Advertisement

ಮಗುವಿಗೆ ಟ್ರಂಪ್‌ ಹೆಸರು

07:30 AM Mar 18, 2018 | Team Udayavani |

ಕಾಬೂಲ್‌: ಅಮೆರಿಕ ಹೆಸರಿತ್ತಿದರೆ ಉರಿದುಬೀಳುವ ಉಗ್ರವಾದಿಗಳ ತಾಣವಾದ ಆಫ್ಘಾನಿಸ್ತಾನದ ಕುಟುಂಬವೊಂದು ತಮ್ಮ ಪುತ್ರನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೆಸರಿಟ್ಟಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ ರುವ ಸಯೀದ್‌ ಅಸಾದುಲ್ಲಾ ಪೂಯ ಅಮೆ ರಿಕ ಅಧ್ಯಕ್ಷರ ಮೇಲೆ ಇರುವ ಅಭಿಮಾನ ದಿಂದ ಎರಡೂವರೆ ವರ್ಷದ ಪುತ್ರನಿಗೆ ನಾಮಕರಣ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಪೇಸ್‌ಬುಕ್‌ನಲ್ಲಿ ಅದನ್ನು ಪೋಸ್ಟ್‌ ಮಾಡಿದ್ದಕ್ಕೆ ಕಿಡಿಗೇಡಿಗಳು ಬೆದರಿಕೆಯನ್ನೂ ಹಾಕಿದ್ದಾರೆ. ಸಯೀದ್‌ ಕುಟುಂಬ ಸರ್ವನಾಶ ಮಾಡುವ ಬೆದರಿಕೆ ಹಾಕಿದ್ದಾರೆ. 

Advertisement

ಈ ಆರೋಪ ಅಲ್ಲಗಳೆದಿರುವ ಸಯೀದ್‌, ತಾವು ಫೇಸ್‌ಬುಕ್‌ನಲ್ಲಿ ಮಗನ ಫೋಟೋ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು “ಯಾರೋ ತಮ್ಮ ಕುಟುಂಬದ ಬಗ್ಗೆ ಗೊತ್ತಿರುವವರು ಈ ಫೇಸ್‌ಬುಕ್ಕಿನಲ್ಲಿ ಈ ಫೋಟೋ ಹಾಕಿ ವಿವಾದ ಎಬ್ಬಿಸಿದ್ದಾರೆ. ಇದೀಗ, ನನ್ನ ಫೇಸ್‌ಬುಕ್‌ ಖಾತೆ ರದ್ದುಗೊಳಿಸಿದ್ದೇನೆ’ ಎಂದಿದ್ದಾರೆ.

ಅಲ್ಲದೆ, “ನಾನು ಟ್ರಂಪ್‌ ಅಭಿಮಾನಿ. ಹಾಗಾಗಿ, ಮಗುವಿಗೆ ಅವರ ಹೆಸರಿಟ್ಟಿದ್ದೆ. ಆದರೆ, ಆಫ್ಘಾನ್ನರು ಹೆಸರಿನ ಬಗ್ಗೆ ಇಷ್ಟು ಭಾವುಕರಾಗುತ್ತಾರೆಂದು ತಿಳಿದಿರಲಿಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next