Advertisement

ಏನಿದು ನೋ “ಫ‌ಸ್ಟ್‌ ಯೂಸ್‌’

09:49 AM Aug 18, 2019 | mahesh |

ಮಣಿಪಾಲ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು “ನೋ ಫ‌ಸ್ಟ್‌ ಯೂಸ್‌ ಪಾಲಿಸಿ’ ಯ ಕುರಿತು ಹೇಳಿದ್ದಾರೆ. ಇದು ಅಣುಬಾಂಬ್‌ ಬಳಕೆ ಕುರಿತು ಜಗತ್ತಿನ ರಾಷ್ಟ್ರಗಳು ರೂಪಿಸಿರುವ ನಿಯಮಗಳ ಪೈಕಿ ಶಾಂತಿಯನ್ನು ಬಯಸುವ ಒಂದು ಧೋರಣೆ. ಹಾಗಾದರೆ ಏನಿದು “ನೋ ಫ‌ಸ್ಟ್‌ ಯೂಸ್‌ ಪಾಲಿಸಿ’ ಇಲ್ಲಿದೆ ಮಾಹಿತಿ.

Advertisement

ಏನು ಹೇಳುತ್ತದೆ ಈ ನಿಯಮ?
ಭಾರತ ಪೋಖ್ರಾನ್‌ನಲ್ಲಿ ತನ್ನ 2ನೇ ಪರಮಾಣು ಪರೀಕ್ಷೆಯನ್ನು 1998ರಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಇದೇ ಸಂದರ್ಭ “ನೋ ಫ‌ಸ್ಟ್‌ ಯೂಸ್‌’ಗೆ ಭಾರತ ಸಹಿ ಹಾಕಿತ್ತು. ಇದರನ್ವಯ ಭಾರತ ತಾನಾಗಿ ಯಾವುದೇ ದೇಶದ ಮೇಲೆ ತನ್ನ ಬತ್ತಳಿಕೆಯಲ್ಲಿರುವ ಅಣ್ವಸ್ತ್ರವನ್ನು ಬಳಸುವುದಿಲ್ಲ ಎಂದು ಹೇಳಿತ್ತು. ಬಳಿಕ ತನ್ನ ಮಾತಿಗೆ ಕಟಿ ಬದ್ಧವಾಗಿ ಅದನ್ನು ಪಾಲಿಸುತ್ತಾ ಬಂದಿದೆ. ಈ ಪಾಲಿಸಿಯನ್ನು NFU ಎಂದೂ ಕರೆಯಲಾಗುತ್ತದೆ.

ಯಾವಾಗ ಆರಂಭವಾಯಿತು?
1964ರಲ್ಲಿ ಚೀನ ಮೊದಲ ರಾಷ್ಟ್ರವಾಗಿ ಈ “ನೋ ಫ‌ಸ್ಟ್‌ ಯೂಸ್‌’ ಪಾಲಿಸಿಯನ್ನು ಪರಿಚಯಿಸಿತು. ವಿಶೇಷ ಎಂದರೆ 1964ರಲ್ಲೇ ಚೀನದ ಬತ್ತಳಿಕೆಗೆ ಅಣ್ವಸ್ತ್ರ ಸೇರಿತ್ತು. ಇದರನ್ವಯ ಯಾವುದೇ ಸನ್ನಿವೇಶ ಎದುರಾದರೂ ತಾವಾಗಿ ಈ ಅಸ್ತ್ರವನ್ನು ಎಲ್ಲೂ ಉಪಯೋಗಿಸುವುದಿಲ್ಲ. ಆದರೆ ಎದುರಾಳಿಗಳು ಪ್ರಯೋಗಿಸಿದರೆ, ನಾವೂ ಪ್ರಯೋಗಿಸುತ್ತೇವೆ ಎಂಬ ತಣ್ತೀ “ನೋ ಫ‌ಸ್ಟ್‌ ಯೂಸ್‌’. ಭಾರತ ಮತ್ತು ಚೀನ ಹೊರತು ಪಡಿಸಿ ಬೇರೆ ಯಾವುದೇ ರಾಷ್ಟ್ರ ಇದರ ಭಾಗವಾಗಲು ಆಸಕ್ತಿ ಹೊಂದಿಲ್ಲ.

2ನೇ ಮಹಾಯುದ್ಧದಲ್ಲಿ ಏನಾಯಿತು?
1938ರಲ್ಲಿ ತಯಾರಾದ ಅಣುಬಾಂಬ್‌ 1945ರಲ್ಲಿ ಅಮೆರಿಕದ ಕೈ ಸೇರಿತ್ತು. ದ್ವೇದ ಜ್ವಾಲೆಯನ್ನು ಹೊರ ಸೂಸುತ್ತಿದ್ದ 2ನೇ ಮಹಾಯುದ್ಧದಲ್ಲಿ ಅಮೆರಿಕ ತನ್ನ ಪ್ರಥಮ ಪ್ರಯೋಗವಾಗಿ ಜಪಾನ್‌ನ ಹಿರೋಶಿಮಾ ಮತ್ತು ನಾಗಾಸಾಕಿ ನಗರದ ಮೇಲೆ ಇದನ್ನು ಹಾಕಿತು. ಈ 2 ಪ್ರದೇಶಗಳು ಅಕ್ಷರಶಃ ನಾಶವಾಗಿದ್ದವು. ಇದು ಈ ಅಸ್ತ್ರದ ಗಾಂಭೀರ್ಯತೆಯ ಮುಖವಾಗಿತ್ತು.

ರಕ್ಷಣೆಗಾಗಿ ಪ್ರಯೋಗ ಎಂದರೇನು?
NFUರಾಷ್ಟ್ರಗಳನ್ನು ಹೊರತು ಪಡಿಸಿ, ಅಣುಬಾಂಬ್‌ ಹೊಂದಿರುವ ಉಳಿದ ಎಲ್ಲಾ ರಾಷ್ಟ್ರಗಳು ತಮ್ಮ ರಕ್ಷಣೆಗಾಗಿ ಈ ಅಸ್ತ್ರವನ್ನು ಬಳಸುವ ನಿಲುವು ಹೊಂದಿವೆೆ. ಈ ರಾಷ್ಟ್ರಗಳು ಯಾವುದೇ ಯುದ್ಧದ ಸನ್ನಿವೇಶ ಎದುರಾದರೂ ಆ ರಾಷ್ಟ್ರಗಳು ಅಣುಬಾಂಬ್‌ ಬಳಸಬಹುದು. ಅವರು ನಿಬಂಧನೆಗೆ ಒಳಪಡಲಿಲ್ಲ.

Advertisement

ನೋ ಫ‌ಸ್ಟ್‌ ಯೂಸ್‌ ಪಾಲಿಸಿ
“ನೋ ಫ‌ಸ್ಟ್‌ ಯೂಸ್‌’ ಪಾಲಿಸಿ ರಾಷ್ಟ್ರಗಳು ಎಂದರೆ, ತನ್ನ ಹೆಸರೇ ಹೇಳುವಂತೆ ಯಾವುದೇ ರಾಷ್ಟ್ರ ಈ NFU ರಾಷ್ಟ್ರಗಳ  ಮೇಲೆ ಯುದ್ಧ ಅಥವಾ ಆಕ್ರಮಣ ಮಾಡಿದರೆ ತಮ್ಮ ರಕ್ಷಣೆಗಾಗಿ ಅಣುಬಾಂಬ್‌ ಪ್ರಯೋ ಗಿಸುವುದಿಲ್ಲ. ಆದರೆ ಎದುರಾಳಿ ರಾಷ್ಟ್ರ ಪ್ರಯೋಗಿಸಿದರೆ ಮಾತ್ರ ನಾವು ಪ್ರಯೋಗಿ ಸುತ್ತೇವೆ ಎಂಬ ಅಚಲ ನಿಲುವನ್ನು ಹೊಂದಿದೆ. ಈ ಸಾಲಿನಲ್ಲಿ ಭಾರತ ಮತ್ತು ಚೀನ ಮಾತ್ರ.

NFU ರಾಷ್ಟ್ರ
·  ಚೀನ
·  ಭಾರತ

NFU ಅಲ್ಲದ ರಾಷ್ಟ
·  ರಷ್ಯಾ
·  ಅಮೆರಿಕ
·  ಇಂಗ್ಲೆಂಡ್‌
·  ಪಾಕಿಸ್ಥಾನ
·  ಉತ್ತರ ಕೊರಿಯಾ
·  ಇಸ್ರೇಲ್‌

Advertisement

Udayavani is now on Telegram. Click here to join our channel and stay updated with the latest news.

Next