Advertisement

6ನೇ ಮಹಿಳೆಯ ಪೂರ್ಣ ಫೋಟೋ ಏಕಿಲ್ಲ?

10:25 AM Dec 09, 2017 | |

ಹೊಸದಿಲ್ಲಿ: ಈ ಸಾಲಿನ ಟೈಮ್‌ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಲೈಂಗಿಕ ಕಿರುಕುಳದ ಬಗ್ಗೆ “ಮೌನ ಮುರಿದವರಿಗೆ’ ನೀಡಲಾಗಿತ್ತು. ಮೌನ ಮುರಿದ ಕೆಲ ಪ್ರಮುಖರ ಫೋಟೋವನ್ನು ಮುಖಪುಟದಲ್ಲಿ ಪ್ರಕಟಿಸಲಾಗಿತ್ತು. ಆದರೆ ಅದರಲ್ಲಿ ಒಬ್ಬ ಮಹಿಳೆಯ ಕೈ ಮಾತ್ರ ಕಾಣಿಸುತ್ತದೆ ಹೊರತು ಮುಖ ತೋರಿಸಲಾ ಗಿಲ್ಲ. ಈ ಕುರಿತು ಹಲವಾರು ಪ್ರಶ್ನೆಗಳು ಎದ್ದ ಬಳಿಕ ಟೈಮ್‌ ನಿಯತಕಾಲಿಕೆಯ ಸಂಪಾ ದಕರು ಕಾರಣವನ್ನು ಹೊರಬಿಟ್ಟಿದ್ದಾರೆ. “ಗುರುತು ಪತ್ತೆಯಾದರೆ ಪೀಡಕರು ಅವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಬಹುದು ಎಂಬ ಭಯದಿಂದ ತಮ್ಮ ಫೋಟೋ ಹಾಕದಂತೆ ಅವರೇ ಕೇಳಿಕೊಂಡರು. ಅಲ್ಲಿ ಪ್ರಕಟವಾಗದಿರುವ ಫೋಟೊ ಈಗಲೂ ಲೈಂಗಿಕ ದೌರ್ಜನ್ಯದ ಕುರಿತು ಧೈರ್ಯವಾಗಿ ಮಾತನಾಡದೇ ಇರುವವರನ್ನು ಸೂಚಿಸುತ್ತದೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next