Advertisement

ಲಂಚ್ಬಾಕ್ಸ್‌ನಲ್ಲಿರಲಿ ಬಗೆ ಬಗೆ ತಿಂಡಿ

05:15 PM Jul 06, 2019 | mahesh |

ಸಿಗೆ ರಜೆ ಮುಗಿದು ಮಕ್ಕಳಿಗೆ ಶಾಲೆ ಪ್ರಾರಂಭವಾಗುತ್ತಿದ್ದಂತೆ ಅಮ್ಮನಿಗೆ ಟಿಫ್ನ್‌ ಬಾಕ್ಸ್‌ಗೆ ಏನು ಹಾಕುವುದು ಎಂಬ ಚಿಂತೆ ಆರಂಭವಾಗುತ್ತದೆ. ಮಾಡಿದ್ದೇ ತಿಂಡಿ ಮಾಡಿದರೆ ಮಕ್ಕಳು ಬಾಕ್ಸ್‌ ಖಾಲಿ ಮಾಡದೇ ಹಾಗೇ ವಾಪಾಸು ತರುತ್ತಾರೆ. ಅದಕ್ಕಾಗಿ ಹೊಸ ಹೊಸ ರುಚಿಗಳ ಹಲವು ಬಗೆ ಇಲ್ಲಿವೆ.

Advertisement

ಕರಿಬೇವು ರೈಸ್

ಬೇಕಾಗುವ ಸಾಮಗ್ರಿಗಳು:

••ಉಪ್ಪು – ರುಚಿಗೆ ತಕ್ಕಷ್ಟು
••ಖಾರದ ಪುಡಿ – 2 ರಿಂದ 3 ಚಮಚ
••ಅರಿಶಿನ -1ರಿಂದ 2 ಚಮಚ
••ಕರಿಬೇವು- 1 ಕಪ್‌
••ಎಣ್ಣೆ – 4 ರಿಂದ 5 ಚಮಚ
••ಕಡಲೆ ಬೇಳೆ – ಸ್ವಲ್ಪ
••ಶೇಂಗಾ – 1 ಮುಷ್ಟಿ
••ಜೀರಿಗೆ – ಸ್ವಲ್ಪ
••ಸಾಸಿವೆ -ಸ್ವಲ್ಪ
••ರೈಸ್‌- 3 ರಿಂದ 4 ಕಪ್‌

ಮಾಡುವ ವಿಧಾನ
ಮೊದಲು ಅನ್ನ ಬೇಯಿಸಿಟ್ಟುಕೊಳ್ಳಿ. ಅನಂತರ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ ಹಾಕಿ ಸ್ವಲ್ಪ ಹುರಿದುಕೊಂಡು ಅದಕ್ಕೆ ಕಡಲೆಬೇಳೆ, ಶೇಂಗಾ, ಕರಿಬೇವು ಹಾಕಿ ಇನ್ನೊಮ್ಮೆ ಹುರಿದುಕೊಂಡು ಅನಂತರ ಉಪ್ಪು, ಖಾರದ ಪುಡಿ, ಅರಿಶಿನ ಮೂರನ್ನು ಒಂದೇ ಬಾರಿಗೆ ಹಾಕಿ ಚೆನ್ನಾಗಿ ಕಲಸಿ ಅನಂತರ ಬೆಂದ ಅನ್ನವನ್ನು ಆ ಮಿಶ್ರಣಕ್ಕೆ ಹಾಕಿ ಕಲಸಿಕೊಂಡರೆ ರುಚಿ ರುಚಿಯಾದ ಕರಿಬೇವು ರೈಸ್‌ ಟಿಫ‌ನ್‌ಗೆ ತೆಗೆದುಕೊಂಡು ಹೋಗಲು ಸಿದ್ಧ.

Advertisement

ವೆಜ್‌ ಸ್ಪ್ರಿಂಗ್‌ ರೋಲ್
ಬೇಕಾಗುವ ಸಾಮಗ್ರಿಗಳು:

••ಮೈದಾ -2 ಕಪ್‌
••ಎಣ್ಣೆ – 2 ಚಮಚ
••ಉಪ್ಪು – ರುಚಿಗೆ ತಕ್ಕಷ್ಟು
••ಜೀರಿಗೆ -ಸ್ವಲ್ಪ
••ಈರುಳ್ಳಿ- 2 ರಿಂದ 3
••ಕ್ಯಾಬೆಜ್‌- ಅರ್ಧ( ತುರಿದಿಟ್ಟುಕೊಳ್ಳಿ)
••ಕ್ಯಾರೆಟ್- 2 ರಿಂದ 3
••ಬಿನ್ಸ್‌ – 8 ರಿಂದ 9
••ಪನ್ನೀರ್‌ -ಸ್ವಲ್ಪ
••ವಿನೇಗರ್‌ – 2 ಚಮಚ

ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ 2 ಕಪ್‌ ಮೈದಾ ಹಿಟ್ಟನ್ನು ಹಾಕಿ ಅದಕ್ಕೆ ಸ್ವಲ್ಪ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಹದವಾಗಿ ಕಲಸಿಕೊಳ್ಳಬೇಕು. ಅನಂತರ ಬೇಕಾದಲ್ಲಿ ಸ್ವಲ್ಪ ಸ್ವಲ್ಪ ಬೆಚ್ಚನೆಯ ನೀರನ್ನು ಹಾಕಿ ಕಲಸಿಕೊಳ್ಳಬೇಕು ಮತ್ತು 20 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಡಿ. ಅನಂತರ ಅದನ್ನು ಚಿಕ್ಕ ಚಿಕ್ಕ ಉಂಡೆಯ ಆಕೃತಿಯಲ್ಲಿ ಮಾಡಿಕೊಂಡು ಅದನ್ನು ಪೂರಿಯ ಆಕೃತಿಯಲ್ಲಿ ಲಟ್ಟಿಸಿಕೊಂಡು ಒಂದರ ಮೇಲೆ ಒಂದರಂತೆ ಎಣ್ಣೆ ಹಚ್ಚಿ ಜೋಡಿಸಿಕೊಂಡು ಪುನಃ ಲಟ್ಟಿಸಿ ಚಿಕ್ಕ ಉರಿಯಲ್ಲಿ ಬೇಯಿಸಿಕೊಳ್ಳಬೇಕು. ಇನ್ನೊಂದು ಬಾಣಲೆಯಲ್ಲಿ ಎಣ್ಣೆ, ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ, ಕ್ಯಾಬೆಜ್‌, ಬಿನ್ಸ್‌ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅನಂತರ ಸ್ವಲ್ಪ ವಿನೆಗರ್‌, ಪನ್ನೀರನ್ನು ಸೇರಿಸಿ ಸರಿಯಾಗಿ ಕಲಸಿಕೊಳ್ಳಿ ಅನಂತರ ಈ ಮಿಶ್ರಣವನ್ನು ಅರ್ಧ ಬೇಯಿಸಿಕೊಂಡ ಪೂರಿಯ ಮೇಲೆ ಇರಿಸಿ ಅದನ್ನು ಮೈದಾದ ಸಹಾಯದಿಂದ ಸುತ್ತಿ ಮಿಶ್ರಣ ಹೊರಗೆ ಹೋಗದಂತೆ ಸುತ್ತಿಕೊಂಡು ಕಾಯಿಸಿಕೊಂಡ ಎಣ್ಣೆಯಲ್ಲಿ ಅದನ್ನು ಸಣ್ಣನೆಯ ಉರಿಯಲ್ಲಿ ಬೇಯಿಸಿಕೊಂಡರೆ ಸಾಸ್‌ ಜೊತೆಯಲ್ಲಿ ಮಕ್ಕಳಿಗೆ ಸವಿಯಲು ಸಿದ್ಧ.

ಸೌತೆಕಾಯಿ ತಾಲಿಪೆಟ್ಟು
ಬೇಕಾಗುವ ಸಾಮಗ್ರಿಗಳು:
••ಸೌತೆಕಾಯಿ ಅಥವಾ ದೊಡ್ಡ ಸೌತೆ -1ರಿಂದ 2
••ಅಕ್ಕಿಹಿಟ್ಟು – 3 ರಿಂದ 4 ಬೌಲ್
••ಈರುಳ್ಳಿ- 2 ರಿಂದ 3
••ಹಸಿಮೆಣಸಿನಕಾಯಿ – 1 ರಿಂದ 2
••ಶುಂಠಿ -ಸ್ವಲ್ಪ
••ಉಪ್ಪು – ರುಚಿಗೆ ತಕ್ಕಷ್ಟು
••ಕೊತ್ತಂಬರಿ ಸೊಪ್ಪು -ಸ್ವಲ್ಪ
••ಬೆಲ್ಲ- ರುಚಿಗೆ ಬೇಕಾದಷ್ಟು
••ಕಾಯಿತುರಿ- ಸ್ವಲ್ಪ

ಮಾಡುವ ವಿಧಾನ
ಸೌತೆಕಾಯಿ ತುರಿದುಕೊಂಡು, ಅನಂತರ ಅದಕ್ಕೆ ಚಿಕ್ಕದಾಗಿ ಹೆಚ್ಚಿಕೊಂಡ ಶುಂಠಿ, ಈರುಳ್ಳಿ, ಹಸಿಮೆಣಸಿನಕಾಯಿ, ಕಾಯಿತುರಿ, ಬೆಲ್ಲ, ಕೊತ್ತಂಬರಿ ಸೊಪ್ಪನ್ನು ಹಾಕಿ ಕಲಸಿಕೊಂಡು ಬಾಡಿಸಿದ ಬಾಳೆ ಎಲೆಯ ಮೆಲೆ ಅದನ್ನು ಕೈಯಿಂದ ತಟ್ಟುತ್ತಾ ಚಪಾತಿಯ ಆಕೃತಿ ಮಾಡಿಕೊಂಡು ಸಣ್ಣ ಉರಿಯಲ್ಲಿ ಬೇಯಿಸಿಕೊಂಡರೆ ಸೌತೆಕಾಯಿ ತಾಲಿಪಟ್ಟು ಸವಿಯಲು ಸಿದ್ಧ.

ಹೆಸರುಕಾಳು ಉಸುಲಿ

ಬೇಕಾಗುವ ಸಾಮಗ್ರಿಗಳು:
••ನೆನೆಸಿಟ್ಟ ಹೆಸರುಕಾಳು -1 ರಿಂದ 2 ಬೌಲ್
••ಹಸಿಮೆಣಸು – 1ರಿಂ ದ 2
••ಈರುಳ್ಳಿ – 1 ರಿಂದ 2
••ಟೊಮೇಟೊ -1 ರಿಂದ 2
•ಉದ್ದಿನ ಬೇಳೆ – ಸ್ವಲ್ಪ
••ಸಾಸಿವೆ -ಸ್ವಲ್ಪ
••ಎಣ್ಣೆ -ಒಗ್ಗರಣೆಗೆ ಬೇಕಾದಷ್ಟು

ಮಾಡುವ ವಿಧಾನ
ರಾತ್ರಿ ನೆನೆಸಿಟ್ಟ ಹೆಸರುಕಾಳಿನ ನೀರನ್ನು ಬಸಿದು ಇನ್ನೊಂದು ಬಾರಿ ನೀರಿನಲ್ಲಿ ತೊಳೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪನ್ನು ಹಾಕಿ ಬೇಯಿಸಿಕೊಳ್ಳಬೇಕು. ಅನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯುತ್ತಿರುವಂತೆ ಅದಕ್ಕೆ ಉದ್ದಿನಬೇಳೆ, ಸಾಸಿವೆ ಕಾಳನ್ನು ಸೇರಿಸಿ ಹುರಿದುಕೊಳ್ಳಬೇಕು. ನಂತರ ಅದಕ್ಕೆ ಹೆಚ್ಚಿಕೊಂಡ ಈರುಳ್ಳಿ ಹಾಕಿ ಸ್ವಲ್ಪ ಹೊತ್ತಿನ ಬಳಿಕ ಟೊಮೇಟೊ ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಬೇಕು ನಂತರ ಅದಕ್ಕೆ ಹಸಿಮೆಣಸು ಹಾಕಿ ಇನ್ನೊಮ್ಮೆ ಹುರಿದು ಖಾರ ಬಿಟ್ಟ ನಂತರ ಅದಕ್ಕೆ ಬೇಯಿಸಿಟ್ಟುಕೊಂಡ ಹೆಸರುಕಾಳನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಸ್ವಲ್ಪ ನೀರು ಹಾಕಿ 10 ನಿಮಿಷ ನೀರು ಆರಲು ಬಿಡಿ. ನಂತರ ಅದಕ್ಕೆ ಮೇಲಿಂದ ಕೊತ್ತಂಬರಿ ಸೊಪ್ಪನ್ನು ಉದುರಿಸಿಕೊಂಡರೆ ಶಕ್ತಿಯುತವಾದ ಮತ್ತು ಮಕ್ಕಳಿಗೆ ಇಷ್ಟವಾಗುವ ಉಸುಲಿ ಟಿಫ‌ನ್‌ ಬಾಕ್ಸ್‌ಗೆ ತೆಗೆದುಕೊಂಡಲು ಹೋಗಲು ಸಿದ್ಧ.

•••ಪ್ರೀತಿ ಭಟ್ ಗುಣವಂತೆ

Advertisement

Udayavani is now on Telegram. Click here to join our channel and stay updated with the latest news.

Next