Advertisement
ದೇಹಕ್ಕೆ ಶಕ್ತಿ ತುಂಬಲೆಂದೋ, ಮಕ್ಕಳ ಬೆಳವಣಿಗೆಗೆಂದೋ ಆಹಾರ ಸೇವಿಸಿದರೆ, ಅದು ಆಹಾರವಾಗಿಯಷ್ಟೇ ಹೊಟ್ಟೆ ಸೇರುತ್ತದೆ ವಿನಾ ಪೌಷ್ಟಿಕಾಂಶಯುಕ್ತ ಆಹಾರವಾಗದು. ಆಹಾರ ಬೇಕೆಂದು ಬೇಕಾಬಿಟ್ಟಿಯಾಗಿ ಸಿಕ್ಕಿದ್ದನ್ನೆಲ್ಲ ತಿನ್ನುವುದೂ, ತಿನ್ನಿಸುವುದೂ ಎಳವೆಯಿಂದಲೇ ಹಾನಿಕಾರಕ. ಕಳಪೆ ಆಹಾರ, ಆಹಾರದ ಕೊರತೆಯೂ ಅಪೌಷ್ಟಿಕತೆ ಹೆಚ್ಚಲು ಕಾರಣವಾಗುತ್ತದೆ.
Related Articles
Advertisement
ಸೊಪ್ಪು ತರಕಾರಿ ಸೇವಿಸಿಹಸಿರು ಸೊಪ್ಪು, ತರಕಾರಿ, ಮೀನು, ದವಸ ಧಾನ್ಯ, ಮೊಟ್ಟೆ ಸೇವಿಸುವುದರಿಂದ ಪೌಷ್ಟಿಕಾಂಶ ಹೆಚ್ಚಾಗಲು ಸಾಧ್ಯವಾಗುತ್ತದೆ. ಭ್ರೂಣವು ಹೊಟ್ಟೆಯಲ್ಲಿ ಬೆಳವಣಿಗೆ ಹಂತದಲ್ಲಿರುವಾಗಲೇ ತಾಯಿ ಹೆಚ್ಚಾಗಿ ಪಾಲಕ್ ಸೊಪ್ಪು, ಮೆಂತ್ಯೆ ಸೊಪ್ಪು, ನುಗ್ಗೆ ಸೊಪ್ಪು, ಪುದೀನಾ ಸೊಪ್ಪು ಸೇವಿಸಬೇಕು. ಇದರಲ್ಲಿ ಕಬ್ಬಿಣಾಂಶ ಅಧಿಕವಾಗಿರುತ್ತದೆ. ಹಸಿರು ಎಲೆ ತರಕಾರಿಗಳು ದೇಹದಲ್ಲಿ ಎ ಅನ್ನಾಂಗವಾಗಿ ಪರಿವರ್ತನೆಯಾಗುತ್ತವೆ. ಇದರಿಂದ ಕುರುಡುತನ ಮುಂತಾದವುಗಳನ್ನು ತಪ್ಪಿಸಬಹುದು. ಪರೀಕ್ಷೆಗೊಳಪಡಿಸಿ
ಮಗುವನ್ನು ಕಾಲಕಾಲಕ್ಕೆ ವೈದ್ಯರಲ್ಲಿ ಪರೀಕ್ಷೆಗೊಳಪಡಿಸಿ. ಅಪೌಷ್ಟಿಕತೆ ಬಗ್ಗೆ ವೈದ್ಯರು ತಿಳಿಸಿದ್ದಲ್ಲಿ ಸೂಕ್ತ ಪೋಷಕಾಂಶಭರಿತ ಆಹಾರ ಸೇವಿಸುವುದರತ್ತ ಗಮನ ಹರಿಸಿ. ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಸೊಪ್ಪು ತರಕಾರಿ, ದವಸಧಾನ್ಯಗಳ ಸೇವನೆಗೆ ಮೊದಲ ಆದ್ಯತೆ ಇರಲಿ. ಹಾಲು, ಮೊಸರು, ಮೊಟ್ಟೆ, ಮೀನು ಸೇವನೆ ರೂಢಿಯಾಗಲಿ. ಒಟ್ಟಿನಲ್ಲಿ ದೇಹಕ್ಕೆ ಬೇಕಾಗುವ ಉತ್ತಮ ವಿಟಮಿನ್, ಖನಿಜಾಂಶ, ಪೋಷಕಾಂಶಭರಿತ ಆಹಾರದತ್ತ ಗಮನಹರಿಸಿ. ಗರ್ಭಿಣಿಯರು ಪೌಷ್ಟಿಕಾಂಶಭರಿತ ಆಹಾರ ಸೇವನೆ ಮಾಡುವುದರೊಂದಿಗೆ ವೈದ್ಯರ ಸಲಹೆಯೊಂದಿಗೆ ಕಬ್ಬಿಣಾಂಶ ಮಾತ್ರೆಗಳನ್ನು ಸೇವನೆ ಮಾಡಬೇಕು. ಆರೋಗ್ಯ ಸ್ಥಿರ
ಮೂಢನಂಬಿಕೆ, ಬಡತನ, ಆಹಾರ ತೆಗೆದುಕೊಳ್ಳುವ ಸಂಬಂಧಿ ಸಿದಂತೆ ಇರುವ ಮಾಹಿತಿ ಕೊರತೆ ಮುಂತಾದ ಕಾರಣಗಳಿಂದಾಗಿ ಅಪೌಷ್ಟಿಕತೆ ಪ್ರಮಾಣ ಹೆಚ್ಚುತ್ತಿದೆ. ಮಹಿಳೆ ಗರ್ಭಾವಸ್ಥೆಯಲ್ಲಿರುವಾಗ ಸೂಕ್ತ ಪ್ರಮಾ ಣದ ಪೋಷಕಾಂಶಯುಕ್ತ ಆಹಾರ, ಸೊಪ್ಪು ತರಕಾರಿ, ಧಾನ್ಯಗಳನ್ನು ಸೇವನೆ ಮಾಡಬೇಕು. ಸಮತೋಲಿತ ಆಹಾರ ಕ್ರಮ ರೂಢಿಸಿ ಕೊಂಡರೆ ಮಗುವಿನ ಬೆಳವಣಿಗೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದು. ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸಿ ಪೌಷ್ಟಿಕತೆ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು.
– ಡಾ| ಸವಿತಾ, ವೈದ್ಯರು