Advertisement
ಕುಲಪತಿಗಳ ಮುಂದೆ ಕುಳಿತು “ಸಾರ್, ಒಂದೊಂದು ಪದವಿ ಕೋರ್ಸ್ ಮುಗಿಸಲು ದೀರ್ಘ ಅವಧಿ ತಗಲುತ್ತದೆ. ಬೇಗ ಬೇಗ ಪಾಠ ಮಾಡಿ, ಅತಿ ಬೇಗ ಪದವೀಧರರನ್ನಾಗಿ ರೂಪಿಸಲು ಸಾಧ್ಯವಿಲ್ಲವೇ? ಅಂಥದೊಂದು ಪ್ರಯೋಗವನ್ನು ಈ ವರ್ಷದಿಂದಲೇ ನನ್ನ ಮಗನ ಮೇಲೆ ಏಕೆ ಮಾಡಬಾರದು?’ ಅಂದ.
ಹೇಳಿದರು. “ಈ ಲೋಕದ ಚರಾಚರವೂ ಭಗವಂತನ ಸೃಷ್ಟಿ ಎಂದು ಹಿರಿಯರು ಹೇಳಿರುವುದನ್ನು ನೀವೂ ಕೇಳಿಯೇ ಇರುತ್ತೀರಿ. ಒಂದು ಚಿಕ್ಕ ಸಸಿ, ಮರವಾಗಿ ಬೆಳೆದು ಮಾವಿನ ಹಣ್ಣಿನ ಫಲ ನೀಡಲು ಭರ್ತಿ 12 ವರ್ಷಗಳ ಕಾಲಾಕಾಶಬೇಕು.
ಹಾಗೆಯೇ, ಕ್ಷಣ ಮಾತ್ರದಲ್ಲಿ ಪುಡಿಪುಡಿಯಾಗುವ ಗ್ಲಾಸ ತಯಾರು ಮಾಡಲು ಕೇವಲ ಎರಡು ತಿಂಗಳ ಸಾಕು. ನಿಮ್ಮ ಮಗ, ನೂರು ಮಂದಿಯ ಹಸಿವು ತಣಿಸುವ ಮಾವಿನ
ಮರ ಆಗಬೇಕೋ ಅಥವಾ ಒಂದು ಗ್ಲಾಸ್ ಆಗಿ ಉಳಿದರೆ ಸಾಕೋ ನೀವೇ ನಿರ್ಧರಿಸಿ’ಅಂದರು. ಉದ್ಯಮಿ ಪೆಚ್ಚಾದ.