Advertisement
ತಕ್ಷಣದ ಕಾರ್ಯಕ್ರಮಗಳುಮಳೆ ಕೊಯ್ಲು ಕಣ್ಣಾರೆ ಕಾಣಲು ಎಕ್ಸ್‌ಪೋಶರ್ ವಿಸಿಟ್: ಜಿಲ್ಲೆಯಲ್ಲಿ ಬೇರೆಬೇರೆ ವಿಧಾನಗಳಿಂದ ಮಳೆಕೊಯ್ಲು ಮಾಡಿ ಗೆದ್ದ ನೂರಾರು ಸಾಧಕರು ಹಳ್ಳಿ ಮತ್ತು ಪಟ್ಟಣ ಎರಡರಲ್ಲೂ ಇದ್ದಾರೆ. ಇವರ ಸಾಧನೆಯ ವಿವರ ಸಂಗ್ರಹಿಸಿ, ಅವರಲ್ಲಿಗೆ ಆಸಕ್ತ ನಾಗರಿಕರನ್ನು ಒಂದು ದಿನದ ಅಧ್ಯಯನ ಭೇಟಿಗೆ ಕರೆದೊಯ್ಯುವುದು ಒಳ್ಳೆಯ ಫಲಿತಾಂಶ ನಿರ್ದೇಶಿತ ಕಾರ್ಯಕ್ರಮವಾಗಬಹುದು. ಇದನ್ನು ಈ ಮಳೆಗಾಲದಲ್ಲೇ ಸತತವಾಗಿ, ವಾರಕ್ಕೊಮ್ಮೆ, ಬೇಕಿದ್ದರೆ ಭಾನುವಾರ ನಡೆಸಬಹುದು. ಇದನ್ನು ನಗರಪಾಲಿಕೆಗಳು ಮಾಡಬಹುದು, ಇನ್ನೂ ಚೆನ್ನಾಗಿ ಆಸಕ್ತ ಸರಕಾರೇತರ ಸಂಸ್ಥೆಗಳು ಮಾಡಬಹುದು. ಅಂಥ ಸಂಸ್ಥೆಗಳಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಅಥವಾ ನಗರಪಾ ಲಿಕೆಗಳು ಆರ್ಥಿಕ ಸಹಾಯ ಕೊಡಬಹುದು.
Related Articles
Advertisement
ದೃಢೀಕೃತ ಪ್ಲಂಬರುಗಳ ತರಬೇತಿ: ಚಾವಣಿ ನೀರನ್ನು ತೆರೆದ ಬಾವಿಗಿಳಿಸುವ ಕೆಲಸ ಈ ಬಗ್ಗೆ ತರಬೇತಿ ಪಡೆದ ಪ್ಲಂಬರುಗಳು ಮಾಡಲು ಸಾಧ್ಯ. ಚೆನ್ನೈ ಮತ್ತು ಬೆಂಗಳೂರು ಈ ರೀತಿಯ ದೃಢೀಕೃತ ಪ್ಲಂಬರುಗಳನ್ನು ಸಜ್ಜುಗೊಳಿಸಿ ಕೆಲಸ ಮುಂದುವರಿಸುತ್ತವೆ. ಉಡುಪಿ, ಮಂಗಳೂರು ಮತ್ತು ಜಿಲ್ಲೆಯ ಇತರ ಪೇಟೆ ಪಟ್ಟಣಗಳಿಂದ ನಗರ ಪಾಲಿಕೆ ಪ್ಲಂಬರುಗಳನ್ನು ಆಹ್ವಾನಿಸಿ ತರಬೇತಿ ಕೊಟ್ಟು ತಂಡ ಸಜ್ಜು ಗೊಳಿಸಿದರೆ ಚಾವಣಿ ನೀರಿನ ಮರುಪೂರಣ ಚುರುಕಾಗಿ ನಡೆದೀತು.
ಸಾಮೂಹಿಕ ಜಾಗೃತಿ ಕಾರ್ಯಕ್ರಮ – ತರಬೇತುದಾರರ ತರಬೇತಿ: ಜಿಲ್ಲೆಯಲ್ಲಿ ಯಾವುದೇ ಸಬ್ಸಿಡಿಗೆ ಕಾಯದೆ ಮಳೆಕೊಯ್ಲು ಮಾಡಲು ತಯಾರಿರುವ ದೊಡ್ಡ ಜನಸಮೂಹ ಇರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಇದರಲ್ಲಿ ಹಲವರಿಗೆ ಸರಿಯಾದ ಮಾರ್ಗದರ್ಶನ ಇಲ್ಲ. ಇಂಥವರಿಗೆ ಮಾರ್ಗದರ್ಶನ ಕೊಡಲಿಕ್ಕಾಗಿಯೇ ಮಳೆಕೊಯ್ಲಿನ ತರಬೇತಿದಾರರನ್ನು ತಯಾರು ಮಾಡಬೇಕಿದೆ. ತೆರೆದ ಬಾವಿ ಮರು ಪೂರಣಕ್ಕಿಂತ ಸಂಕೀರ್ಣ ಮತ್ತು ನೈಪುಣ್ಯ ಬೇಡುವ ಕೊಳವೆಬಾವಿ ಮರುಪೂರಣದಲ್ಲೂ ಇವರಿಗೆ ತರಬೇತಿ ಕೊಡಬಹುದು. ತರಬೇತಿ ಸ್ವಲ್ಪ ದೀರ್ಘಾವಧಿಯದ್ದಾಗಿ ಪ್ರಾತ್ಯಕ್ಷಿಕೆ, ಕ್ಷೇತ್ರ ಭೇಟಿ ಅಲ್ಲದೆ ಮಾಡಿ ಗಳ ಜತೆ ಬೇಡಿಗಳನ್ನೂ ಸವಿವರವಾಗಿ ತಿಳಿಸಿಕೊಡುವಂತಿರಬೇಕು.
ನಗರ ನೆರೆ ನಿಯಂತ್ರಣ ಮತ್ತು ಇಂಗುಬಾವಿ ನಿರ್ಮಾಣ: ಓಡುವ ಮಳೆನೀರನ್ನು ಇಂಗಿಸಲುಇಕ್ಕಾಗಿಯೇ ಮಾಡುವ ಇಂಗು ಬಾವಿ ( ರೀಚಾರ್ಜ್ ವೆಲ್) ಗಳು ಜಿಲ್ಲೆಗೆ ಒಳ್ಳೆಯ ಕೊಡುಗೆ ಕೊಡ ಬಲ್ಲವು. ಕನಿಷ್ಠ ಮೂರು ಅಡಿ ವ್ಯಾಸದಿಂದ (ಶಿಫಾರಸು ಮಾಡುವ ಆಳ, ಹೆಚ್ಚಿನ ಪ್ರಯೋಜನಕ್ಕೆ 20 ಅಡಿ) ಆಯಾ ಜಾಗದ ಅಗತ್ಯ ಹೊಂದಿ, ಸ್ಥಳಸಂಕೋಚ ಇರುವಲ್ಲಿ ಮಳೆನೀರ ಚರಂಡಿಯಲ್ಲೂ ಇವನ್ನು ನಿರ್ಮಿಸಬಹುದು. ಮಳೆ ಬಂದಾಗ ಎರಡಿಂಚಿನಿಂದ ಹೆಚ್ಚು ನೀರು ಹರಿದೋಡುವ ಚರ್ಚ್, ದೇಗುಲ, ಕಾಲೇಜು, ಕಮರ್ಶಿ ಯಲ್ ಕಾಂಪ್ಲೆಕ್ಸುಗಳಲ್ಲಿ ಇವನ್ನು ಮಾಡಬಹುದು. ಕಡಿಮೆ ಸಮಯ ದಲ್ಲ್ಲಿ ಹೆಚ್ಚು ಮಳೆನೀರನ್ನು ಭೂಮಿಗೆ ಸೇರಿಸು ವುದ ರಲ್ಲಿ ಇಂಗು ಬಾವಿಯಷ್ಟು ಸಮರ್ಥ ರಚನೆ ಬೇರೆ ಇಲ್ಲ. ಆದರೆ ಜಾಗದ ಆಯ್ಕೆ, ಸದಾ ಮುಚ್ಚಳ ಹಾಕಿ ಇಟ್ಟಿರುವುದು, ತುಂಬಲು ಒಳ್ಳೆ ಪ್ರಮಾಣದ ನೀರಿದೆಯೇ ಎಂದು ಖಚಿತ ಪಡಿಸಿಕೊಳ್ಳುವುದು ಮುಖ್ಯ.
ಶಾಲೆಯಲ್ಲಿ ನೆಲಜಲ ಸಂರಕ್ಷಣೆಯ ಚಟುವಟಿಕೆ – ಶಾಲಾವನ: ಪ್ರಕೃತಿಯಲ್ಲಿ ಜಲಲಭ್ಯತೆ ವೃದ್ಧಿಸಿ ಜನಜೀವನ ಸುಗಮ ವಾಗಿಸ ಬೇಕಾದರೆ ನೀರು ಮಾತ್ರವಲ್ಲ, ಮಣ್ಣು ಮತ್ತು ಅರಣ್ಯದ ( ಜಲ್, ಜಮೀನ್ ಮತ್ತು ಜಂಗಲ್) ಸಂರಕ್ಷಣೆ ಒಟ್ಟಾಗಿ ಮಾಡಬೇಕಿದೆ. ಈ ಬಗ್ಗೆ ಪ್ರಾಥಮಿಕ ಪಾಠವನ್ನು ಎಳವೆಯಿಂದಲೇ ಶಾಲಾ ಪಾಠ ದಲ್ಲೂ, ಪಾಠೇತರ ಚಟುವಟಿಕೆಗಳಲ್ಲೂ ಸೇರಿಸಬೇಕು. ಪ್ರತಿ ಶಾಲೆಯಲ್ಲಿ ಒಂದು ಪುಟ್ಟ ಶಾಲಾವನ, ಫಲವೃಕ್ಷ ವನ ಮತ್ತು ನೀರಿಂಗಿ ಸುವ ಚಟು ವಟಿಕೆಯನ್ನು ಕಡ್ಡಾಯವಾಗಿ ಮಾಡುವಂತೆ ನಿಯಮ ರೂಪಿಸಬೇಕು. (ಕೇರಳದ ತ್ರಿಶೂರಿನ ಕೊಡುಂಗಲ್ಲೂರು ಪಂ. ಎರಡು ಗಿಡ ನೆಡದೆ ಹೊಸ ಮನೆಗೆ ಲೈಸೆನ್ಸ್ ಕೊಡಲಾಗದು ಎನ್ನುವ ನಿಯಮ ತಂದಿದೆ.)
ದೀರ್ಘಾವಧಿಯ ಕಾರ್ಯಕ್ರಮಗಳುಜಿಲ್ಲೆಯಲ್ಲೊಂದು ಮಳೆ ಕೇಂದ್ರದ ( ರೈನ್ ಸೆಂಟರ್) ಸ್ಥಾಪನೆ: ಈ ಕೇಂದ್ರ ಸರಕಾರಿ ಮತ್ತು ಖಾಸಗಿ ರಂಗದ ಜಂಟಿ ಆಡಳಿತದಡಿ ಇರಬೇಕು. ಜಿಲ್ಲೆಯಲ್ಲಿ ಮಾಡಬಹುದಾದ ನೀರಿಂಗಿಸುವ, ನೆಲ ಜಲಸಂರಕ್ಷಣೆಯ ಎಲ್ಲ ಮಾದರಿಗಳು ( ಪ್ರತಿಕೃತಿಗಳು), ಮಾಡುವ ವಿಧಾನ, ಯಶೋಗಾಥೆ ಸಾಧಿಸಿದವರ ವಿವರ, ಸಂಪರ್ಕ ವಿಳಾಸ ಇತ್ಯಾದಿಗಳ ಬಗ್ಗೆ ಬಹುಮಾಧ್ಯಮ ದಾಖಲಾತಿ, ಬಂದ ಆಸಕ್ತರಿಗೆ ಏಕದಿನದ ತರಬೇತಿ ಕೊಡುವಂತಹ ವ್ಯವಸ್ಥೆ ಒಳಗೊಂಡಿರಬೇಕು. ಒಟ್ಟಿನಲ್ಲಿ ಮಳೆಕೊಯ್ಲು, ನೆಲಜಲ ಸಂರಕ್ಷಣೆಯ ಬಗ್ಗೆ ಏಕ ಕೇಂದ್ರ ಮಾಹಿತಿ ವ್ಯವಸ್ಥೆ ಇಲ್ಲಿರಬೇಕು. ನಗರಗಳಲ್ಲಿ ಶುಚೀಕರಣ, ಚರಂಡಿಯಲ್ಲೇ ನೀರಿಂಗಿಸುವಿಕೆ: ಮಳೆ ನೀರು ಹೊರಹೋಗಲು ಕಾಂಕ್ರೀಟಿನ ಮಳೆಚರಂಡಿ ( ಸ್ಟಾರ್ಮ್ ವಾಟರ್ ಡ್ರೈನ್) ಮಾಡುವಾಗ ನಿಗದಿತ ದೂರದಲ್ಲಿ ಮಳೆನೀರು ಅಲ್ಲಲ್ಲೇ ಇಂಗುವಂತೆ ಕಸಕಡ್ಡಿ ದೂರದಲ್ಲಿ ತಡೆದು ಕಾರ್ಯ ಕ್ಷಮ ವಾಗುವ ರೀತಿಯ ಇಂಗು ಗುಂಡಿಗಳ ನಿರ್ಮಾಣವನ್ನು ನಿಯ ಮದ ರೂಪದಲ್ಲಿ ಜ್ಯಾರಿಗೆ ತರ ಬೇಕು. ಇದರಿಂದ ಆಯಾಯಾ ಪ್ರದೇಶದ ಹೆಚ್ಚುವರಿ ಮಳೆನೀರನ್ನು ದೂರಕ್ಕೆ ಕಳಿಸುವ ಜತೆಯಲ್ಲೇ ಗಣ ನೀಯ ಪ್ರಮಾಣದ ನೀರು ಇಂಗುವಂತೆ ಆಗಬಹುದು. ಯಾವುದೇ ಕಾರಣಕ್ಕೆ ಕೊಳಚೆ, ಮಲಿನ ನೀರು ಇದಕ್ಕೆ ಸೇರದಂತೆ ಜಾಗೃತಿ ತರಬೇಕು. -ಶ್ರೀಪಡ್ರೆ, ಜಲತಜ್ಞರು