Advertisement

ದೇವರಿಗೆ ಏನನ್ನು ಸಮರ್ಪಿಸಬೇಕು?

07:12 PM May 10, 2019 | Sriram |

“ಯಾವನು ನನಗೆ ಎಲೆಯನ್ನಾಗಲಿ, ಹೂವನ್ನಾಗಲೀ, ಹಣ್ಣನ್ನಾಗಲೀ ಭಕ್ತಿಯಿಂದ ಕೊಡುವನೋ ಅದನ್ನು ನಾನು ಸ್ವೀಕರಿಸುತ್ತೇನೆ’ ಇದು ಪರಮಾತ್ಮನೇ ಹೇಳಿದ ಮಾತಂತೆ. ಪರಮಾತ್ಮನ ಈ ಮಾತಿನಂತೆ ಸಮರ್ಪಿಸುವ ವಸ್ತುವಾಗಲೀ, ಅದರ ಮೌಲ್ಯವಾಗಲೀ ಮುಖ್ಯವಲ್ಲ. ಬದಲಾಗಿ, ಸಮರ್ಪಿಸುವಾಗಿನ ಭಕ್ತಿ,ಭಾವ ಮುಖ್ಯ.

Advertisement

ಭಕ್ತಿಯಿಂದ ಎಷ್ಟೇ ಚಿಕ್ಕ ವಸ್ತುವನ್ನು ಸಮರ್ಪಿಸಿದರೂ ಅದು ದೇವರಿಗೆ ಸಲ್ಲುತ್ತದೆ. ಕೋಳೂರ ಕೊಡಗೂಸಿನ ಕಥೆಯಲ್ಲಿ ಶಿವ, ಪುಟ್ಟ ಬಾಲಕಿ ಸಮರ್ಪಿಸಿದ ಹಾಲನ್ನು ಸ್ವೀಕರಿಸುತ್ತಾನೆ. ರಾಮಾಯಣದ ಶಬರಿ ಕಚ್ಚಿ ನೀಡಿದ ಹಣ್ಣು ಶ್ರೀರಾಮನಿಗೆ ಪ್ರಿಯವಾಯ್ತು . ವಿದುರನ ಮನೆಯ ಕುಡುತೆ ಹಾಲಿನಿಂದ ಶ್ರೀಕೃಷ್ಣ ತೃಪ್ತಿಪಟ್ಟ. ಕಣ್ಣಪ್ಪನ ಮುಗ್ಧ ಭಕ್ತಿಯ ಸಮರ್ಪಣೆಗೆ ಶಿವ ಮೆಚ್ಚಿದ. ಕುಚೇಲ ನೀಡಿದ ಮುಷ್ಟಿ ಅವಲಕ್ಕಿ ನವನೀತ ಚೋರನ ಹೊಟ್ಟೆತಣಿಸಿತು. ರಾತ್ರಿಯಿಡೀ ನಿರುದ್ದಿಶ್ಯವಾಗಿ ಕಿತ್ತು ಹಾಕುತ್ತಿದ್ದ ಬಿಲ್ವದೆಲೆಯಿಂದ ರುದ್ರ ಪ್ರಸನ್ನನಾದ. ಇಂಥ ಅದೆಷ್ಟೋ ಕಥೆಗಳು ಪುರಾಣಗಳಲ್ಲಿ ಕೇಳಲು, ಓದಲು ಸಿಗುತ್ತವೆ. ಇವೆಲ್ಲಾ ಭಕ್ತಿಪೂರ್ವಕ ಸಮರ್ಪಣೆಯ ಮಹತ್ವವನ್ನು ಸಾರುತ್ತವೆ. ದೇವರಿಗೆ ನಾವೇನು ಕೊಡಲು ಸಾಧ್ಯ? ಆತ ಕೊಟ್ಟದ್ದನ್ನೇ ಮತ್ತೆ ಆತನಿಗೆ ನೀಡುತ್ತೇವೆ ಅಷ್ಟೇ…

Advertisement

Udayavani is now on Telegram. Click here to join our channel and stay updated with the latest news.

Next