Advertisement

ನೀವು ಹಣ ವರ್ಗಾಯಿಸುತ್ತಿರುವ ಯುಪಿಐ ವ್ಯವಸ್ಥೆಯ ಬಗ್ಗೆ ನಿಮಗೆಷ್ಟು ಗೊತ್ತು.? ಈ ಲೇಖನ ಓದಿ  

10:29 AM Apr 11, 2021 | |

ನವ ದೆಹಲಿ : ನಮ್ಮಲ್ಲಿ ಅದೆಷ್ಟೊ ಮಂದಿ  ಫೋನ್ ಪೇ , ಪೇಟಿಎಂ, ಭೀಮ್ ಆ್ಯಪ್‌, ಮೊಬಿ ಕ್ವಿಕ್, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್,  ಎಸ್​ಬಿಐ ಪೇ, ಗೂಗಲ್ ಪೇ,  ಬಿಓಬಿ ಯುಪಿಐ,  ಆ್ಯಕ್ಸಿಸ್ ಪೇ,  ಉಬರ್ ಆ್ಯಪ್ ಗಳನ್ನು ಮನಿ ಟ್ರಾನ್ಸಾಕ್ಶನ್ ಗಾಗಿ ಬಳಸುತ್ತಾರೆ. ಆದರೇ, ಅವುಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎನ್ನುವುದರ ಬಗ್ಗೆ ನಮಗೆ ಅಷ್ಟಾಗಿ ಜ್ಞಾನ ಇಲ್ಲ.

Advertisement

ಹೌದು, ಮೇಲೆ ಉಲ್ಲೇಖಿಸಿರುವ ಹತ್ತು ಮನಿ(ಹಣ) ಟ್ರಾನ್ಸಾಕ್ಶನ್ ಆ್ಯಫ್ ಗಳು ಭಾರತದ ಪ್ರಮುಖ ಸ್ಥಾನದಲ್ಲಿರುವ ಯುಪಿಐ ಆ್ಯಪ್ ಗಳು. ಹಾಗಾದರೇ, ಯುಪಿಐ ಅಂದರೇ ಏನು..? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದರ ಬಗ್ಗೆ ಸಂಕ್ಷಿಪ್ತವಾಗಿ ನಾವು ಇಲ್ಲಿ ವಿವರಣೆ ಕೊಟ್ಟಿದ್ದೇವೆ.

ಓದಿ : ತಮಿಳುನಾಡು ಬಿಜೆಪಿ ಅಭ್ಯರ್ಥಿ, ಮಾಜಿ ಐಪಿಎಸ್ ಅಣ್ಣಾಮಲೈಗೆ ಕೋವಿಡ್, ಆಸ್ಪತ್ರೆಗೆ ದಾಖಲು

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ ಪಿ ಸಿ ಐ) ಅಭಿವೃದ್ಧಿಪಡಿಸಿದ ಆರ್​ ಬಿ ಐ ನಿಯಂತ್ರಣದಲ್ಲಿರುವ ಯುನಿಫೈಡ್ ಪೇಮೆಂಟ್ಸ್​ ಇಂಟರ್ ​ಫೇಸ್ (ಯುಪಿಐ) ಒಂದು ಹಣ ಪಾವತಿ ವ್ಯವಸ್ಥೆಯಾಗಿದೆ.

ದೇಶ ದಿಜಿಟಲೀಕರಣದತ್ತ ಸಾಗುತ್ತಿದೆ. ಈ ಕಾರಣದಿಂದ ನಿಮ್ಮ ಸ್ಮಾರ್ಟ್ ​ಫೋನ್​ಗಳು ನಿಮ್ಮ ಡೆಬಿಡ್​ ಕಾರ್ಡ್​ಗಳಾಗಿಯೂ ಬದಲಾಗುತ್ತಿವೆ. ಭಾರತ್ ಕ್ಯೂ ಆರ್​ ಕೋಡ್​ ಮೂಲಕ ನೀವು ನಿಮ್ಮ ದೈನಂದಿನ ಹಣಕಾಸಿನ ವ್ಯವಹಾರವನ್ನು ಸುಲಭವಾಗಿ ಮಾಡಬಹುದು. IMPS, NEFT ಗಿಂತ ವೇಗವಾಗಿ ಇಲ್ಲಿ ಯಾವಾಗ ಬೇಕಾದರೂ ಹಣವನ್ನು ವರ್ಗಾಯಿಸಬಹುದು. ಹೌದು, ನಾವು ಇಂದು ಅಂಗೈ ಯೊಳಗೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿದ್ದೇವೆ.

Advertisement

ಡಿಜಿಟಲ್ ವ್ಯಾಲೆಟ್ ಅಥವಾ ಕ್ರೆಡಿಟ್, ಡೆಬಿಟ್ ಕಾರ್ಡ್ ಇಲ್ಲದೆಯೇ ಆನ್​ ಲೈನ್​ ಮೂಲಕವೂ ಸುಲಭವಾಗಿ ಹಣವನ್ನು ಪಾವತಿ ಮಾಡುವ ಸುಲಭ ಸಾಧನವೇ ಯುಪಿಐ.

ಯುಪಿಐ ಎನ್ನುವುದು ಒಂದು ಮೊಬೈಲ್ ಅಪ್ಲಿಕೇಷನ್​ ನಲ್ಲಿ ಹಲವಾರು ಬ್ಯಾಂಕ್​ ಖಾತೆಗಳನ್ನು ನೋಂದಾಯಿಸಿ ಹಣವನ್ನು ವರ್ಗಾವಣೆ ಮಾಡಲು ಇರುವ ಡಿಜಿಟಲ್ ಮನಿ ಟ್ರಾನ್ಸಫರಿಂಗ್ ಆ್ಯಪ್‌​.

ನೆರವಾಗಿ ನಾವು ಬ್ಯಾಂಕ್ ಗೆ ತೆರಳಿ ಹಣ ವರ್ಗಾಯಿಸುವುದಂದರೇ, ಒತ್ತಡದ ಬದುಕಿನಲ್ಲಿ ಒಂದು ರೀತಿಯಲ್ಲಿ ಬೇಡದ ಕೆಲಸವಾಗಿ ಬಿಟ್ಟಿದೆ. ಬ್ಯಾಂಕಿನಲ್ಲಾದರೇ, ಖಾತೆದಾರರ ವಿವರಗಳನ್ನು ಚಲನ್​ ನಲ್ಲಿ ಭರ್ತಿ ಮಾಡಬೇಕು. ಅಲ್ಲದೇ ಹಣ ಸ್ವೀಕರಿಸುವವರು ಬೇರೆ ಬ್ಯಾಂಕ್​ ಹೊಂದಿದ್ದರೆ, ಹಣ ತಲುಪಲು ಒಂದು ದಿನವಾದರೂ ಬೇಕಾಗುತ್ತದೆ. ಆದರೆ ಯುಪಿಐನಲ್ಲಿ ಖಾತೆದಾರರ ಫೋನ್​ ನಂಬರ್​ ಇದ್ದರೆ ಸಾಕು. ಅವರ ಬಳಿಯೂ ಯುಪಿಐ ಆ್ಯಪ್‌​ ಇದ್ದರೆ ಸುಲಭದಲ್ಲಿ ಹಣವನ್ನು ಕಳುಹಿಸಬಹುದು.

ಹಾಗಾಗಿ, ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಯುಪಿಐ ವ್ಯವಸ್ಥೆಗೆ ತೊಡಗಿ ಕೊಳ್ಳುತ್ತಿದ್ದು,  1 ಲಕ್ಷದ ವರೆಗೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ ದಿನವೊಂದಕ್ಕೆ ಯುಪಿಐ ಮೂಲಕ ಹಣ ವರ್ಗಾಯಿಸಬಹುದಾದ ಅವಕಾಶವನ್ನು ಒದಗಿಸಿ ಕೊಡುತ್ತಿದೆ.

ಓದಿ : ಶೋಫಿಯಾನ್ ನಲ್ಲಿ ಎನ್ ಕೌಂಟರ್: ಮೂವರು ಉಗ್ರರ ಹತ್ಯೆಗೈದ ಭದ್ರತಾ ಪಡೆಗಳು

Advertisement

Udayavani is now on Telegram. Click here to join our channel and stay updated with the latest news.

Next