Advertisement

ರಾಷ್ಟ್ರಪತಿಗಳ ಆದೇಶದಲ್ಲಿ ಏನಿದೆ?

12:08 AM Aug 06, 2019 | Team Udayavani |

ಕೇಂದ್ರ ಗೃಹ ಸಚಿವ ಅಮಿತ್‌ ಶಾ ರಾಜ್ಯಸಭೆಯಲ್ಲಿ ಓದಿದ ಸಂವಿಧಾನದ 370ನೇ ವಿಧಿ ರದ್ದು ಮಾಡುವ ಆದೇಶದ ಸಾರ ಈ ರೀತಿ ಇದೆ: “ಜಮ್ಮು ಮತ್ತು ಕಾಶ್ಮೀರ ಸರಕಾರದ ಸಹಮತದೊಂದಿಗೆ ಅದಕ್ಕಾಗಿ ರಚಿತವಾಗಿರುವ ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಆದೇಶ 2019ರ ಅನುಸಾರ, ಆ ರಾಜ್ಯಕ್ಕೆ ಇನ್ನು ಭಾರತದ ಸಂವಿಧಾನದ ನಿಯಮಗಳು ಅನ್ವಯವಾಗುತ್ತವೆ.

Advertisement

ಈ ಆದೇಶ 1954ರಿಂದ ಜಾರಿಯಲ್ಲಿರುವ ಸಂವಿಧಾನದ (ಜಮ್ಮು ಮತ್ತು ಕಾಶ್ಮೀರ) ಆದೇಶದ ಸ್ಥಾನದಲ್ಲಿ ಜಾರಿಯಾಗಲಿದೆ. ಸಂವಿಧಾನದ 367ನೇ ವಿಧಿಯ 4ನೇ ಉಪ ನಿಯಮದಲ್ಲಿ ನಾಲ್ಕು ಬದಲಾವಣೆಗಳನ್ನು ಸೂಚಿಸುತ್ತದೆ. ಈ ಸಂವಿಧಾನದಲ್ಲಿ ಸೂಚಿತವಾದಂತೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಾಗಿರುವ ಸದರ್‌-ಐ-ರಿಯಾಸತ್‌, ಅಲ್ಲಿನ ಸಚಿವ ಸಂಪುಟದ ಸಲಹೆಯಂತೆ ರಾಜ್ಯಪಾಲರ ನಿಬಂಧನಗೆ ಒಳಪಟ್ಟಿರುತ್ತದೆ. ಈ ಸಂವಿಧಾನದಲ್ಲಿ ಸೂಚಿತವಾದಂತೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಾಗಿರುವ ಸದರ್‌-ಐ-ರಿಯಾಸತ್‌, ಅಲ್ಲಿನ ಸಚಿವ ಸಂಪುಟದ ಸಲಹೆಯಂತೆ ರಾಜ್ಯಪಾಲರ ನಿಬಂಧನಗೆ ಒಳಪಟ್ಟಿರುತ್ತದೆ. ಸಂವಿಧಾನದ 370ನೇ ವಿಧಿಯ ನಿಯಮ 3ರ ಅನ್ವಯ, ಕಾನ್‌ಸ್ಟಿಟ್ಯುವೆಂಟ್‌ ಅಸೆಂಬ್ಲಿಯನ್ನು ನಿಯಮ 2ರ ಅನ್ವಯ ರಾಜ್ಯದ ವಿಧಾನಸಭೆ ಎಂದು ಅಂಗೀಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next