Advertisement

Yoga ಕಲಿಯುವುದಕ್ಕೆ ಮುನ್ನ ಗಮನಿಸಬೇಕಾದ್ದೇನು?

10:59 PM Jun 13, 2023 | Team Udayavani |

ಯೋಗ ಎಂಬುದು ಜೀವನ ಶೈಲಿ. ಮಹರ್ಷಿ ಪತಂಜಲಿ ಮುನಿಗಳು “ಯೋಗವನ್ನು ಯೋಗಃ ಚಿತ್ತ ವೃತ್ತಿ ನಿರೋಧಃ” ಎಂದು ಕರೆದಿದ್ದಾರೆ. ಅಂದರೆ ಮನಸ್ಸನ್ನು ತಮ್ಮ ನಿಯಂತ್ರಣದಲ್ಲಿ ಇಡುವ ಕಲೆ ಎಂದರ್ಥ. ಭಗವದ್ಗೀತೆಯಲ್ಲಿ “ಯೋಗಃ ಕರ್ಮಸು ಕೌಶಲಂ” ಎನ್ನಲಾಗಿದೆ. ಇದರರ್ಥ ಮಾಡುವ ಪ್ರತೀ ಕೆಲಸವನ್ನು ಮನಸ್ಸಿಗೆ ಕ್ಷೋಭೆಯನ್ನು ತರಿಸಿಕೊಳ್ಳದೇ ಕರ್ತವ್ಯ ಪ್ರಜ್ಞೆಯಿಂದ ನಿರ್ವಹಿಸುವುದು. ಸ್ವಾಮಿ ವಿವೇಕಾನಂದರು ಯೋಗವು ಮನುಷ್ಯನನ್ನು ಪರಿಪೂ ರ್ಣತೆಗೆ ಕೊಂಡೊಯ್ಯುವ ಕಲೆ ಎಂದು ಬಣ್ಣಿಸಿದ್ದಾರೆ. ಇವೆಲ್ಲದರ ಅರ್ಥ ಒಂದೇ ಮನಸ್ಸು ದೇಹವನ್ನು ಒಂದುಗೂಡಿಸುವ ಕ್ರಿಯೆ.

Advertisement

“ಸ್ಥಿರಂ ಸುಖಂ ಆಸನಂ” ಎಂಬಂತೆ ಆನಂದದಿಂದ ಆಸನಗಳನ್ನು ಅನುಭವಿಸಿ. ಪ್ರತೀ ಆಸನದ ಉಪಯೋಗ ತಿಳಿದುಕೊಳ್ಳಿ. ಯೋಗ ಶಿಕ್ಷಕರ ಮಾರ್ಗದರ್ಶನದಂತೆ ಕ್ರಮಬದ್ಧ ಉಸಿರಾಟದೊಂದಿಗೆ ಆಸನ ಅಭ್ಯಸಿಸಿ. ಇಲ್ಲದಿದ್ದರೆ ಅದು ಉಪಯೋಗ ಆಗುವುದಿಲ್ಲ. ವ್ಯಾಯಾಮ ಇಲ್ಲವೇ ಸರ್ಕಸ್‌ ಆಗುತ್ತದೆ

ಯೋಗ ಎನ್ನುವುದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡಿರುತ್ತಾರೆ. ಬೊಜ್ಜು ಕರಗಿಸುವ, ದೇಹದ ತೂಕ ಇಳಿಸಿಕೊಳ್ಳಲು ಮಾಡುವ ಆಸನ ಎಂದು ಭಾವಿಸಿರುತ್ತಾರೆ. ಇದು ತಪ್ಪು ಕಲ್ಪನೆ. ನಿರಂತರ ಯೋಗ ಅಭ್ಯಾಸದಿಂದ ಸ್ನಾಯುಗಳು ಬಲ ಗೊಳ್ಳುವುದರ ಜತೆಗೆ ಬುದ್ಧಿಶಕ್ತಿ, ಜ್ಞಾನ ಶಕ್ತಿ, ಮನೋಸಂಕಲ್ಪ ಏಕಾಗ್ರತೆ ವೃದ್ಧಿಸುತ್ತದೆ.

ನಾಲ್ಕು ಸ್ಥಿತಿಗಳಲ್ಲಿ ಆಸನಗಳು

ಆಸನಗಳನ್ನು 4 ಸ್ಥಿತಿಯಲ್ಲಿ ಮಾಡಲಾಗುತ್ತದೆ.
1.ನಿಂತುಕೊಂಡಿರುವ ಸ್ಥಿತಿ
2. ಕುಳಿತು ಅಭ್ಯಸಿಸುವುದು
3.ಬೋರಲಾಗಿ ಮಲಗಿರುವುದು
4.ಸಹಜವಾಗಿ ಮಲಗಿದ ದೇಹ ಸ್ಥಿತಿಯಲ್ಲಿ ಮಾಡುವ ಆಸನ

Advertisement

ಈ 4 ಭಂಗಿಯಲ್ಲಿ ನಿರ್ದಿಷ್ಟವಾಗಿ ಆಸನಗಳನ್ನು ಮಾಡಬೇಕಾಗುತ್ತದೆ.

ಕಲಿಕಾ ಕೇಂದ್ರಗಳ ಹಿನ್ನೆಲೆ ಗಮನಿಸಿ: ಮೊದಲು ಯೋಗ ಕೇಂದ್ರಗಳ ಇತಿಹಾಸ, ಹಿನ್ನೆಲೆ ಗಮನಿಸಿ. ಅಲ್ಲಿ ಕಲಿಸುವವರು ತಜ್ಞ ಯೋಗ ಶಿಕ್ಷಕರೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ದೈಹಿಕ ನ್ಯೂನತೆ, ಕಾಯಿಲೆಗಳಿದ್ದರೆ ಮರೆಮಾಚಬೇಡಿ. ಮೊದಲು ಅವುಗಳ ಬಗ್ಗೆ ಯೋಗ ಶಿಕ್ಷಕರ ಜತೆ ಸಮಾಲೋಚಿಸಿ. ವೈದ್ಯರು ಹಾಗೂ ರೋಗಿಗಳು ಹೊಂದಿರುವ ರೀತಿ ಯೋಗ ಶಿಕ್ಷಕರ ಜತೆ ಸೌಹಾರ್ದ ಸಂಬಂಧವಿರಲಿ. ಬಳಿಕ ಯೋಗ ಕಲಿಯಲು ಆರಂಭಿಸಿ.

ಉದಾಹರಣೆಗೆ ಮಧುಮೇಹ, ರಕ್ತದೊತ್ತಡ, ತಲೆ ಸುತ್ತುವುದು, ಸ್ಲಿಪ್‌ ಡಿಸ್ಕ್, ಹೃದಯ ಸಂಬಂಧಿ ಕಾಯಿಲೆ, ಬೆನ್ನುಹುರಿ, ಸೊಂಟನೋವು, ಥೈರಾಯx… ಮತ್ತಿತರ ಅನಾರೋಗ್ಯ ಸೇರಿದಂತೆ ಶಸ್ತ್ರಚಿಕಿತ್ಸೆ ನಡೆದಿದ್ದರೆ ಅವುಗಳನ್ನು ಯೋಗ ಶಿಕ್ಷಕರ ಗಮನಕ್ಕೆ ತನ್ನಿ. ಪ್ರತೀ ಕಾಯಿಲೆಗಳ ನಿವಾರಣೆಗೆ ನಿರ್ದಿಷ್ಟ ಆಸನಗಳು ಇರುತ್ತವೆ. ಇವುಗಳ ಮೇಲೆ ಯೋಗ ಶಿಕ್ಷ ಕರು ವಿಶೇಷ ಒತ್ತು ನೀಡಲು ಸಲಹೆ ನೀಡುತ್ತಾರೆ. ಅವರು ಹೇಳುವುದನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ವಿಧಾನದಲ್ಲಿ ಕ್ರಮಬದ್ಧವಾಗಿ ಯೋಗಾಸನ ಪ್ರಾರಂಭಿಸಿ.

ಆಸನ ಮಾಡುವ ವಿಧಾನ: ಸೂರ್ಯ ನಮಸ್ಕಾರ ಮಾಡುವಾಗ 12 ಹಂತದ ಆಸನಗಳಿರುತ್ತವೆ. (ಕೆಲವು ಗುರು ಪರಂಪರೆಗಳಲ್ಲಿ 10 ಆಸನಗಳು ಇರುತ್ತವೆ) ಪ್ರತೀ ಹಂತದ ಆಸನವನ್ನು ಕ್ರಮಬದ್ಧ ಉಸಿರಾಟದೊಂದಿಗೆ ಮಾಡಿ. ಪ್ರಾರಂಭದಲ್ಲಿ ತಪ್ಪಾಗಿ ಅರ್ಥೈಸಿಕೊಂಡರೆ ಸರಿಯಲ್ಲದ ಕ್ರಮದಲ್ಲಿ ಆಸನ ಮಾಡಿದರೆ ಯೋಗ ಶಿಕ್ಷಕರೇ ನಿಮ್ಮ ಹತ್ತಿರ ಬಂದು ಸರಿಪಡಿಸುತ್ತಾರೆ. ಮೊದಲು ಸಾಧ್ಯವಾದಷ್ಟು ಭಂಗಿಯಲ್ಲಿ ಮಾತ್ರ ಆಸನ ಮಾಡಿ. ಗುಂಪುಗಳಲ್ಲಿ ಮಾಡುವಾಗ ಬೇರೆಯವರನ್ನು ಅನುಸರಿಸಬೇಡಿ. ನಿಮ್ಮ ಸಾಮ ರ್ಥ್ಯಕ್ಕೆ ಅನುಗುಣವಾಗಿ ಆಸನ ಪ್ರಾರಂಭಿಸಿ.

ಪ್ರಾಣಾಯಾಮ ಅಭ್ಯಸಿಸುವ ವಿಧಾನ
ಪ್ರಾಣಾಯಾಮ ಎಂದರೆ ಉಸಿರಾಟದ ಮೂಲಕ ಪ್ರಾಣಶಕ್ತಿಯನ್ನು ವೃದ್ಧಿಸಿಕೊಳ್ಳುವ ಕ್ರಿಯೆ. ಉಸಿರಾಟದ ವೇಗವನ್ನು ತಗ್ಗಿಸಲು ಪ್ರಾಣಾಯಾಮ ಸಹಕಾರಿ. ಈ ಅಭ್ಯಾಸದಿಂದ ಉಸಿರಾಟ ಗಾಢವಾಗಿ ನಿಧಾನ ಆಗುತ್ತಿದ್ದಂತೆ ಮನಸ್ಸಿನ ಕ್ಷೋಭೆಗಳು ತೊಡೆದು ಹೋಗಿ ಮನಸ್ಸು ಪ್ರಶಾಂತವಾಗುತ್ತದೆ. ಸರಿಯಾದ ಮಾರ್ಗದರ್ಶನದಲ್ಲಿ ಕ್ರಮಬದ್ಧವಾಗಿ ಕಲಿಯಬೇಕು. ನಿಮ್ಮ ಇತಿಮಿತಿ ಅರಿತು ಅಭ್ಯಸಿಸಬೇಕು. ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಪದ್ಮಾಸನ, ಸಿದ್ಧಾಸನ, ಸುಖಾಸನ ಹಾಗೂ ವಜ್ರಾಸನದ ಸ್ಥಿತಿಯಲ್ಲಿ ಮುದ್ರೆಗಳೊಂದಿಗೆ ಕ್ರಮಬದ್ಧ ಸ್ಥಿತಿಯಲ್ಲಿ ಇರಬೇಕು. ಅವಸರ ಪಡಬಾರದು. ಸಮಚಿತ್ತದಿಂದ ಆರಾಮವಾಗಿ ಅಭ್ಯಾಸ ಮಾಡಿ. ಇದರಿಂದ ಉಸಿರಾಟ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಕೆಲವರಿಗೆ ಬಹಳ ಕಾಲ ಧ್ಯಾನದ ಸ್ಥಿತಿಯಲ್ಲಿ ಇರಲು ಕಷ್ಟವಾಗುತ್ತದೆ. ಏಕೆಂದರೆ ಕಾಲು ಮಡಚಿ ಕುಳಿತುಕೊಳ್ಳುವ ಅಭ್ಯಾಸ ಇರುವುದಿಲ್ಲ. ಆಗ ಪ್ರಾಣಾಯಾಮ ಮಾಡು ವುದರಿಂದ ಪ್ರಯೋಜನ ಆಗುವುದಿಲ್ಲ. ಪ್ರತೀ ಬಾರಿ ಪ್ರಾಣಾಯಾಮ ಅಭ್ಯಾಸ ಮಾಡಿದ ಬಳಿಕ ಅದರ ಪ್ರಯೋಜನವನ್ನು ಆನಂದಿಸಿ.

ಎಂ.ಆರ್‌. ನಿರಂಜನ್‌

Advertisement

Udayavani is now on Telegram. Click here to join our channel and stay updated with the latest news.

Next