟಿಂಗ್ ಸಿಸ್ಟಂನಲ್ಲಿ ಸಂಗ್ರಹವಾಗಿರುವ ಬಯೋಮೆಟ್ರಿಕ್ ಮಾಹಿತಿಯನ್ನು ವಾಟ್ಸ್ಯಾಪ್  ಪ್ರವೇಶಿಸಲು ಸಾಧ್ಯವಿಲ್ಲ ಎಂದು ವಾಟ್ಸ್ಯಾಪ್ ಹೇಳುತ್ತದೆ.

ಓದಿ : ಹಾವು ಕಡಿತಕ್ಕೆ ಇವರು ನೀಡುವ ನಾಟಿ ಔಷಧಿಯೇ ರಾಮಬಾಣ

Advertisement

ಡೆಸ್ಕ್‌ ಟಾಪ್‌ ನಲ್ಲಿ ವಾಟ್ಸ್ಯಾಪ್ ನ್ನು ಅನೈತಿಕವಾಗಿ ಬಳಸುವುದನ್ನು ತಡೆಯಲು ತನ್ನ ಮೊಬೈಲ್ ಅಪ್ಲಿಕೇಶನ್‌ ನಲ್ಲಿ ಹೆಚ್ಚುವರಿ ಭದ್ರತಾ ಪದರವನ್ನು ಸೇರಿಸುವುದಾಗಿ ಕಂಪನಿ ಪ್ರಕಟಿಸಿದೆ.

ವಾಟ್ಸ್ಯಾಪ್ ವೆಬ್ ಅಥವಾ ಡೆಸ್ಕ್‌ಟಾಪ್ ಅಪ್ಲಿಕೇಶನ್ ನ್ನು ವಾಟ್ಸ್ಯಾಪ್ ಖಾತೆಗೆ ಲಿಂಕ್ ಮಾಡಲು, ಬಳಕೆದಾರರು ಈಗ ಫೋನ್‌ ನಲ್ಲಿ ಫೇಸ್ ಅಥವಾ ಫಿಂಗರ್‌ಪ್ರಿಂಟ್ ಅನ್‌ ಲಾಕ್ ಬಳಸಲು ಕೇಳಲಾಗುತ್ತದೆ. ಈ ಹಂತವನ್ನು ಮಾಡಿದ ನಂತರ, ಬಳಕೆದಾರರು ಫೋನ್‌ ನಿಂದ ಕ್ಯೂ ಆರ್ ಕೋಡ್ ಸ್ಕ್ಯಾನರ್ ಮೂಲಕ ಪ್ರವೇಶಿಸಬಹುದು ಮತ್ತು ಅದು ಕಂಪ್ಯೂಟರ್‌ ಸಿಸ್ಟಮ್ ನೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ.

ಓದಿ : ಡ್ರಗ್ಸ್‌ ಕೇಸ್‌ ನಲ್ಲಿ ಚಿಕ್ಕ, ಚಿಕ್ಕ ಮೀನುಗಳನ್ನು ಹಿಡಿಯಲಾಗಿದೆ : ಇಂದ್ರಜಿತ್‌ ಲಂಕೇಶ್‌

“ಇದು  ನಮ್ಮ ಅಸ್ತಿತ್ವದಲ್ಲಿರುವ ಭದ್ರತಾ ಕ್ರಮಗಳನ್ನು ಆಧರಿಸಿದೆ. ವೆಬ್ / ಡೆಸ್ಕ್‌ಟಾಪ್ ಲಾಗಿನ್ ಮಾಡಿದಾಗಲೆಲ್ಲಾ ನಿಮ್ಮ ಫೋನ್‌ ನಲ್ಲಿ ಸೂಚನೆಯನ್ನು ಪಾಪ್ ಅಪ್ ಮಾಡುತ್ತದೆ ಮತ್ತು ಯಾವುದೇ ಸಮಯದಲ್ಲಿ ನಿಮ್ಮ ಫೋನ್‌ ನಿಂದ ಯಾವುದೇ ಟೂಲ್ಸ್ ಗಳನ್ನು ಅನ್ಲಿಂಕ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ”ಎಂದು ಅಧಿಕೃತ ಬಿಡುಗಡೆಯಲ್ಲಿ ವಾಟ್ಸ್ಯಾಪ್ ವಿವರಿಸುತ್ತದೆ.

ಇದು ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ. ಅದರ ರಚನೆ ಮತ್ತು  ವಿನ್ಯಾಸದ ಪ್ರಕಾರ  ಫೋನ್‌ ನ ಆಪರೇಟಿಂಗ್ ಸಿಸ್ಟಮ್‌ ನಿಂದ ಆ ವಿವರಗಳನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಮುಂದಿನ  ವಾರಗಳಲ್ಲಿ ಈ ಹೊಸ ಭದ್ರತಾ ಲೇಯರ್ ಜಾರಿಗೆ ಬರಲಿವೆ ಎಂದು ವಾಟ್ಸ್ಯಾಪ್ ನ ಅಧಿಕೃತ ಮೂಲಗಳಿಂದ ಸಿಕ್ಕ ಮಾಹಿತಿ ವರದಿಯಾಗಿದೆ.

ಓದಿ : ಮಾತಿಲ್ಲದ ಟ್ರೇಲರ್‌ನಲ್ಲಿ ಮಾತಾಡೋ ಕಂಟೆಂಟ್‌: ಮನಗೆದ್ದ ಇನ್ಸ್‌ಪೆಕ್ಟರ್‌ ವಿಕ್ರಂ ಟ್ರೇಲರ್‌

Advertisement

Udayavani is now on Telegram. Click here to join our channel and stay updated with the latest news.

Next