Advertisement

ಮಸೂದ್ ಜಾಗತಿಕ ಉಗ್ರ ಅಂತ ವಿಶ್ವಸಂಸ್ಥೆ ಘೋಷಿಸಿದ್ರೆ ಏನಾಗಲಿದೆ?

09:54 AM Feb 28, 2019 | Sharanya Alva |

ನವದೆಹಲಿ:ಪಾಕಿಸ್ತಾನದ ಮೂಲದ ಭಯೋತ್ಪಾದಕ ಸಂಘಟನೆ ಜೈಶ್ ಎ ಮೊಹಮ್ಮದ್ ನ ಸ್ಥಾಪಕ ಮಸೂದ್ ಅಜರ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕು ಎಂಬುದಾಗಿ ಅಮೆರಿಕ, ಯುಕೆ ಹಾಗೂ ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬುಧವಾರ ಮತ್ತೆ ಹೊಸ ಪ್ರಸ್ತಾಪ ಮುಂದಿಟ್ಟು ಒತ್ತಾಯಿಸಿದೆ.

Advertisement

ಒಂದು ವೇಳೆ ಮಸೂದ್ ಅಜರ್ ನ ಜೈಶ್ ಎ ಮೊಹಮ್ಮದ್ ಸಂಘಟನೆಯನ್ನು ವಿಶ್ವಸಂಸ್ಥೆ ನಿಷೇಧಿಸಿ,ಅಜರ್ ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸಿ ಘೋಷಣೆ ಮಾಡಿದರೆ ಏನಾಗಲಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಆರ್ಥಿಕ ಹೊಡೆತ:

ಒಂದು ಬಾರಿ ವೈಯಕ್ತಿಕವಾಗಲಿ ಅಥವಾ ಸಂಘಟನೆಯನ್ನಾಗಲಿ ವಿಶ್ವಸಂಸ್ಥೆ ಭಯೋತ್ಪಾದಕ ಪಟ್ಟಿಯಲ್ಲಿ ಸೇರಿಸಿದರೆ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಕೂಡಾ ಅದಕ್ಕೆ ಜವಾಬ್ದಾರಾಗಿರುತ್ತಾರೆ. ಆ ಜವಾಬ್ದಾರಿ ಏನು ಗೊತ್ತಾ…

Advertisement

1)ಆತನ ವಹಿವಾಟನ್ನು ಮಟ್ಟುಗೋಲು ಹಾಕಿಕೊಳ್ಳಬೇಕು, ಆರ್ಥಿಕ ವಹಿವಾಟು ಸ್ಥಗಿತಗೊಳಿಸಬೇಕು.

2)ಭಯೋತ್ಪಾದನ ಸಂಘಟನೆಗೆ ವೈಯಕ್ತಿಕವಾಗಿ ಹಾಗೂ ಇತರ ಸಂಘಟನೆಗಳಿಂದ ಬರುವ ಆರ್ಥಿಕ ನೆರವನ್ನು ಮಟ್ಟುಗೋಲು ಹಾಕಿಕೊಳ್ಳಬೇಕು.

3)ಆತನಿಗೆ ಆರ್ಥಿಕವಾಗಿ ನೆರವು ನೀಡುವವರ ಅಥವಾ ಸಂಘಟನೆಗಳ ಪಟ್ಟಿ ಮಾಡಿ ಅವುಗಳನ್ನು ನಿಷೇಧಿಸಲು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.

ಓಡಾಟಕ್ಕೂ ಬ್ರೇಕ್:

ಜೈಶ್ ಸಂಘಟನೆಗೆ ಸೇರಿದ ಎಲ್ಲಾ ಉಗ್ರರಿಗೂ ಎಲ್ಲಾ ದೇಶಗಳು ನಿಷೇಧ ಹೇರಬೇಕಾಗುತ್ತದೆ. ಆತನ ಉಪಸ್ಥಿತಿಯಾಗಲಿ, ಓಡಾಟಕ್ಕೂ ಅವಕಾಶ ಮಾಡಿಕೊಡಬೇಕಾದ ಹೊಣೆ ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ಹೊಣೆಯಾಗಿರುತ್ತದೆ.

ಶಸ್ತ್ರಾಸ್ತ್ರ ಒದಗಿಸಲು ನಿಷೇಧ:

ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಉಗ್ರ ಅಜರ್ ಮಸೂದ್ ಗೆ ನೇರ ಅತವಾ ಪರೋಕ್ಷವಾಗಿ ಶಸ್ತ್ರಾಸ್ತ್ರ ಸರಬರಾಜು ಮಾಡುವಂತಿಲ್ಲ. ಆತನಿಗೆ ಆತನ ನೆಲದಲ್ಲಾಗಲಿ ಅಥವಾ ಹೊರವಲಯದಲ್ಲಿ ಶಸ್ತ್ರಾಸ್ತ್ರ ಮಾರುವಂತಿಲ್ಲ.

ಕಳೆದ ಹತ್ತು ವರ್ಷಗಳಲ್ಲಿ ಅಜರ್ ಮಸೂದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವಂತೆ ವಿಶ್ವಸಂಸ್ಥೆಗೆ ನಾಲ್ಕು ಬಾರಿ ಪ್ರಸ್ತಾಪ ಸಲ್ಲಿಸಿದಂತಾಗಿದೆ. ಮಸೂದ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸುವಂತೆ ವಿಶ್ವಸಂಸ್ಥೆಯ ಮೂವರು ಖಾಯಂ ವಿಟೋ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಯುಕೆ ಮತ್ತು ಫ್ರಾನ್ಸ್ ಪ್ರಸ್ತಾಪ ಸಲ್ಲಿಸಿದೆ. ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಒಟ್ಟು 15 ದೇಶಗಳಿವೆ. ಮೂರು ಬಾರಿಯೂ ಅಜರ್ ಮಸೂದ್ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಚೀನಾ ಕ್ಯಾತೆ ತೆಗೆದಿತ್ತು. ನಾಲ್ಕನೇ ಬಾರಿಯ ಹೊಸ ಪ್ರಸ್ತಾಪಕ್ಕೆ ಚೀನಾದ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next