Advertisement

ನಾದಮಯ ಗ್ರೂಪ್‌ ಸದಸ್ಯರ ‘ಸ್ನೇಹಮಿಲನ’

01:09 PM Jul 15, 2019 | Team Udayavani |

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ವಿಶ್ವವಿದ್ಯಾಲಯದ ಸಪ್ತರ್ಷಿ ಹಾಲ್ ನಲ್ಲಿ ರವಿವಾರ ನಾದಮಯ ಈ ಲೋಕವೆಲ್ಲಾ ವಾಟ್ಸ್‌ ಆ್ಯಪ್‌ ಗ್ರೂಪ್ ನ ಉತ್ತರ ಕರ್ನಾಟಕ ಭಾಗದ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮ ಜರುಗಿತು.

Advertisement

ಗ್ರೂಪ್‌ ಅಡ್ಮಿನ್‌ಗಳಾದ ಸ್ವೀಡನ್‌ದ ಮಂಜುಳಾ ದೇಶಪಾಂಡೆ, ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಸೆನೆಟ್ ಸದಸ್ಯ ನರಸಿಂಹ ರಾಯಚೂರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಆರಂಭದಲ್ಲಿ ಕುಮಾರಿ ಸುರಬಿ ಮಳಗಿ ಓಂ ಗಣನಾಥ ಗೌರಿ ವದನ ಹಾಡಿನೊಂದಿಗೆ ಸಂಗೀತ ಕಾರ್ಯಕ್ರಮ ಆರಂಭವಾಯಿತು. ನಂತರ ಕುಮಾರಿ ದಿಶಾ ತೊಗರಿ ಐಯಾ ಕೆ ಗಜರಿ ಯಾ, ಗಜಮುಖನೆ ಗಣನಾಥನೆ ಹಾಡಿದಳು. ಅಂಜಲಿನಾ ಅವರು ತುಂತುರು ಮಳೆ ನೀರು ಹಾಡಿದರೆ, ಸಂಜನಾ ಪದಕಿ ಘರಿಯಾ ಭರಣವೇ ಹಾಡಿದರು.

ಡಾ| ಶಿವಯೋಗಿ ಬಳಿಗಾರ ರಾಗ ಬಹಾರದಲ್ಲಿ ಬಸವಣ್ಣನವರ ವಚನ ಮೇಲುಗುಣವನರಸುವರೇ ನಂತರ ರಾಗ ಭೀಮಪ್ಲಾಸ್‌ದಲ್ಲಿ ಪುರಂದರದಾಸರ ನಾ ನಿನ್ನ ಧ್ಯಾನದೊಳಿರಲು ಹಾಡಿದರು.

ಕುಮಾರಿ ಅರ್ಪಿತಾ ಬುರಲಿ ಓಂನಮಃ ಶಿವಾಯ ಹಾಡಿದರೆ, ಶ್ರೀದೇವಿ ಪಾಟೀಲ ಅವರು ಏಕೆ ವೃಂದಾವನದಲ್ಲಿ ನೆಲೆಸಿರುವೆ ಭೂದೇವಿ ಹಾಡಿದರು. ಪ್ರಕಾಶ ಪದಕಿ ಅವರು ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡಿದರೆ, ಪ್ರತಿಮಾ ಜೋಶಿಯವರು ಕಂಡು ಕಂಡು ನೀ ಎನ್ನ ಕೈ ಬಿಡುವೆನೆ ಕೃಷ್ಣಾ ಹಾಡಿ ನಂತರ ಸತತ ಪಾಲಿಸು ಎನ್ನ ಯತಿ ರಾಘವೇಂದ್ರ ಗೀತೆ ಹಾಡಿದರು.

Advertisement

ಹೊಂಡಗಾಸಿಯ ರೇಖಾ ಹೆಗಡೆ ದಕ್ಷಿಣಾದಿ ರಾಗ ಅಮೃತವರ್ಷಿಣಿಯಲ್ಲಿ ಶರಣ್ಯೆ ವರಣ್ಯೆ ಸುಖಾರುಣ್ಯ ಮೂರ್ತೇ ಹಾಡಿದರೆ, ಹಾವೇರಿಯ ವಾಣಿ ಕಣೇಕಲ್ ಅವರು ಒಂದೇ ಬೆಳ್ಳಿ ಮುಗಿಲನ್ನು ಮಡಿಲಲ್ಲಿ ಹಿಡಿದಿರುವ ಹಾಡು ನಂತರ ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯ ಮಂಗಲ ಮೂರ್ತಿಯಾ ಹಾಡಿದರು.

ಹೇಮಾ ಜೋಶಿ ಅವರು ಜಾನಿ ಜವಾನಿ ಚಲ್ ಜಮಖಂಡಿ ಎಂಬ ಜನಪದ ಗೀತೆ ಹಾಡಿದರೆ, ಮಳಗಿ ಕುಟುಂಬದವರು ಎಚ್ಚರ..ಎಚ್ಚರ..ಗಡಿ ಕಾಯುವ ಯೋಧರೇ ನಂತರ ಸ್ವಾಮಿ ನಿನ್ನ ದ್ಯಾವರ ಎಂಬ ಜಾನಪದ ಗೀತೆ ಹಾಡಿದರು.

ರವೀಂದ್ರ ಮಳಗಿಯವರು ರಾಗ ಜೋಗದಲ್ಲಿ ವಾಯಲಿನ್‌ ನುಡಿಸಿದರೆ, ತುಷಾರ್‌ ಮಳಗಿ ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಹಾಡಿದರು. ಪ್ರತಿಮಾ ಜೋಶಿಯವರ ಭೈರವಿ ರಾಗದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಆರಂಭದಲ್ಲಿ ನಾದಮಯ ಗ್ರುಪ್‌ ನ ಸದಸ್ಯರ ಪರಿಚಯ ಕಾರ್ಯಕ್ರಮ ನಡೆಯಿತು. ಅಜಿತ್‌ ಕಾರೇಕರ್‌ ಸ್ವಾಗತಿಸಿ, ನಿರೂಪಿಸಿದರು. ನರಸಿಂಹ ರಾಯಚೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next