Advertisement

ಸಾರಾ ಗೋವಿಂದು ಆಯ್ಕೆಯಲ್ಲಿ ಲೋಪವೇನು?

11:46 AM Dec 23, 2017 | Team Udayavani |

ಬೆಂಗಳೂರು: ಕನ್ನಡದ ನಾಡು ನುಡಿಗಾಗಿ ಹೋರಾಟ ನಡೆಸುತ್ತಿರುವ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾರಾ ಗೋವಿಂದು ಅವರನ್ನು ಅನೇಕಲ್‌ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದರಲ್ಲಿ ತಪ್ಪೇನಿದೆ ಎಂದು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ ಪ್ರಶ್ನಿಸಿದ್ದಾರೆ.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಇಲ್ಲದವರು ಕನ್ನಡ ಸಾಹಿತ್ಯ ಪರಿಷತ್‌ ಅನ್ನು ಹುಟ್ಟು ಹಾಕಿದ್ದಾರೆ. ಸಾಹಿತಿಗಳಲ್ಲದವರೂ ಕನ್ನಡವನ್ನು ಪೋಷಿಸುತ್ತಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಹಾಗೆ ನಾಡಿಗಾಗಿ ಸೇವೆ ಸಲ್ಲಿಸಿದ ಎಲ್ಲರೂ ಸಮೇಳನಾಧ್ಯಕ್ಷರಾಗಲು ಅರ್ಹರು ಎಂದರು.

ಕನ್ನಡಪರ ಕಳಕಳಿವುಳ್ಳ ಸಾರಾ ಗೋವಿಂದು ವರನಟ ಡಾ.ರಾಜ್‌ಕುಮಾರ್‌ ಅವರನ್ನು ಗೋಕಾಕ್‌ ಚಳುವಳಿಗೆ ಕರೆತಂದರು. ಗಾಲಿ ಮತ್ತು ಅಚ್ಚು ಕಾರ್ಖಾನೆಯಲ್ಲಿ ಕನ್ನಡಗರಿಗೆ ಅನ್ಯಾಯ ವಾದಾಗ ಹೋರಾಟ ನಡೆಸಿ ಕನ್ನಡಿಗರಿಗೆ ಉದ್ಯೋಗ ದೊರಕುವಂತೆ ಮಾಡಿದರು. ಇಂತವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವುದರಲ್ಲಿ ತಪ್ಪೇನಿದೆ ಎಂದರು.

ಸಾರಾ ಗೋವಿಂದು ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದಕ್ಕೆ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಬೆಂಬಲಿಸುತ್ತದೆ. ಅಲ್ಲದೆ ಮುನಿಸಿಕೊಂಡವರ ಮನಸೆಳೆಯುವ ಪ್ರಯತ್ನ ನಡೆಯಲಿದೆ ಎಂದು ಹೇಳಿದರು. ಡಿಸೆಂಬರ್‌ 24 ರಿಂದ ಎರಡು ದಿನಗಳ ಕಾಲ ಅನೇಕಲ್‌ ತಾಲೂಕಿನ ಚಂದಾಪುರದಲ್ಲಿ ನಡೆಯಲಿರುವ ಬೆಂಗಳೂರು ನಗರಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ರೀತಿಯ ತಯಾರಿ ನಡೆದಿದೆ ಎಂದು ಒಕ್ಕೂಟದ ಕಾರ್ಯಾಧ್ಯಕ್ಷ ಸಿದ್ಧಯ್ಯ ತಿಳಿಸಿದರು.

24, 25ರಂದು ನಗರ ಕನ್ನಡ ಸಾಹಿತ್ಯ ಸಮ್ಮೇಳನ

Advertisement

ಬೆಂಗಳೂರು: ಆನೇಕಲ್‌ ತಾಲೂಕಿನ ಚಂದಾಪುರದಲ್ಲಿ ಡಿ.24 ಹಾಗೂ 25ರಂದು ಬೆಂಗಳೂರು ನಗರ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ನಗರ ಕಸಾಪ ಅಧ್ಯಕ್ಷ ಮಾಯಣ್ಣ ತಿಳಿಸಿದ್ದಾರೆ. ಕನ್ನಡ ಚಳವಳಿ ಹೋರಾಟಗಾರ,ಚಿತ್ರ ನಿರ್ಮಾಪಕ ಸಾ.ರಾ ಗೋವಿಂದು ಸಮ್ಮೇ ಳನದ ಸರ್ವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದು, ಎರಡೂ ದಿನಗಳ ಕಾಲ ಕನ್ನಡ ವಿಚಾರಗಳಿಗೆ ಸಂಬಂಧಿಸಿ ದಂತೆ ಉಪನ್ಯಾಸ, ಸಂಗೀತ, ವಿದ್ಯಾರ್ಥಿ, ಯುವ ಹಾಗೂ ಹಿರಿಯರ ಕವಿಗೋಷ್ಠಿಗಳು ಜರುಗಲಿವೆ.

ಭಾನುವಾರ ಬೆಳಗ್ಗೆ 7ಗಂಟೆ ಸುಮಾರಿಗೆ ಡಾ. ರಾಜ್‌ಕುಮಾರ್‌ ಸ್ಮಾರಕದ ಬಳಿ ಡಾ.ರಾಜ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಯಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಸಮ್ಮೇಳನದ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಳಿಕ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ಸಮ್ಮೇಳನದ ಮೆರವಣಿಗೆ ವಾಹನಗಳು ನಾಯಂಡ ಹಳ್ಳಿ ಮಾರ್ಗದ ಮೂಲಕ ಬೊಮ್ಮ ಸಂದ್ರದ ಬಿಟಿಎಲ್‌ ಕಾಲೇಜು ತಲುಪಲಿವೆ. ಅಲ್ಲಿಂದ ಸಮ್ಮೇಳನಾಧ್ಯಕ್ಷರು ಆಸೀನರಾದ ಸಾರೋಟಿನ ಮೆರವಣಿಗೆ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next