Advertisement

ಹೌಡಿ ಮೋದಿ ಕಾರ್ಯಕ್ರಮದಿಂದ ಏನನ್ನು ನಿರೀಕ್ಷಿಸಬಹುದು ?

04:03 PM Sep 22, 2019 | keerthan |

ಮಣಿಪಾಲ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಅಮೇರಿಕಾದ ಹ್ಯೂಸ್ಟನ್ ನಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಶ್ವವೇ ಈ ಕಾರ್ಯಕ್ರಮದ ಮೇಲೆ ದೃಷ್ಟಿ ನೆಟ್ಟಿದೆ. ಈ ಸಂದರ್ಭದಲ್ಲಿ ‘ಉದಯವಾಣಿ’ ತನ್ನ ಓದುಗರಿಗೆ ಹೌಡಿ ಮೋದಿ ಕಾರ್ಯಕ್ರಮದಿಂದ ಏನನ್ನು ನಿರೀಕ್ಷಿಸಬಹುದು? ಎಂಬ ಪ್ರಶ್ನೆಯನ್ನು ಕೇಳಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

Advertisement

ಶಾಮ್ ನಾಯಕ್:  ಈ ಬಾರಿ ಮೋದಿಜಿ ತಮ್ಮ ಜೀವನದ ಇನ್ನೊಂದು ಅಚ್ಚರಿಯ ಗುಟ್ಟೊಂದು ಹೇಳಲಿದ್ದಾರೆ ಕಿರುತೆರೆಯ ಮೋಗ್ಲಿ ಧಾರವಾಯಿ ಅವರ ಬಾಲ್ಯದ ಜೀವನದ ಆಧಾರವಾಗಿ ಚಿತ್ರಿಸಲ್ಪಟ್ಟಿದ್ದು ಹಾಗು ಮೋದಿಜಿ ಜನನ ಅಮೆಝೋನ್ ಕಾಡಿನಲ್ಲಿ ಆಗಿದ್ದು ಎಂದು ತಮ್ಮ ಬಾಲ್ಯದ ನೆನಪಿನ ಬುತ್ತಿ ಬಿಚ್ಚಿಡುತ್ತಾರೆ

ನಾರಾಯಣ್ ದೇವಾಡಿಗ ಎಂ ಎಚ್:  ಇಂದು ಮೋದಿ ವಿಶ್ವದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸುತ್ತಿರುವುದು ನಮ್ಮಲ್ಲರಿಗೂ ಸಂತಸ ತರುವ ವಿಷಯ. ಆದರೆ ನಮ್ಮದೆ ದೇಶದ ಕೆಲವು ನಂಜು ಹುಳುಗಳು ಹಾಗು ವಿಷಜಂತುಗಳು ಕೊಳಕು ರಾಜಕೀಯವನ್ನು ಕಮೆಂಟ್ ಮೂಲಕ ಬರೆದು ತನ್ನ ತೆವಲನ್ನು ತೀರಿಸಿಕೊಳ್ಳುತ್ತಿರುವುದು ವಿಷಾದದ ಸಂಗತಿ. ನೀವು ವ್ಯೆಯುಕ್ತಿತವಾಗಿ ಅಥವಾ ರಾಜಕಿಯವಾಗಿ ಒಬ್ಬ ವ್ಯಕ್ತಿಯನ್ನು ವಿರೋಧಿಸಿ‌. ಆದರೆ ಆತ ಮಾಡಿರುವ ಜನಪರ ಕೆಲಸವನ್ನು ಹೀಯಾಳಿಸಬೇಡಿ, ನಿಂದಿಸಬೇಡಿ. ಮೋದಿ ಇಂದು ನಮ್ಮ ನಿಮ್ಮೆಲ್ಲರ ಪ್ರಧಾನಿಯಾಗಿ ಹಾಗೂ ನೂರಮೂವತ್ತು ಕೋಟಿ ಜನರ ಪ್ರತಿನಿಧಿಯಾಗಿ ಇಂದು ಅಮೇರಿಕಕ್ಕೆ ಭೇಟಿ ನೀಡಿದ್ದಾರೆ. ಆ ಭೇಟಿಯ ಲಾಭ ನಷ್ಟವನ್ನು ಈಗಲೇ ಲೆಕ್ಕಾಚಾರ ಮಾಡುತ್ತಿದ್ದರೆ ದೇಶ ಮುಂದುವರಿಯಲು ಅಸಾಧ್ಯ.

ಮಹೇಶ್ ಕರಡಿಗುಡ್ಡ:  ಸದ್ಯಕ್ಕೆ  ಉತ್ತರ ಕರ್ನಾಟಕಕ್ಕೆ ಪರಿಹಾರದ ನಿರೀಕ್ಷೆ

ದಯಾನಂದ ಕೊಯಿಲ:  ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಭಾರತದೊಳಗಿನ ಪರಿಸ್ಥಿತಿಯ ಅರಿವು ಇಲ್ಲ. ಭಾರತಕ್ಕೆ ಸಧ್ಯ ಬೇಕಾಗಿರುವುದು ಮಹಾನ್ ಯೋಜನೆಗಳಲ್ಲ ಬಿಗಡಾಯಿಸುತ್ತಿರುವ ಅಂತರ್ದೇಶೀಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕ್ಕೊಳ್ಳವ ನಿರ್ಧಾರಗಳು.

Advertisement

ಚಂದು ರೈ ಬಂಟ್ಸ್:  ಅಮೆರಿಕನ್ನರು ಹಾಗೂ ಭಾರತೀಯರ ನಡುವಣ ಮತ್ತಷ್ಟು ಬಾಂಧವ್ಯ ವೃದ್ಧಿಗೆ ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಇದೊಂದು ಸಿಹಿ ಸುದ್ದಿಯಾಗಬಹುದು . ಮೋದಿಯವರ ಕಾರ್ಯ ಸಾಧನೆಯಿಂದಾಗಿ ನಮ್ಮ ದೇಶವನ್ನು ನೆರೆಯ ದೇಶಗಳು ಗೌರವ ಸ್ಥಾನದಲ್ಲಿ ಇಟ್ಟಿರುವುದನ್ನು ಗಮನಿಸಿದರೆ ತುಂಬಾ ಸಂತೋಷವಾಗುತ್ತೆ.

ರಾಜೇಶ್ ಅಂಚನ್ ಎಂ ಬಿ: ಖಂಡಿತಾ ಒಳ್ಳೆಯದನ್ನು ನಿರೀಕ್ಷೇ ಮಾಡಬಹುದು. ಇಂದು ಭಾರತ ವಿಶ್ವದಲ್ಲಿ ಅಮೆರಿಕಕ್ಕೆ ಸೆಡ್ಡು ಹೊಡೆಯೋ ರೀತಿಯಲ್ಲಿ ಬೆಳೆದಿದೆ. ಒಬ್ಬ ವಿಶ್ವ ನಾಯಕನಾಗಿ ಅವರ ಭಾಷಣ ಮಹತ್ವದ್ದು. ಪಾಕ್ ಬೆಂಬಲಿತ ಭಯೋತ್ಪಾದನೆ ನಿರ್ಮೂಲನೆಯಲ್ಲಿ ಮೋದಿಜಿಯವರ ಭಾಷಣ ಒಂದು ಮೈಲುಗಲ್ಲಾಗುವ ನಿರೀಕ್ಷೆಯಿದೆ. ಭಾರತವನ್ನು ಒಂದು ಬಲಿಷ್ಠ ರಾಷ್ಟ್ರವಾಗಿ ಮಾಡಿರುವ ಮೋದಿಜಿ ಯವರ ಈ ಭಾಷಣ ಒಂದು ಮೈಲುಗಲ್ಲಾಗಲಿ.

ರಾಧಿಕ ಪ್ರಭು: ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿ ವಿಶ್ವ ಮಟ್ಟದಲ್ಲಿ ಇಂತಹ ಗೌರವ ಪಡೆಯುತ್ತಿದ್ದಾರೆ. ಇಡೀ ಜಗತ್ತು ಮೋದಿಯವರ ಸಲಹೆಗೆ ಕಾಯುತ್ತಿದೆ.

ಜೋಸೆಫ್ ರೋಡ್ರಿಗಸ್: ಹೌಡಿ ಮೋದಿ ಕಾರ್ಯಕ್ರಮದಿಂದ ದೇಶದ ಅರ್ಥ ವ್ಯವಸ್ಥೆ ಮೇಲೆತ್ತಲು ಸಾದ್ಯವೆ. ಅಥವಾ ಈ ಕಾರ್ಯಕ್ರಮಕ್ಕಾಗಿ ಇನ್ನಷ್ಟು ದುಂದುವೆಚ್ಚವೇ

Advertisement

Udayavani is now on Telegram. Click here to join our channel and stay updated with the latest news.

Next