Advertisement

ಟ್ರಂಪ್ ಭೇಟಿ; ಅಮೆರಿಕ ನಿವಾಸಿಗಳು ಅತೀ ಹೆಚ್ಚು ಗೂಗಲ್ ಸರ್ಜ್ ಮಾಡಿದ್ದು ಯಾವ ವಿಷಯ ಗೊತ್ತಾ?

10:15 AM Feb 26, 2020 | Nagendra Trasi |

ನವದೆಹಲಿ/ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಂಪತಿ ಸೋಮವಾರ ಭಾರತಕ್ಕೆ ಭೇಟಿ ನೀಡಿದ್ದ ಬೆನ್ನಲ್ಲೇ ಅಮೆರಿಕ ನಿವಾಸಿಗಳು ಗೂಗಲ್ ಸರ್ಜ್ ನಲ್ಲಿ ಹುಡುಕಿರುವ ವಿಷಯ ಟ್ರೆಂಡಿಂಗ್ ಆಗಿರುವುದಾಗಿ ವರದಿ ತಿಳಿಸಿದೆ.

Advertisement

ಸೋಮವಾರ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುತ್ತಿದ್ದಂತೆಯೇ ಪ್ರವಾಸದ ಕುರಿತು ಹಲವು ವಿಷಯಗಳ ಬಗ್ಗೆ ಇಂಟರ್ನೆಟ್ ನಲ್ಲಿ ಶೋಧಿಸಲು ಆರಂಭಿಸಿದ್ದರಂತೆ. ಅದರಲ್ಲಿಯೂ ಮುಖ್ಯವಾಗಿ ಎರಡು ವಿಷಯಗಳ ಬಗ್ಗೆ ಗೂಗಲ್ ಮಾಡಿರುವುದಾಗಿ ವರದಿ ಹೇಳಿದೆ.

ಮೊದಲನೆಯದು What is India, ಎರಡನೇಯದು Where is India ಎಂಬುದಾಗಿ ಅಮೆರಿಕದ ನಿವಾಸಿಗಳು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದರು. ಇದು ಈ ವರ್ಷದ ಜನವರಿ ತಿಂಗಳಿಗೆ ಹೋಲಿಸಿದರೆ ಕಳೆದ ಎರಡು ದಿನದಲ್ಲಿ ಅತ್ಯಧಿಕ ಜನರು ಎರಡು ವಿಷಯಗಳ ಶೋಧ ನಡೆಸಿರುವುದಾಗಿ ವರದಿ ತಿಳಿಸಿದೆ.

ಇದರಲ್ಲಿಯೂ ಕುತೂಹಲದ ವಿಷಯ ಏನೆಂದರೆ ವಾಟ್ ಇಸ್ ಇಂಡಿಯಾ ವಿಷಯಕ್ಕಿಂತ ವೇರ್ ಇಸ್ ಇಂಡಿಯಾ ಎಂಬ ಬಗ್ಗೆ ಅಮೆರಿಕನ್ನರು ಹೆಚ್ಚಿನ ಆಸಕ್ತಿ ತೋರಿಸಿರುವುದಾಗಿ ಗೂಗಲ್ ಟ್ರೆಂಡಿಂಗ್ ಗ್ರಾಫ್ ಬಹಿರಂಗಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next