Advertisement
ಸಾಮಾನ್ಯ ಜನರೂ ಉದ್ದಿಮೆದಾರರಾಗಲು ಅನುಕೂಲವಾಗುವಂಥ ನೀತಿಗಳನ್ನು ಕೇಂದ್ರ ರೂಪಿಸಲು ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಹತ್ತರಿಂದ ಹದಿನೈದು ಉದ್ದಿಮೆದಾರರ ಗುಂಪು ಗಳು ರಚನೆಯಾಗಬೇಕು. ಅವರು ಬ್ಯಾಂಕಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಗತ್ತಿನಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಅಧ್ಯಯನ ನಡೆಸಿ, ದೇಶದಲ್ಲಿಯೂ ಅದರ ಅನುಷ್ಠಾನ ಹೇಗೆ ನಡೆಯಬೇಕು ಎಂಬುದರ ಬಗ್ಗೆ ಸಲಹೆ ನೀಡಬೇಕು. ಜತೆಗೆ ನ್ಯೂನತೆಗಳು ಇದಲ್ಲಿ ಅದನ್ನು ಪ್ರಸ್ತಾವಿಸಿ, ಅದನ್ನು ಸರಿಪಡಿಸುವತ್ತಲೂ ಗಮನ ಹರಿಸಬೇಕು. ಇದರಿಂದಾಗಿ ಕೇಂದ್ರ ಸರಕಾರಕ್ಕೂ ನೀತಿಗಳನ್ನು ರೂಪಿಸಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಇಂಥ ಗುಂಪುಗಳಲ್ಲಿ ಶಿಕ್ಷಣ ಕ್ಷೇತ್ರದ ತಜ್ಞರು ಮತ್ತು ವಿಷಯ ತಜ್ಞರೂ ಸೇರಿ ಕೊಳ್ಳ ಬೇಕಾಗಿರುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ಜಾರಿಗೊಳಿಸಿದ ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ನೀಡಿಕೆ (ಪಿಎಲ್‌ಐ) ಯೋಜನೆಯಿಂದಾಗಿ ಹಳೆಯ ಉದ್ಯಮ ವಲಯದಲ್ಲಿ ಹೊಸ ಚೇತರಿಕೆ ಕಾಣುವಂತೆ ಮಾಡಿದೆ. ಜತೆಗೆ, “ಮೇಕ್ ಇನ್ ಇಂಡಿಯಾ’ ಯೋಜನೆಗೂ ಅನುಕೂಲವಾಗಿದೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಕೂಡ ಯಾವ ರೀತಿ ಹೊಸತನ ಅಳವಡಿಸಬಹುದು ಎಂಬ ಬಗ್ಗೆಯೂ ಪಾಟಿದಾರ್ ಸಮುದಾಯ ಚಿಂತನೆ ನಡೆಸಬೇಕು ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.