ಬೆಂಗಳೂರು: ಸಿಎಂ ಕಚೇರಿಯಲ್ಲಿ ಮಹತ್ವದ ಕಡತಗಳು ನಾಪತ್ತೆಯಾಗಿರುವುದಕ್ಕೆ ಯಾವ ಕಾರಣ ಹುಡುಕುತ್ತಿದ್ದೀರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಎಂದು ಕಾಂಗ್ರೆಸ್ ಟ್ವಿಟರ್‌ನಲ್ಲಿ ಕೆಣಕಿದೆ.
ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬೊಮ್ಮಾಯಿ ಅವರೇ ಕಡತಗಳನ್ನು ಇಲಿ ಕಚ್ಚಿಕೊಂಡು ಹೋಯಿತೇ? ಹೆಗ್ಗಣ ಹೊತ್ತುಕೊಂಡು ಹೋಯಿತೇ? ಇಲ್ಲವೆ ಗಾಳಿಯಲ್ಲಿ ಹಾರಿ ಹೋಯಿತೇ ಎಂದು ಪ್ರಶ್ನಿಸಿದೆ. ಉತ್ತರ ಪ್ರದೇಶದಲ್ಲಿ 500 ಕೆಜಿ ಗಾಂಜಾವನ್ನು ಇಲಿಗಳು ತಿಂದವಂತೆ! ನಿಮ್ಮದು “ಯುಪಿ ಮಾಡೆಲ್” ಅಲ್ಲವೇ, ನೀವೂ ಅದೇ ಕಾರಣ ಕೊಡುವಿರಾ ಎಂದು ವಾಗ್ಧಾಳಿ ನಡೆಸಿದೆ.
ಸಿಎಂ ಕಚೇರಿಯಲ್ಲಿರುವ ಲಂಚ ಮಂಚದ ಪರಿಣಾಮ ಮಹತ್ವದ ಕಡತಗಳೇ ನಾಪತ್ತೆಯಾಗುವ ಸ್ಥಿತಿ ಒದಗಿದೆ.
ಸಿಎಂ ಕಾರ್ಯದರ್ಶಿಯ ಹನಿಟ್ರ್ಯಾಪ್ ಪ್ರಕರಣವನ್ನು ಬಿಜೆಪಿ ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದರ ಹಿಂದಿನ ಅತಿದೊಡ್ಡ ಹಗರಣ ಇರುವುದು ನಿಶ್ಚಿತ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹನಿಟ್ರ್ಯಾಪ್‌ನಿಂದಾಗಿ ಇನ್ನೂ ಯಾವ ಅನಾಹುತಗಳು ಜರುಗಿವೆ ಎಂದು ಪ್ರಶ್ನಿಸಿದೆ.